ಜೂ.7ರಂದು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಸನಗೌಡ ಬಾದರ್ಲಿ ಅಧಿಕಾರ ಸ್ವೀಕಾರ
ಬೆಂಗಳೂರು, ಜೂನ್ 04 : ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಿಂಧನೂರಿನ ಬಸನಗೌಡ ಬಾದರ್ಲಿ ಅವರು ಇದೇ ಜೂನ್ 07ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜೂನ್ 07ರಂದು ಬುಧವಾರ ಬೆಳಗ್ಗೆ 09 ಗಂಟೆಗೆ ಬಸನಗೌಡ ಬಾದರ್ಲಿ ಅವರು ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.[ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಸವನ ಗೌಡ ಬಾದರ್ಲಿ]

ರಾಜ್ಯಾದ್ಯಂತ ಇತ್ತೀಚೆಗಷ್ಟೇ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿತ್ತು. ಇನ್ನು ಅಧ್ಯಕ್ಷ ಸ್ಥಾನ ಸೇರಿದಂತೆ ರಾಜ್ಯ ಪದಾಧಿಕಾರಿಗಳ ಆಯ್ಕೆಗೆ ನಗರದ ಅರಮನೆ ಮೈದಾನದಲ್ಲಿ ಮತದಾನ ನಡೆದಿತ್ತು.
ಇದರಲ್ಲಿ ಭರ್ಜರಿ 9ಸಾವಿರ ಮತಗಳ ಅಂತರದಲ್ಲಿ ಬಸವನಗೌಡ ಬಾದರ್ಲಿ ಜಯ ಸಾಧಿಸಿದ್ದರು. ಇನ್ನು ಉಪಾಧ್ಯಕ್ಷರಾಗಿ ಕೆಂಪರಾಜ್, ಅಮೃತ್, ರಾಜೇಂದ್ರ ಹಾಗೂ ಮಹಿಳಾ ವಿಭಾಗದ ಮೀಸಲಾತಿಯಲ್ಲಿ ಸಾಮಿಯಾ ತಬ್ರೇಜ್ ಆಯ್ಕೆಯಾಗಿದ್ದಾರೆ.
ಒಟ್ಟು 8 ಜನ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅಮೃತಾಗೌಡ, ಬಸವನಗೌಡ ಬಾದರ್ಲಿ, ಉಮೇಶ್ ಬೋರೇಗೌಡ, ಬೈರೇಗೌಡ, ರಾಜೇಂದ್ರ, ಶಿವಕುಮಾರ್, ಕೆಂಪರಾಜ್, ಪುಷ್ಪಲತಾ, ಸಾಮಿಯ ತಬರೇಜ್ ಕಣದಲ್ಲಿದ್ದರು. ಇವರಲ್ಲಿ ಶಾಸಕ ಕೆ.ಎಸ್ ರಾಜಣ್ಣ ಪುತ್ರ ಆರ್. ರಾಜೇಂದ್ರ ಹಾಗೂ ಬಸವನಗೌಡ ಬಾದರ್ಲಿ ಮಧ್ಯೆ ರಾಜ್ಯಾಧ್ಯಕ್ಷ ಹುದ್ದೆಗೆ ಪೈಪೋಟಿ ನಡೆದಿತ್ತು.












Click it and Unblock the Notifications