ಮಳೆ.. ಮಳೆ.. ಮುಂಗಾರು ಮಳೆ ಜೂನ್ 7ಕ್ಕೆ ಎಂಟ್ರಿ!

ಮಳೆ ಇಲ್ಲದೆ ಬೆಳೆ ಕಳೆದುಕೊಳ್ಳುವ ಹಂತಕ್ಕೆ ಬಂದು ಚಿಂತೆಯಲ್ಲಿ ಮುಳುಗಿದ್ದ ಕನ್ನಡಿಗರ ನಾಡಿನ ರೈತರಿಗೆ ಭರ್ಜರಿ ಸುದ್ದಿ ಈಗ ಸಿಕ್ಕಿದೆ. ಅದು ಏನಂದ್ರೆ ಕರ್ನಾಟಕದಲ್ಲಿ ಮಳೆ ಭಾರಿ ಆರ್ಭಟ ತೋರಿಸುತ್ತಿದ್ದು, ಇದರ ಜೊತೆಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಮುಂಗಾರು ಮಳೆಯ ಆಗಮನಕ್ಕೆ ಕಾದು ಕೂತಿದ್ದ ಕನ್ನಡಿಗರಿಗೆ ಈಗ ಖುಷಿಯೋ ಖುಷಿ ಆಗುತ್ತಿದೆ. ಕೆಲವೇ ದಿನಗಳಲ್ಲಿ ಕರ್ನಾಟಕದ ನೆಲಕ್ಕೂ ಮುಂಗಾರು ಮಾರುತಗಳು ಎಂಟ್ರಿ ಕೊಡಲಿವೆ!

ಮಳೆ ಇಲ್ಲದೆ ಕನ್ನಡಿಗರು ಪರದಾಡುವ ಸಮಯದಲ್ಲಿ ಮಳೆರಾಯ ಕರುಣೆ ತೋರಿಸಿ ಮಳೆ ಸುರಿಸುತ್ತಿದ್ದಾನೆ. ಅದ್ರಲ್ಲೂ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಭರ್ಜರಿ ಮಳೆ ಆಗುತ್ತಿದೆ. ಇದೇ ಸಮಯದಲ್ಲಿ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಕೂಡ ಏರಿಕೆ ಕಾಣುತ್ತಿದ್ದು, ಕಾವೇರಿ ನದಿಗೆ ಕಟ್ಟಿರುವ ಡ್ಯಾಂಗಳಲ್ಲಿ ಕೂಡ ಭರ್ಜರಿ ನೀರು ಶೇಖರಣೆ ಆಗುತ್ತಿದೆ. ಮತ್ತೊಂದು ಕಡೆ ಈಗ ಸುರಿಯುತ್ತಿರುವ ಮಳೆಯನ್ನು ಪೂರ್ವ ಮುಂಗಾರು ಮಳೆ ಎಂದು ಕರೆಯುತ್ತಾರೆ, ಆದರೆ ಅಸಲಿ ಮುಂಗಾರು ಮಳೆ ಜೂನ್ 7ಕ್ಕೆ ಕರ್ನಾಟಕ ರಾಜ್ಯ ಪ್ರವೇಶ ಮಾಡಲಿದೆ.

Karnataka Will Receive Monsoon Rain From 7 June 2024

ಮುಂಗಾರು ಮಳೆಯೇ ಏನು ನಿನ್ನ...

ಮಳೆಗಳಲ್ಲೇ ಶ್ರೇಷ್ಠ ಮಳೆ ಅಂದ್ರೆ ಅದು ಮುಂಗಾರು ಮಳೆ. ಯಾಕಂದ್ರೆ ಮುಂಗಾರು ಮಳೆ ಇಡೀ ಭಾರತಕ್ಕೆ ನೀರು ಕೊಡುತ್ತದೆ. ಮುಂಗಾರು ಮಳೆ ಇಲ್ಲದೆ ಭಾರತೀಯರ ಬದುಕನ್ನೂ ಊಹೆ ಮಾಡಿಕೊಳ್ಳುವುದು ಕೂಡ ಕಷ್ಟ. ಹೀಗಾಗಿ ಮುಂಗಾರು ಮಳೆಯನ್ನು ಭಾರತೀಯರ ಬದುಕಿನ ಮಳೆ ಅಂತಾನು ಕರೆಯುತ್ತಾರೆ. ಭಾರತದಲ್ಲಿ ಕೃಷಿ ಚಟುವಟಿಕೆ ಆರಂಭ ಆಗುವುದು ಕೂಡ ಇದೇ ಮುಂಗಾರು ಮಳೆಯನ್ನು ನಂಬಿಕೊಂಡು. ಹೀಗಾಗಿ ಮುಂಗಾರು ಮಳೆ ಎಂಟ್ರಿ ಯಾವಾಗ ದೇವರೆ? ಅಂತಾ ಕನ್ನಡಿಗರು ಕಾಯುತ್ತಿದ್ದರು ಇದೀಗ ಭರ್ಜರಿ ಸುದ್ದಿ ಸಿಕ್ಕಿದ್ದು, ಜೂನ್ 7ಕ್ಕೆ ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ಕೊಡಲಿದೆಯಂತೆ.

2023ರಲ್ಲಿ ಕೈಕೊಟ್ಟಿದ್ದ ಮುಂಗಾರು ಮಳೆ

ಮೇ 31ಕ್ಕೆ ಮುಂಗಾರು ಮಳೆ ಮಾರುತ ಕೇರಳ ರಾಜ್ಯಕ್ಕೆ ಎಂಟ್ರಿ ಕೊಡಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಭಾರತದ ಮಳೆಯ ಪಾಲಿನಲ್ಲಿ ಶೇ. 70 ರಷ್ಟು ಮಳೆಯನ್ನ ಮುಂಗಾರು ಮಳೆ ಒಂದೇ ಸುರಿಸುತ್ತದೆ. ಹೀಗಾಗಿಯೇ ಮುಂಗಾರು ಮಳೆ ಕರ್ನಾಟಕ ಸೇರಿ ಇಡೀ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಹೀಗಿದ್ದಾಗಲೇ 2023ರಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು. ಹೀಗಾಗಿ ಭೀಕರ ಬರ ಎದುರಾಗಿ ರೈತರು & ಜನ ನರಳಿದ್ದರು. ಆದ್ರೆ ಈ ವರ್ಷ ಭರ್ಜರಿಯಾಗೇ ಮುಂಗಾರು ಮಳೆ ಕರ್ನಾಟಕದಲ್ಲಿ ಸುರಿಯಲಿದೆ ಎಂದು ಮಾಹಿತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+