ಮಳೆ.. ಮಳೆ.. ಮುಂದಿನ 9 ದಿನ ಈ ಭಾಗದಲ್ಲಿ ಭಾರಿ ಮಳೆ!

ಕೇವಲ 1 ತಿಂಗಳ ಹಿಂದೆ ಅಂದ್ರೆ ಏಪ್ರಿಲ್ 2024ರಲ್ಲಿ ಒಂದೊಂದು ಹನಿ ನೀರಿಗೂ ಕಷ್ಟ ಆಗಿತ್ತು. ಕರ್ನಾಟಕದ ಯಾವುದೇ ಹಳ್ಳಿಗೆ ಹೋಗಿ, ಯಾವುದೇ ನಗರಕ್ಕೆ ಹೋಗಿ ಅಲ್ಲೆಲ್ಲಾ ನೀರಿಗೆ ದೊಡ್ಡ ಹೋರಾಟ ಶುರುವಾಗಿತ್ತು. ಜನಗಳು ಪ್ರತಿದಿನ ತಮ್ಮ ಕೆಲಸವನ್ನು ಬಿಟ್ಟು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು ಹೀಗಿದ್ದಾಗ ಮಳೆರಾಯ ಕರ್ನಾಟಕ ರಾಜ್ಯದಲ್ಲಿ ಒಂದಷ್ಟು ಕರುಣೆ ತೋರಿಸಿ ಮಳೆ ಸುರಿಸಲು ಆರಂಭಿಸಿದ್ದ. ಈಗ ಆ ಮಳೆಯೇ ದೊಡ್ಡದಾಗಿ, ಮುಂದಿನ 9 ದಿನ ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆಯ ಎಚ್ಚರಿಕೆ ನೀಡಲಾಗಿದೆ.

ಮಳೆ ಬೇಕು, ಮಳೆ ಚೆನ್ನಾಗಿ ಬಂದರೆ ಅಲ್ವಾ ಮನುಷ್ಯರು ನೆಮ್ಮದಿಯಾಗಿ ಜೀವನ ಮಾಡೋಕೆ ಆಗೋದು? ಭಾರತದಲ್ಲಿ ಅದ್ರಲ್ಲೂ ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಕಾರಣಕ್ಕೆ ಉತ್ತಮವಾಗಿ ಮಳೆ ಬೀಳುತ್ತದೆ. ಆದರೂ ಮನುಷ್ಯ ಮಾಡಿಕೊಂಡ ತಪ್ಪುಗಳಿಗೆ ಮಳೆಯ ಮೋಡಗಳು ಕೂಡ ಕಳೆದ 4-5 ತಿಂಗಳು ನಾಪತ್ತೆ ಆಗಿದ್ದವು. ಪ್ರಕೃತಿ ಮೇಲೆ ಮನುಷ್ಯರು ದೌರ್ಜನ್ಯ ನಡೆಸುತ್ತಿರುವ ಕಾರಣಕ್ಕೆ ಹೀಗೆ ಆಗಿದೆ ಎಂದು ವಿಜ್ಞಾನಿಗಳು ಹೇಳಿದ್ದರು. ಹೀಗಿದ್ದಾಗಲೇ ಮತ್ತೆ ಭರ್ಜರಿಯಾಗಿ ಮಳೆ ಆರಂಭವಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆ ಬರಲಿದೆ? ಮುಂದೆ ಓದಿ.

Karnataka Will Receive Heavy Rain For Next Several Days From 5th June 2024

ಈ ಜಿಲ್ಲೆಗಳಿಗೆ ಭಾರಿ ಮಳೆ!

ಈಗಾಗಲೇ ಕರ್ನಾಟಕದ ಮಲೆನಾಡು ಭಾಗದಲ್ಲಿ ಭಾರಿ ಮಳೆಯ ಸಿಂಚನವು ಶುರುವಾಗಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ ಸೇರಿ, ಮಂಡ್ಯ, ಮೈಸೂರು & ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿಯ ಹಲವು ಪ್ರದೇಶದಲ್ಲಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಈ ನಡುವೆ ಮತ್ತಷ್ಟು ಜಿಲ್ಲೆಗಳಿಗೂ ಮಳೆ ವ್ಯಾಪಿಸಲಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲೂ ಭಾರಿ ಮಳೆ!

ಬೆಂಗಳೂರಿಗೂ & ಭರ್ಜರಿ ಮಳೆಗೂ ಭಾರಿ ನಂಟು ಇದೆ. ಹೀಗಾಗಿಯೇ ಪ್ರತಿಬಾರಿ ಮಳೆ ಆಗಮನ ಆದಾಗಲೂ ಬೆಂಗಳೂರಲ್ಲಿ ವರುಣದೇವ ಅಬ್ಬರಿಸುತ್ತಾನೆ. 2024ರಲ್ಲೂ ಹೀಗೆ ಭರ್ಜರಿ ಮಳೆಯ ಸಿಂಚನ ಬೆಂಗಳೂರಿಗೆ ಆಗಲಿದೆ. ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸಲಿದ್ದಾನೆ.

ಹಾಗೆ ಮುಂದಿನ 24 ಗಂಟೆ ಅವಧಿಯಲ್ಲಿ ಭಾರಿ ಮಳೆ ಬರುವ ಸಾಧ್ಯತೆ ಇದೆ ಅಂತ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ, ಮನೆಯಿಂದ ಹೊರಗೆ ಹೋಗುವಾಗ ವೆದರ್ ರಿಪೋರ್ಟ್ ಪರಿಶೀಲನೆ ಮಾಡಿ ಹೊರಗೆ ಹೋರಟರೆ ಉತ್ತಮ. ಇಲ್ಲವಾದರೆ ಮಳೆಯಲ್ಲಿ ಸಿಲುಕಿ ಪರದಾಡುವ ಸ್ಥಿತಿ ಎದುರಾಗಬಹುದು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+