ಜ.22ರ ತಾಪಮಾನ ವರದಿ: ಬೆಳಗ್ಗೆ ಚುಮುಚುಮು ಚಳಿ, ಮಧ್ಯಾಹ್ನ ಒಣಹವೆ

ಬೆಂಗಳೂರು, ಜನವರಿ 22: ರಾಜ್ಯದಲ್ಲಿ ಮತ್ತೆ ಚಳಿಯ ವಾತಾವರಣ ಹೆಚ್ಚಿದ್ದು, ಮಧ್ಯಾಹ್ನದ ವೇಳೆಗೆ ಸೂರ್ಯ ಪ್ರಖರವಾಗಿ ಪ್ರಕಾಶಿಸಲಿದ್ದು, ಒಣ ಹವೆ ಮುಂದುವರೆಯಲಿದೆ. ನವೆಂಬರ್ ಅಂತ್ಯಕ್ಕೆ ಆರಂಭವಾದ ಚಳಿ ಜನವರಿ ಆರಂಭದಲ್ಲಿ ತಗ್ಗಿತ್ತು. ಈಗ ಮತ್ತೆ ಉತ್ತರ ಕರ್ನಾಟಕ ಭಾಗದಲ್ಲಿ ಚಳಿ ಹೆಚ್ಚಾಗಿದೆ.

ದಕ್ಷಿಣ ಕರ್ನಾಟಕ, ಮಲೆನಾಡು ಭಾಗದಲ್ಲಿ ಚಳಿ ಎಂದಿನಂತೆ ಮುಂದುವರಿದಿದ್ದು, ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 30 ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇತ್ತ ಉತ್ತರ ಭಾರತದಲ್ಲಿ ಹವಾಮಾನ ತದ್ವಿರುದ್ಧವಾಗಿದ್ದು, ಹಿಮಪಾತ ಮತ್ತು ಮಳೆಯಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ವರದಿಗಳು ಸಹ ಬರುತ್ತಿವೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 30 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಜಿಲ್ಲಾವಾರು ತಾಪಮಾನ ವರದಿ
ಬೆಂಗಳೂರು 30-16, ಮೈಸೂರು 32-17, ಚಾಮರಾಜನಗರ 32-18, ರಾಮನಗರ 32-16, ಮಂಡ್ಯ 32-17, ಬೆಂಗಳೂರು ಗ್ರಾಮಾಂತರ 30-16, ಚಿಕ್ಕಬಳ್ಳಾಪುರ 31-16, ಕೋಲಾರ 31-16, ಹಾಸನ 31-15, ಚಿಕ್ಕಮಗಳೂರು 30-14, ದಾವಣಗೆರೆ 33-16, ಶಿವಮೊಗ್ಗ 33-16, ಕೊಡಗು 29-14, ತುಮಕೂರು 31-16, ಉಡುಪಿ 31-21 ಡಿಗ್ರಿ ಸೆಲ್ಸಿಯಸ್ ಇದೆ.

 Karnataka Weather Report of January 22: Mild Cold in the Morning, Dryness In the Afternoon

ಮಂಗಳೂರು 31-22, ಉತ್ತರ ಕನ್ನಡ 32-16, ಧಾರವಾಡ 32-15, ಹಾವೇರಿ 33-16, ಹುಬ್ಬಳ್ಳಿ 32-16, ಬೆಳಗಾವಿ 30-16, ಗದಗ 32-16, ಕೊಪ್ಪಳ 33-17, ವಿಜಯಪುರ 33-17, ಬಾಗಲಕೋಟ 34-17, ಕಲಬುರಗಿ 33-17, ಬೀದರ್ 31-16, ಯಾದಗಿರಿ 33-17, ರಾಯಚೂರ 34-18, ಬಳ್ಳಾರಿ 34-18 ಡಿಗ್ರಿ ಸೆಲ್ಸಿಯಸ್ ಇದೆ.

ರಾಜ್ಯ ಹಾಗೂ ದೇಶದಲ್ಲಿ ಈ ವರ್ಷ ಹೆಚ್ಚು ಅಕಾಲಿಕ ಮಳೆಯಾಗಿದ್ದು, ಇದು ವಾತಾವರಣದ ಏರಿಳಿತಕ್ಕೆ ಕಾರಣವಾಗಿದೆ. ಸದ್ಯ ಅಕಾಲಿಕ ಮಳೆ ನಿಂತಿದ್ದು, ರಾಜ್ಯದ ಜಲಾಶಯಗಳು ಇಂದಿಗೂ ಭಾಗಶಃ ಭರ್ತಿಯಾಗಿವೆ. ಅಕಾಲಿಕ ಮಳೆ ರೈತರ ಬೆಳೆಯನ್ನು ನಾಶಗೊಳಿಸಿದ ಪರಿಣಾಮ ತರಕಾರಿ ಬೆಲೆ ಗಗನಕ್ಕೇರಿತ್ತು. ಈ ಫೆಬ್ರವರಿ ಅಂತ್ಯದವರೆಗೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಬೆಳಗಿನ ಶೀತಗಾಳಿಗೆ ಹಿರಿಯ ನಾಗರಿಕರನ್ನು ಮನೆಯಲ್ಲಿ ಕೂರುವಂತೆ ಮಾಡಿದೆ.

 Karnataka Weather Report of January 22: Mild Cold in the Morning, Dryness In the Afternoon

ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ದಟ್ಟ ಮಂಜು
ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಶೀತ ದಿನದ ಪರಿಸ್ಥಿತಿಗಳನ್ನು ಮುನ್ಸೂಚಿಸಲಾಗಿದೆ. ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ನಿರೀಕ್ಷಿಸಲಾಗಿದೆ. ಪಂಜಾಬ್, ಹರಿಯಾಣ, ದೆಹಲಿ, ಬಿಹಾರ ಮತ್ತು ಸಿಕ್ಕಿಂನ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ಇರುವ ಸಾಧ್ಯತೆಯಿದೆ.

Recommended Video

      ಇದಪ್ಪ ಕನ್ನಡಿಗನ ಅದೃಷ್ಟ ಅಂದ್ರೆ !! | Oneindia Kannada

      ಜಮ್ಮುವಿನಲ್ಲಿ ತುಂತುರು ಮಳೆ ಮತ್ತು ಹಿಮ
      ಕಾಶ್ಮೀರದಲ್ಲಿ ನಿರಂತರ ಹಿಮಪಾತದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜಮ್ಮುವಿನ ಕೆಲ ಭಾಗಗಳಲ್ಲಿ ಚಳಿ ಹೆಚ್ಚಿದೆ. ಇಲ್ಲಿ ದಿನದ ತಾಪಮಾನವು ಸಾಮಾನ್ಯಕ್ಕಿಂತ 7 ರಿಂದ 8 ಡಿಗ್ರಿಗಳಷ್ಟು ಕುಸಿದಿದೆ. ವಾರಾಂತ್ಯದಲ್ಲಿ ಲಘು ಮಳೆ ಮತ್ತು ಹಿಮದ ಮುನ್ಸೂಚನೆ ನೀಡಿದೆ. ಜನವರಿ 22 ಮತ್ತು 23ರಂದು ಲಘು ಮಳೆ ಹಾಗೂ ಹಿಮ ಬೀಳುವ ಸಾಧ್ಯತೆ ಇದೆ.

      ಮಧ್ಯಪ್ರದೇಶದಲ್ಲಿ ಮಳೆ ನಿರೀಕ್ಷೆ
      ಜನವರಿ 23ರವರೆಗೆ ದೆಹಲಿ, ಉತ್ತರಪ್ರದೇಶ, ಉತ್ತರ ರಾಜಸ್ಥಾನ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+