ಡಿ.27ರ ಕರ್ನಾಟಕ ಹವಾಮಾನ ವರದಿ: ಮೈ ನಡುಗುವ ಚಳಿಗೆ ಜನ ಹೈರಾಣ!

ಬೆಂಗಳೂರು, ಡಿಸೆಂಬರ್ 27: ಅಕಾಲಿಕ ಮಳೆಯ ಆರ್ಭಟ ನಿಂತ ಬಳಿಕ ರಾಜ್ಯದಲ್ಲಿ ಚಳಿಯ ವಾತಾವರಣ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಮುಂಜಾನೆಯ ಚಳಿಗೆ ಜನರು ನಡುಗುತ್ತಿದ್ದಾರೆ. ಡಿಸೆಂಬರ್ ಮೊದಲ ವಾರದವರೆಗೂ ಸುರಿದ ಮಳೆ ಈಗ ಕೊಂಚ ಬ್ರೇಕ್​​ ಕೊಟ್ಟಿದ್ದು, ಎಲ್ಲೆಡೆ ಶೀತಗಾಳಿ ಬೀಸುತ್ತಿದೆ.

ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಂತೂ ಮಂಜು ಕವಿದ ಚಳಿಗೆ ಜನರು ತತ್ತರಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ 27 ಮತ್ತು ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇನ್ನು ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಬೇರೆ ರಾಜ್ಯಗಳಲ್ಲಿ ಮಳೆ ಇನ್ನೂ ಸಹ ತನ್ನ ಆರ್ಭಟ ನಿಲ್ಲಿಸಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಇನ್ನೂ ಕೆಲ ದಿನಗಳ ಕಾಳ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಂದಿನಂತೆ ಇಂದು ಸಹ ಹವಾಮಾನ ಮುಂದುವರಿಯಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಚಳಿಯ ವಾತಾವರಣ ಇರಲಿದೆ. ಮುಂದಿನ ನಾಲ್ಕೈದು ದಿನ ಚಳಿಯ ಪ್ರಮಾಣ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Weather Report

ರಾಜ್ಯದ ನಗರಗಳ ಹವಾಮಾನ ವರದಿ ಹೀಗಿದೆ
ಬೆಂಗಳೂರು 27-15, ಮಂಗಳೂರು 32-22, ಶಿವಮೊಗ್ಗ 32-16, ಬೆಳಗಾವಿ 31-16, ಮೈಸೂರು 29-13, ಮಂಡ್ಯ 30-15, ರಾಮನಗರ 30-15, ಮಡಿಕೇರಿ 29-13, ಹಾಸನ 29-14, ಚಾಮರಾಜನಗರ 30-16, ಚಿಕ್ಕಬಳ್ಳಾಪುರ 27-13, ಕೋಲಾರ 28-14, ತುಮಕೂರು 29-14, ಉಡುಪಿ 31-22, ಕಾರವಾರ 31-22, ಚಿಕ್ಕಮಗಳೂರು 29-14, ದಾವಣಗೆರೆ 32-16, ಚಿತ್ರದುರ್ಗ 31-16, ಹಾವೇರಿ 32-16, ಬಳ್ಳಾರಿ 32-17, ಗದಗ 31-17, ಕೊಪ್ಪಳ 31-17, ರಾಯಚೂರು 32-17, ಯಾದಗಿರಿ 31-17, ವಿಜಯಪುರ 32-17, ಬೀದರ್ 30-14, ಕಲಬುರಗಿ 32-16, ಬಾಗಲಕೋಟೆ 32-17 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಸಾಧಾರಣ ಮಳೆ
ತೀವ್ರವಾದ ಚಂಡಮಾರುತವು ಡಿಸೆಂಬರ್ 26ರಿಂದ ವಾಯುವ್ಯ ಭಾರತ ಮತ್ತು ಡಿಸೆಂಬರ್ 27ರಿಂದ ಮಧ್ಯ ಭಾರತದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಡಿಸೆಂಬರ್ 26 ಮತ್ತು 27ರಂದು ಪಂಜಾಬ್​​, ಹರಿಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

Karnataka Weather Report

ಹಾಗೆಯೇ ಮಧ್ಯ ಪ್ರದೇಶ, ಛತ್ತೀಸ್​ಗಢ, ವಿದರ್ಭ, ಬಿಹಾರ ಮತ್ತು ಜಾರ್ಖಂಡ್​​​ನಲ್ಲಿ ಡಿಸೆಂಬರ್ 27ರಿಂದ 29ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಜಮ್ಮು, ಹಿಮಾಚಲ ಪ್ರದೇಶ, ಪಂಜಾಬ್​, ಹರಿಯಾಣದ ಉತ್ತರ ಭಾಗ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗುವ ನಿರೀಕ್ಷೆ ಇದೆ.

ಮಂಜು ಕವಿದ ವಾತಾವರಣ
ಡಿಸೆಂಬರ್ 26 ಮತ್ತು 27ರಂದು ಜಮ್ಮು, ಹಿಮಾಚಲ ಪ್ರದೇಶ, ಪಂಜಾಬ್​, ಹರಿಯಾಣದ ಉತ್ತರ ಭಾಗ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ 2 ದಿನಗಳಲ್ಲಿ ವಾಯುವ್ಯ, ಪೂರ್ವ ಮತ್ತು ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನ 2-4 ಡಿಗ್ರಿ ಸೆಲ್ಸಿಯಸ್​​ಗೆ ಏರಿಕೆಯಾಗುವ ಸಂಭವವಿದ್ದು, ನಂತರ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ.

Recommended Video

      Sports Flashback 2021 Episode 03 | Top 5 best moments | Oneindia Kannada

      ಕರ್ನಾಟಕದಲ್ಲಿ ಮೈ ನಡುಗುವ ಚಳಿ
      ಕರ್ನಾಟಕದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಚಳಿ ವಿಪರೀತ ಹೆಚ್ಚಾಗಿದೆ. ಸದಾ ಬಿಸಿಲಿನಿಂದ ಕೂಡಿರುವ ಉತ್ತರ ಕರ್ನಾಟಕದಲ್ಲೂ ಚಳಿ ವಿಪರೀತವಾಗಿದೆ. ಉತ್ತರ ಕರ್ನಾಟಕದ ಧಾರವಾಡ, ಹುಬ್ಬಳ್ಳಿ, ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ಇನ್ನೂ 3 ದಿನ ಚಳಿ ಹೆಚ್ಚಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+