Karnataka weather: ವಿಪರೀತ ಚಳಿ ನಡುವೆಯೂ ರಾಜ್ಯದ ಈ 5 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
ಕರ್ನಾಟಕ, ಜನವರಿ, 18: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೀಗ ಮಂಜು ಮುಚ್ಚಿದ ವಾತಾವರಣದ ಜೊತೆಗೆ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಮತ್ತೊಂದೆಡೆ ತಾಪಮಾನದ ಪ್ರಮಾಣವು ಕೂಡ ತಗ್ಗುತ್ತಲೇ ಇದೆ. ಅದರಲ್ಲೂ ಮಳೆಯಂತೂ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಇನ್ನು ಇಂದು (ಜನವರಿ 18) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮಾತ್ರ ಮೋಡ ಕವಿದ ವಾತಾವರಣ ಹಾಗೂ ಇನ್ನು ಕಲವೆಡೆ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯ ಸಂದೇಶ ರವಾನಿಸಿದೆ.
ಮಂಗಳೂರು, ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ, ಕೊಡಗು, ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಜುನುಗು ಮಳೆ ಬೀಳುವ ಸಾಧ್ಯತೆ ಇದೆ. ಇನ್ನುಳಿದಂತೆ ಚಳಿ ಮತ್ತು ಒಣಹವೆಯ ವಾತಾವರಣ ಮುಂದುವರೆಯಲಿದೆ. ಕೆಲವು ಕಡೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ಎಲ್ಲೆಲ್ಲಿ ತಾಪಮಾನದ ಪ್ರಮಾಣ ಎಷ್ಟಿರಲಿದೆ?
ಇನ್ನು ರಾಜಧನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಲಿದ್ದು, ಮಂಗಳೂರು ಗರಿಷ್ಠ ತಾಪಮಾನ 28 ಕನಿಷ್ಠ ತಾಪಮಾನ 23, ಶಿವಮೊಗ್ಗ ಗರಿಷ್ಠ ತಾಪಮಾನ 29 ಕನಿಷ್ಠ ತಾಪಮಾನ 17, ಬೆಳಗಾವಿ ಗರಿಷ್ಠ 28 ಕನಿಷ್ಠ 16, ಮೈಸೂರು ಗರಿಷ್ಠ 30 ಕನಿಷ್ಠ 19, ಮಂಡ್ಯ ಗರಿಷ್ಠ 30 ಕನಿಷ್ಠ 19, ಮಡಿಕೇರಿ ಗರಿಷ್ಠ 31 ಕನಿಷ್ಠ 19, ರಾಮನಗರದಲ್ಲಿ ಗರಿಷ್ಠ 30 ಕನಿಷ್ಠ ತಾಪಮಾನ 18 ದಾಖಲಾಗಲಿದೆ.
ಹಾಸನ ಗರಿಷ್ಠ 27 ಕನಿಷ್ಠ 18, ಚಾಮರಾಜನಗರ ಗರಿಷ್ಠ 31 ಕನಿಷ್ಠ 18, ಚಿಕ್ಕಬಳ್ಳಾಪುರ ಗರಿಷ್ಠ 28 ಕನಿಷ್ಠ 17, ಕೋಲಾರ ಗರಿಷ್ಠ 28 ಕನಿಷ್ಠ 17,ತುಮಕೂರು ಗರಿಷ್ಠ 29 ಕನಿಷ್ಠ 19, ಉಡುಪಿ ಗರಿಷ್ಠ 29 ಕನಿಷ್ಠ 23, ಕಾರವಾರ ಗರಿಷ್ಠ 29 ಕನಿಷ್ಠ 21, ಚಿಕ್ಕಮಗಳೂರು ಗರಿಷ್ಠ 26 ಕನಿಷ್ಠ 16,
ದಾವಣಗೆರೆಯಲ್ಲಿ ಗರಿಷ್ಠ 29 ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಹುಬ್ಬಳ್ಳಿ ಗರಿಷ್ಠ 30 ಕನಿಷ್ಠ 17, ಚಿತ್ರದುರ್ಗ ಗರಿಷ್ಠ 29 ಕನಿಷ್ಠ 18, ಹಾವೇರಿ ಗರಿಷ್ಠ 30 ಕನಿಷ್ಠ 18, ಬಳ್ಳಾರಿ ಗರಿಷ್ಠ 32 ಕನಿಷ್ಠ 21,ಗದಗ ಗರಿಷ್ಠ 29 ಕನಿಷ್ಠ 17, ಕೊಪ್ಪಳ ಗರಿಷ್ಠ 31 ಕನಿಷ್ಠ 19, ರಾಯಚೂರು ಗರಿಷ್ಠ 32 ಕನಿಷ್ಠ 21, ಯಾದಗಿರಿ ಗರಿಷ್ಠ 31 ಕನಿಷ್ಠ 21,ವಿಜಯಪುರ ಗರಿಷ್ಠ 31 ಕನಿಷ್ಠ 19, ಬೀದರ್ ಗರಿಷ್ಠ 29 ಕನಿಷ್ಠ 19, ಕಲಬುರಗಿ ಗರಿಷ್ಠ 31 ಕನಿಷ್ಠ 19, ಇನ್ನು ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 31 ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎನ್ನುವ ಮುನ್ಸೂಚನೆ ನೀಡಿದೆ.












Click it and Unblock the Notifications