Get Updates
Get notified of breaking news, exclusive insights, and must-see stories!

Karnataka Cold Wave: ರಾಜ್ಯದಲ್ಲಿ ಮುಂದಿನ 05 ದಿನ ಭಾರೀ ಚಳಿ ನಿರೀಕ್ಷೆ, ಶೀತ ಅಲೆ ಎಚ್ಚರಿಕೆ..IMD

Karnataka Weather Alert: ಕರ್ನಾಟಕ ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ತಗ್ಗಿದೆ. ಮಳೆ ಸುರಿಸುವ ಹಿಂಗಾರು ಮಾರುತಗಳು ದುರ್ಬಲವಾಗಿದೆ. ಸಮುದ್ರ ಮೇಲ್ಮೈನಲ್ಲಿ ಒಂದಷ್ಟು ಬದಲಾವಣೆ ಆಗಿದೆ. ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದರಿಂದ ಕೆಲವೆಡೆ ಸೋನೆ ಮಳೆ ಆಗಬಹುದು. ಉಳಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದ ಪ್ರಮಾಣ ಕುಸಿಯಲಿದ್ದು, ಮೈಕೊರೆವ ಚಳಿ ವಾತಾವರಣ ಸೃಷ್ಟಿಯಾಗಲಿದೆ. ಈ ಸಂಬಂಧ ಮುಂದಿನ 05 ದಿನ ರಾಜ್ಯದಲ್ಲಿ ಐಎಂಡಿ ಶೀತ ಅಲೆಯ ಮುನ್ನೆಚ್ಚರಿಕೆ ನೀಡಿದೆ.

ಕರ್ನಾಟಕದಲ್ಲಿ ಈಗ ಇದ್ದಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಳಿ, ದಟ್ಟ ಮಂಜು ಆವರಿಸಲಿದೆ. ಉಷ್ಣವಲಯದ ಮಟ್ಟದಲ್ಲಿ ಪೂರ್ವ ದಿಕ್ಕಿನ ಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿ, ಒಳನಾಡು, ಮಲೆನಾಡು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುತ್ತದೆ. ಆದರೆ ಬೆಳಗ್ಗೆ, ರಾತ್ರಿ ದಟ್ಟ ಮಂಜು, ವಿಪರೀತ ಚಳಿ ಆವರಿಸಲಿದೆ. ಕನಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಆಗಲಿದೆ. ಉತ್ತರ ಕರ್ನಾಟಕದ ಬೀದರ್ ಜಿಲ್ಲೆಗೆ ಹವಾಮಾನ ಇಲಾಖೆ ಐದು ದಿನಗಳ ಶೀತ ಅಲೆ ಅಲರ್ಟ್ ನೀಡಿದೆ.

Karnataka Weather IMD Predicts Intense Cold Wave Alert and Dense Fog for Next 5 Days in State

ಬೀದರ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನದಲ್ಲಿ ಮತ್ತಷ್ಟು 1.6 ಡಿಗ್ರಿ ಸೆಲ್ಸಿಯಸ್ ಕುಸಿಯಲಿದೆ. ಅದೇ ರೀತಿ ವಿಜಯಪುರ ಜಿಲ್ಲೆಯಲ್ಲಿ 1.7 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ 1.6 ಡಿಗ್ರಿ ಸೆಲ್ಸಿಯಸ್, ಧಾರವಾಡದಲ್ಲಿ 0.6 ಡಿಗ್ರಿ ಸೆಲ್ಸಿಯಸ್, ಮಂಗಳೂರು ಶಕ್ತಿ ನಗರದಲ್ಲಿ 0.6 ಡಿಗ್ರಿ ಸೆಲ್ಸಿಯಸ್ ಇಳಿಕೆ ಕಾಣಲಿದೆ. ಈಗಾಗಲೇ ಕನಿಷ್ಠ ತಾಪಮಾನದಲ್ಲಿ ಇಳಿಕೆ ಆಗಿ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಚಳಿ ಆವರಿಸಿತ್ತು. ಇದೀಗ ಮತ್ತಷ್ಟು ಕಡಿಮೆ ಆಗಿದೆ ಶೀತ ಅಲೆ ನಿರ್ಮಾಣವಾಗಲಿದೆ ಎಂದು ಐಎಂಡಿ ವರದಿ ಮುನ್ಸೂಚನೆ ನೀಡಿದೆ.

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲೂ ಮುಂದಿನ ಐದ ದಿನ (ಡಿಸೆಂಬರ್ 14) ವರೆಗೂ ಒಣಹವೆ ಮುಂದುವರಿಯುತ್ತದೆ. ಹಗಲು ಹೊತ್ತು ಗರಿಷ್ಠ ಪ್ರಮಾಣದ ತಾಪಮಾನ ದಾಖಲಾಗಿದೆ. ಉರಿ ಬಿಸಿಲು ಕಂಡು ಬರಲಿದ್ದು, ರಾತ್ರಿ, ಬೆಳಗ್ಗೆ ಚಳಿ ಆವರಿಸಲಿದೆ. ತಾಪಮಾನ ಇಳಿಕೆ ಪ್ರವೃತ್ತಿ ಹೊರತಾಗಿ ವಾತಾವರಣದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ. ಸದ್ಯ ಬೀದರ್‌ ಸೇರಿ ಉತ್ತರ ಕರ್ನಾಟಕದಲ್ಲಿನ ಶೀತ ಅಲೆ ರಾಜ್ಯವ್ಯಾಪಿ ವಿಸ್ತರಣೆ ಆಗುವ ನಿರೀಕ್ಷೆ ಸಹ ಇದೆ.

ಬೆಂಗಳೂರಲ್ಲಿ ಹೆಚ್ಚಲಿದೆ ಚಳಿ ವಾತಾವರಣ

ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ದಟ್ಟ ಮಂಜು ಆವರಿಸಲಿದ್ದು, ನಿಧಾನವಾಗಿ ಚಳಿ ಹೆಚ್ಚಾಗಲಿದೆ. ಈವರೆಗೆ ಆಗಾಗ ಕಾಣುತ್ತಿದ್ದ ಮಬ್ಬು ವಾತಾವರಣ ಮರೆಯಾಗಿ ಸ್ಪಷ್ಟ ನೀಲಿ ಆಕಾಶ ಕಂಡು ಬರಲಿದೆ. ಈ ವೇಳೆ ಒಣಹವೆ ಮುಂದುವರಿಯುತ್ತದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ಸಾಧ್ಯತೆಗಳು ಇವೆ.

ಗರಿಷ್ಠ ತಾಪಮಾನದ ಜಿಲ್ಲೆಗಳು..

ರಾಜ್ಯದ ಗರಿಷ್ಠ ತಾಪಮಾನ ನೋಡುವುದಾದರೆ ಕಾರವಾರದಲ್ಲಿ 35. 8 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 34 ಡಿಗ್ರಿ ಸೆಲ್ಸಿಯಸ್, ಮಂಗಳೂರು ಏರ್‌ಪೋರ್ಟ್‌, ಶಕ್ತಿ ನಗರ, ದಕ್ಷಿಣ ಕನ್ನಡದಲ್ಲಿ ತಲಾ 32 ಡಿಗ್ರಿ ಸೆಲ್ಸಿಯಸ್, ಕಲಬುರಗಿ 31 ಡಿಗ್ರಿ ಸೆಲ್ಸಿಯಸ್, ಗದಗ 30, ಹಾವೇರಿ 30 ಡಿಗ್ರಿ ಸೆಲ್ಸಿಯಸ್, ರಾಯಚೂರು ಮತ್ತು ಬೆಳಗಾವಿ ಏರ್‌ಪೋರ್ಟ್‌ 29 ಡಿಗ್ರಿ ಸೆಲ್ಸಿಯಸ್, ಧಾರವಾಡ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+