Karnataka Weather: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ
ಆಗಸ್ಟ್ ಮೊದಲ ವಾರ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಚುರುಕಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಗುರುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಶುಕ್ರವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಗದಗ, ಚಾಮರಾಜನಗರ, ಮಂಡ್ಯ, ರಾಮನಗರ, ರಾಯಚೂರು, ಮೈಸೂರು, ವಿಜಯಪುರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಚದುರಿದಂತೆ ಉತ್ತಮ ಮಳೆಯಾಗಿದೆ. ಚಾಮರಾಜನಗರದಲ್ಲಿ ಭಾರಿ ಮಳೆಯಾಗಿದ್ದು ನಗರದ ರಸ್ತೆಗಳು ಜಲಾವೃತವಾಗಿದ್ದವು.

ಶುಕ್ರವಾರ ಕೂಡ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಾಮರಾಜನಗರ, ಮಂಡ್ಯ, ಮೈಸೂರು, ವಿಜಯಪುರ, ಯಾದಗಿರಿ, ಉಡುಪಿ, ರಾಮನಗರ, ರಾಯಚೂರು, ಕೊಪ್ಪಳ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ಬೆಳಗಾವಿ, ಕಲಬುರಗಿ, ಗದಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ನಗರ, ಹಾಸನ, ಕೊಡಗು, ಬೆಂಗಳೂರು ನಗರ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ತುಮಕೂರು, ಶಿವಮೊಗ್ಗ, ವಿಜಯನಗರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಚದುರಿದಂತೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಗುರುವಾರ ಹಲವು ಕಡೆ ಉತ್ತಮ ಮಳೆ
ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಗದಗ ಜಿಲ್ಲೆಯ ಹಲವು ಕಡೆಗಳಲ್ಲಿ ಬೆಳೆಗಳು ನಾಶವಾಗಿವೆ. ಅಸುಂಡಿ ಗ್ರಾಮದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಇಚ್ಚಲ ಹಳ್ಳ ತುಂಬಿ ಹರಿದಿದ್ದು ಕಬ್ಬಿನ ಬೆಳೆ ನಾಶವಾಗಿದೆ.
ಆಗಸ್ಟ್ 11ಕ್ಕೆ ಕೊನೆಯಾದಂತೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೆರಿಂದ್ಯಪನಹಳ್ಳಿಯಲ್ಲಿ 74.5 ಮಿಮೀ ಮಳೆಯಾಗಿದ್ದು ರಾಜ್ಯದಲ್ಲಿ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ. ಕನಕಪುರ ತಾಲೂಕಿನ ಹೊಸದುರ್ಗ ಎನ್ನುವಲ್ಲಿ ಕೂಡ 72.5 ಮಿಮೀ ಮಳೆಯಾಗಿದೆ. ಚಾಕನಹಳ್ಳಿ, ಬನವಾಸಿ, ಕೊಲಗೊಂಡನಗಳ್ಳಿ, ತುಂಗಣಿ, ಕೋಡಿಹಳ್ಳಿ, ಸೋಮಂದ್ಯಪ್ಪನಹಳ್ಳಿ, ದ್ಯಾವಸಂದ್ರ, ಶಿವನಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಹೆಬ್ಬಲಸೂರು, ಮಾನಗನಹಳ್ಳಿ, ಬಿಸವಲವಾಡಿ, ಚಂದಕಾವಡಿ, ಉಡಿಗಾಲ, ದೊಡ್ಡಲಾತ್ತೂರು, ಪೊನ್ನಾಚಿ, ಕಬ್ಬಲಿ. ರಾಯಚೂರು ಜಿಲ್ಲೆಯ ವಿರುಪಾಪುರ, ತಾಲೆಕಾನ, ಭೂತಾಲ ದಿನ್ನಿ, ದೇವರಗುಡಿ, ಸೋಮಲಾಪುರ, ಬಸ್ಸಾಪುರ, ಮಂಡ್ಯ ಜಿಲ್ಲೆಯ ತೆಂಡೆಕೆರೆ, ಬಲ್ಲೇನಹಳ್ಳಿ, ಕುರುಬರಬೆಟ್ಟಹಳ್ಳಿ, ಗುಮನಹಳ್ಳಿ, ಡಿಂಕ, ಮಾಣಿಕ್ಯನಹಳ್ಳಿ, ಹಲ್ಲೆಗೆರೆ, ಅರಳಕುಪ್ಪೆ, ಹೊನಗಾನಹಳ್ಳಿ, ಮೈಸೂರು ಜಿಲ್ಲೆಯ ಹಾರೋಹಳ್ಳಿ, ತುಂಬಾಲ ಮಾತ್ರವಲ್ಲದೆ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ವಿಜಯಪುರ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ಬೆಂಗಳೂರಿನಲ್ಲಿ ಕೂಡ ವ್ಯಾಪಕ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ಕೂಡ ಶುಕ್ರವಾರ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಬೆಳಗ್ಗೆಯಿಂದ ನಗರದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ವೇಳೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.












Click it and Unblock the Notifications