Karnataka Weather: ಅಬ್ಬಬ್ಬಾ.. ಇನ್ನು ಶುರುವಾಯ್ತು ಬಿಸಿಲ ಧಗೆ, ಜಿಲ್ಲಾವಾರು ಇಂದು ದಾಖಲಾಗುವ ತಾಪಮಾನದ ವಿವರ - ಮಾಹಿತಿ

ಕರ್ನಾಟಕ, ಮೇ, 16: ಮೋಚಾ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಬೀರಿದ್ದು, ಗುಡುಗು, ಮಿಂಚು ಬಿರುಗಾಳಿ ಸಮೇತ ಭಾರಿ ಮಳೆ ಸುರಿದ ಕಾರಣ ಹಲವು ಜಿಲ್ಲೆಗಳಲ್ಲಿ ಸಾವು ಸಂಭವಿಸಿವೆ. ಮತ್ತೊಂದೆಡೆ ಇದೀಗ ಮಳೆರಾಯನ ಆರ್ಭಟ ಕಡಿಮೆ ಆಗುತ್ತಿದ್ದಂತೆ ಬಿಸಿಲಿನ ತಾಪವು ಕೂಡ ಏರತೊಡಗಿದೆ. ಇದರಿಂದ ಸಾವುಗಳು ಸಂಭವಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ರಾಜ್ಯದ ಜಿಲ್ಲಾವಾರು ದಾಖಲಾಗುವ ತಾಪಮಾನದ ವಿವರವನ್ನು ಇಲ್ಲಿ ತಿಳಿಯಿರಿ.

ಏರುತ್ತಿದೆ ಬಿಸಿಲಿನ ಧಗೆ

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದು, ಇದರಿಂದ ಸಾಕಷ್ಟು ಅನಾಹುತಗಳು ಕೂಡ ನಡೆದಿವೆ. ಇದೀಗ ಮಳೆರಾಯನ ಆರ್ಭಟ ನಿಂತಿದ್ದು, ಸೂರ್ಯದೇವನ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದಲೂ ಕೂಡ ಸಾವು ಸಂಭವಿಸುವ ಸಾಧ್ಯತೆಯಿದೆ ಎನ್ನುವ ಅಪಾಯಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಅಲ್ಲದೆ ಕೆಲವೆಡೆ ಇಂದು ದಿನವಿಡೀ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಹೆಚ್ಚಲಿದೆ.

Karnataka Weather

ನಿನ್ನೆಯೂ ಕೂಡ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಇದರಿಂದ ಜನರು ಕೂಡ ಕಂಗೆಟ್ಟು ಹೋಗಿದ್ದರು. ಅಲ್ಲದೆ ಮನೆಯಿಂದ ಹೊರಬರದಂತಹ ತಾಪಮಾನದ ಪ್ರಮಾಣ ದಾಖಲೆ ಮಟ್ಟದಲ್ಲಿ ಹೆಚ್ಚಾಗಿತ್ತು. ಇಂದು ಕೂಡ ಹಗಲು ಬಿಸಿಲಿನ ತಾಪಮಾನ ಹೆಚ್ಚುವುದರಿಂದ, ರಾತ್ರಿ ವೇಳೆಗೆ ತುಂಬಾ ಸೆಕೆ ಕೂಡ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಜಿಲ್ಲಾವಾರು ದಾಖಲಾಗುವ ತಾಪಮಾನ

ಸಂಖ್ಯೆ ಜಿಲ್ಲೆ ತಾಪಮಾನ
1 ಬೆಂಗಳೂರು 33-22
2 ಮಂಗಳೂರು 34-28
3 ಶಿವಮೊಗ್ಗ 38-23
4 ಬೆಳಗಾವಿ 37-21
5 ಬೆಳಗಾವಿ 37-21
5 ಮೈಸೂರು 36-23
6 ಮಂಡ್ಯ 36-23
7 ಮಡಿಕೇರಿ 31-20
8 ರಾಮನಗರ 36-23
9 ಹಾಸನ 34-21
10 ಚಾಮರಾಜನಗರ 36-23
11 ಚಿಕ್ಕಬಳ್ಳಾಪುರ: 33-22
12 ಕೋಲಾರ 35-24
13 ತುಮಕೂರು 35-22
14 ಉಡುಪಿ 34-28
15 ಕಾರವಾರ 34-27
16 ಚಿಕ್ಕಮಗಳೂರು 33-20
17 ದಾವಣಗೆರೆ 38-23
18 ಹುಬ್ಬಳ್ಳಿ 38-22
19 ಚಿತ್ರದುರ್ಗ 37-23
20 ಹಾವೇರಿ 39-23
21 ಬಳ್ಳಾರಿ 40-26
22 ಗದಗ 38-23
23 ಕೊಪ್ಪಳ 39-25
24 ರಾಯಚೂರು 41-28
25 ಯಾದಗಿರಿ 41-28
26 ವಿಜಯಪುರ 39-26
27 ಬೀದರ್ 38-26
28 ಕಲಬುರಗಿ 41-27
29 ಬಾಗಲಕೋಟೆ 40-25

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇಷ್ಟು ದಿನ ಮಳೆರಾಯ ತಂಪೆರೆದಿದ್ದು, ಇದೀಗ ಎರಡು ದಿನಗಳಿಂದ ನಗರದಲ್ಲಿ ಬಿಸಿಲಿನ ತಪಮಾನ ಏರತೊಡಗಿದೆ. ಹಾಗೆಯೇ ಇಂದು ಕೂಡ ಬಿಸಿಲಿನ ಧಗೆ ಹೆಚ್ಚಾಗಲಿದ್ದು, ಇದರಿಂದ ಜನರು ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆಯನ್ನು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+