Karnataka Weather: ಜಿಲ್ಲಾವಾರು ಇಂದು ದಾಖಲಾಗುವ ತಾಪಮಾನ ಮತ್ತು ಎಲ್ಲೆಲ್ಲಿ ಮಳೆ?, ಇಲ್ಲಿದೆ ವಿವರ
ಕರ್ನಾಟಕ, ಮೇ, 19: ರಾಜ್ಯದ ಹಲವೆಡೆ ಈಗಾಗಲೇ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದು, ಇದರಿಂದ ಸಾಕಷ್ಟು ಅನಾಹುತಗಳು ಕೂಡ ಸಂಭವಿಸಿವೆ. ಮತ್ತೊಂದೆಡೆ ಇದೀಗ ಮಳೆರಾಯನ ಆರ್ಭಟ ಕಡಿಮೆಯಾಗುತ್ತಿದ್ದಂತೆ ಬಸಿಲಿನ ತಾಪಮಾನ ಕೂಡ ಹೆಚ್ಚಾಗುತ್ತಿದ್ದು, ಇದರಿಂದ ಜನರು ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಹವಾಮಾನ ಇಲಾಖೆಯ ವರದಿ ಪ್ರಕಾರ ರಾಜ್ಯದ ಜಿಲ್ಲಾವಾರು ಇಂದಿನ ತಾಪಮಾನ ಮತ್ತು ಮಳೆ ಪ್ರಮಾಣ ಎಷ್ಟಿರಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಎರಡು ದಿನಗಳ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಗ್ಗೆ ಬಿಸಿಲಿನ ತಾಪಮಾನ ಹೆಚ್ಚಿದ್ದು, ಸಂಜೆ ಆಗುತ್ತಿಂದತೆ ಮಳೆರಾಯ ಧರೆಗಿಳಿದಿದ್ದ, ಇದು ಬಿಸಿಲಿನಿಂದ ಕಾದಿದ್ದ ನೆಲಕ್ಕೆ ತಂಪೆರೆದಂತಾಗಿತ್ತು. ಆದರೆ ನಿನ್ನೆ ಪೂರ್ತಿ (ಮೇ 18) ಬಿಸಿಲಿನ ವಾತಾವರಣವೇ ಮುಂದುವರೆದಿತ್ತು. ಇಂದು ಕೂಡ ಬಿಸಿಲಿನ ಧಗೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇಂದು ಬಿಸಿಲಿನ ತಾಪಮಾನ ಯಾವ ಭಾಗದಲ್ಲಿ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ದಿನಕಳೆದಂತೆ ಬಿಸಿಲಿನ ಧಗೆ ಹೆಚ್ಚಳವಾಗುತ್ತಲೇ ಇದೆ. ಅದೇ ರೀತಿ ಇಂದು ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಡ ಕವಿದ ವಾತವಾರಣ ಇರಲಿದೆ. ಇನ್ನು ವಿವಿಧ ಜಿಲ್ಲೆಗಳಲ್ಲಿಯೂ ಬಿಸಿಲಿನ ತಾಪಮಾನ ಏರಲಿದೆ. ಮತ್ತೊಂದೆಡೆ ಮಂಜಿನ ನಗರಿ ಮಡಿಕೇರಿ ಜಿಲೆಯಲ್ಲಿ ಜಿನುಗು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮತ್ತೊಂದೆಡೆ ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಅದರಲ್ಲೂ ಯಾದಗಿರಿಯೂ ಬಿಸಿಲನಾಡು ಅಂತಲೇ ಹೆಸರುವಾಸಿ ಆಗಿರುವ ರಾಯಚೂರಿನ ಪಕ್ಕದಲ್ಲೇ ಬರುವ ಜಿಲ್ಲೆಯಾಗಿದೆ. ಆದ್ದರಿಂದ ಇಲ್ಲಿ ತಾಪಮಾನ ಏರಿಕೆ ಆಗಲಿದೆ. ಮೊನ್ನೆ ಕಲಬುರಗಿಯಲ್ಲಿ ಅದೇ ರೀತಿ ಇಂದು ಪಕ್ಕದ ಜಿಲ್ಲೆಯಾದ ಯಾದಗಿರಿಯಲ್ಲಿ ಬಿಸಿಲಿದ ಧಗೆ ಏರಿಕೆಯಾಗಲಿದೆ ಎಂದು ತಿಳಿಸಿದೆ.
ಸಂಖ್ಯೆ ನಗರ ತಾಪಮಾನ
1.ಬೆಂಗಳೂರು: 34-22
2. ಮಂಗಳೂರು: 34-28
3. ಶಿವಮೊಗ್ಗ: 38-23
4. ಬೆಳಗಾವಿ: 38-22
5. ಮಂಡ್ಯ: 37-23
6. ಮೈಸೂರು: 36-22
7. ಮಡಿಕೇರಿ: 29-18
8. ರಾಮನಗರ: 36-23
9. ಹಾಸನ: 35-21
10. ಚಾಮರಾಜನಗರ: 35-22
11. ಕೋಲಾರ: 34-23
12. ಚಿಕ್ಕಬಳ್ಳಾಪುರ: 36-23
13. ತುಮಕೂರು: 36-22
14. ಉಡುಪಿ: 34-28
15. ಕಾರವಾರ: 34-28
16. ಚಿಕ್ಕಮಗಳೂರು: 33-20
17. ದಾವಣಗೆರೆ: 39-23
18. ಹುಬ್ಬಳ್ಳಿ: 39-23
19. ಚಿತ್ರದುರ್ಗ: 38-23
20. ಹಾವೇರಿ: 40-24
21. ಬಳ್ಳಾರಿ: 41-27
22. ಗದಗ: 39-24
23. ಕೊಪ್ಪಳ: 40-26
24. ರಾಯಚೂರು: 41-28
25. ಯಾದಗಿರಿ: 42-29
26. ವಿಜಯಪುರ: 40-27
27. ಬೀದರ್: 39-27
28. ಕಲಬುರಗಿ: 41-29
29. ಬಾಗಲಕೋಟೆ: 41-27
30. ವಿಜಯನಗರ: 39-30
ಹೀಗೆ ಜಿಲ್ಲಾವಾರು ಗರಿಷ್ಠ ಮತ್ತು ಕನಿಷ್ಠ ತಾಪಮಾನದ ವಿವರವನ್ನು ನೀಡಲಾಗಿದೆ. ಹಾಗೆಯೆ ಯಾವ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ, ಅಲ್ಲಿನ ವಾತಾವರಣ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಕೂಡ ನೀಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಜನರು ಅಲ್ಪ ಬಿಸಿಲಿನಿಂದ ಬೇಸತ್ತಿದ್ದಾರೆ. ಅದರಲ್ಲೂ ಇದೀಗ ತಾಪಮಾನ ಮತ್ತಷ್ಟು ಗಗನಕ್ಕೆ ಏರಲಿದ್ದು, ಇದರಿಂದ ಜನರು ಮನೆಯಿಂದ ಹೊರಬರಲು ಚಿಂತಿಸುವಂತಾಗಿದೆ.












Click it and Unblock the Notifications