Get Updates
Get notified of breaking news, exclusive insights, and must-see stories!

Karnataka Weather Alert: ಒಂದಂಕಿಗೆ ಇಳಿದ ತಾಪಮಾನ! ಈ ಜಿಲ್ಲೆಗಳಿಗೆ ಭಾರೀ ಚಳಿ ಎಚ್ಚರಿಕೆ, ಶೀತ ಅಲೆ

ಬೆಂಗಳೂರು: ರಾಜ್ಯದಲ್ಲಿ ಮೈ ನಡುಗುವ ಚಳಿ ಸೃಷ್ಟಿಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ನಿರೀಕ್ಷೆಗೂ ಮೀರಿ ಕುಸಿದಿದೆ. ಹಾಸನ, ಬೀದರ್, ವಿಜಯಪುರದಲ್ಲಿ ಕನಿಷ್ಠ ತಾಪಮಾನ ಒಂದಂಕಿಗೆ ಇಳಿಕೆ ಆಗಿದೆ. ಜನರು ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ಚಳಿ ತಾಳಲಾರದೇ ಕದ ಹಾಕಿಕೊಂಡು ಮನೆಯಲ್ಲಿಯೇ ಕೂರುವಂತಾಗಿದೆ. ಇನ್ನೂ ಕೆಲವು ದಿವಸ ವಿವಿಧ ಜಿಲ್ಲೆಗಳಲ್ಲಿ ಭಾರೀ ಚಳಿ, ಶೀತ ಅಲೆ ವಾತಾವರಣ, ದಟ್ಟ ಮಂಜು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ಅತ್ಯಧಿಕ ಚಳಿ ಹಾಸನ ಜಿಲ್ಲೆಯಲ್ಲಿ ನೆನ್ನೆ ದಾಖಲಾಗಿದೆ. ಹಾಸನದಲ್ಲಿ ಕನಿಷ್ಠ 7.9 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಮೈಕೊರೆವ ಚಳಿ ಜನರ ನಡುಗಿಸಿದೆ. ಅದೇ ರೀತಿ ಉತ್ತರ ಕರ್ನಾಟಕದ ಬೀದರ್ ಮತ್ತು ವಿಜಯಪುರದಲ್ಲಿ ತಲಾ 09 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಡಿಸೆಂಬರ್‌ನಲ್ಲಿ ಚಳಿ, ದಟ್ಟ ಮಂಜಿನ ವಾತಾವರಣ ಅನಾರೋಗ್ಯ ಭೀತಿ ಉಂಟು ಮಾಡಿದೆ. ಈ ಜಿಲ್ಲೆಗಳಲ್ಲಿ ಮುಂದಿನ 03 ದಿನ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

Karnataka Weather Cold Wave Hits in State Temperatures drop in These Districts in next 3 days

ಹಾವೇರಿ ಹಾಗೂ ಧಾರವಾಡ ಜಿಲ್ಲೆಯಲ್ಲಿ 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಈ ತಿಂಗಳ ಅತ್ಯಧಿಕ ಚಳಿ ಎನ್ನಲಾಗಿದೆ. ಮೈಕೊರೆವ ಚಳಿ, ನಿರಂತರ ಶೀತ ಗಾಳಿಗೆ ಜನರು ತತ್ತರಿಸಿದ್ದಾರೆ. ಹೆಚ್ಚಿನ ಮಂಜು ಬೀಳುವ ಪ್ರದೇಶಗಳಲ್ಲಿ ಜನರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಡಿಸೆಂಬರ್ 26 ರವರೆಗೆ ಹಲವು ಜಿಲ್ಲೆಗಳಲ್ಲಿ ಶೀತ ಅಲೆ, ಅಧಿಕ ಚಳಿ ಮುನ್ಸೂಚನೆ ನೀಡಲಾಗಿದೆ.

ಇನ್ನೂ ಗದಗನಲ್ಲಿ 11 ಡಿಗ್ರಿ ಸೆಲ್ಸಿಯಸ್, ಚಿಂತಾಮಣಿ 11 ಡಿಗ್ರಿ ಸೆಲ್ಸಿಯಸ್, ಮಂಡ್ಯ 11 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ಏರ್‌ಪೋರ್ಟ್ 12 ಡಿಗ್ರಿ ಸೆಲ್ಸಿಯಸ್, ರಾಯಚೂರು 12 ಡಿಗ್ರಿ ಸೆಲ್ಸಿಯಸ್, ಆಗುಂಬೆ 12, ದಾವಣಗೆರೆ 12 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಮೈಸೂರು, ಶಿವಮೊಗ್ಗ, ಕೊಪ್ಪಳದಲ್ಲಿ ತಲಾ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಮೂಲಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಾತ್ರಿ, ಬೆಳಗ್ಗೆ ಚಳಿ ಆವರಿಸಿದೆ. ಹಗಲು ಹೊತ್ತು ಒಣಹವೆ ಮುನ್ಸೂಚನೆ ಇದೆ.

ಆರೋಗ್ಯದ ಬಗ್ಗೆ ಇರಲಿ ಎಚ್ಚರ

ಕಾರವಾರ, ಮಂಗಳೂರು, ಹೊನ್ನಾವರ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಕನಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಇಲ್ಲಿ ಗರಿಷ್ಠ ತಾಪಮಾನ ಏರಿಕೆ ಆಗುತ್ತಿದ್ದು, ಶುಷ್ಕ ವಾತಾವರಣ ಉಂಟಾಗಿದೆ. ನಿರಂತರ ಚಳಿ ಹಾಗೂ ಒಣಹವೆಯ ಬಿಸಿಲಿಗೆ ದೇಹ ಒಗ್ಗಿಕೊಳ್ಳಲು ಹೆಣಗಾಡುತ್ತಿವೆ. ಇದರಿಂದ ಕೆಲವರಿಗೆ ಶೀತ, ಕೆಮ್ಮು, ನೆಗಡಿ ಹಾಗೂ ಉಸಿರಾಟ ತೊಂದರೆ ಆದಲ್ಲಿ ಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕಿದೆ. ಗರ್ಭೀಣಿಯರು, ಮಕ್ಕಳು, ವೃದ್ಧರು ಚಳಿಗಾಲ ಮುಗಿಯುವವರೆಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ.

ಎರಡು ಕಡೆ ಚಂಡಮಾರುತ ಪರಿಚಲನೆ

ಸಮುದ್ರ ಮೇಲ್ಮೈನಲ್ಲಿ ಎರಡು ಕಡೆ ಚಂಡಮಾರುತ ಪರಿಚಲನೆ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆಯು ಮಂಗಳವಾರ ಮಾಹಿತಿ ಪ್ರಕಾರ, ದಕ್ಷಿಣ ತಮಿಳುನಾಡು ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ನಿರ್ಮಾಣವಾಗಿದೆ. ಅದೇ ರೀತಿ ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಇದೆ. ಇವುಗಳು ಕರಾವಳಿ ರಾಜ್ಯಗಳ ಹವಾಮಾನದ ಮೇಲೆ ಕೊಂಚ ಪ್ರಭಾವ ಬೀರುವ ಸಾಧ್ಯತೆ ಇದೆ.

ಬೆಂಗಳೂರು ಹವಾಮಾನ ಮುನ್ಸೂಚನೆ

ರಾಜಧಾನಿ ಬೆಂಗಳೂರಲ್ಲಿ ಕೆಲದ ದಿನಗಳ ಹಿಂದೆ 16 ಡಿಗ್ರಿ ಸೆಲ್ಸಿಯಸ್‌ಗೆ ಏರಿದ್ದ ಕನಿಷ್ಠ ತಾಪಮಾನ ಮಂಗಳವಾರ ಮತ್ತೆ 14 ಡಿ.ಸೆ.ಗೆ ಕುಸಿದಿದೆ. ಇದು ಎರಡು ದಿನಗಳಿಂದ ನಗರದಲ್ಲಿ ಚಳಿ ಹೆಚ್ಚಾಗಲು ಕಾರಣವಾಗಿದೆ. ಗರಿಷ್ಠ ತಾಪಮಾನ 26-27 ಕಂಡು ಬರಲಿದೆ. ಮುಂದಿನ ಮೂರು ದಿನದಲ್ಲಿ ಚಳಿ ಹೆಚ್ಚಾಗುವ ನಿರೀಕ್ಷೆ ಇದೆ. ಕೆಲವೆಡೆ ಬೆಳಗ್ಗೆ ದಟ್ಟ ಮಂಜು, ಮಬ್ಬು ಕವಿದ ವಾತಾವರಣ ನಿರ್ಮಾಣವಾಗಬಹುದು ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+