ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಭಾರೀ ಮಳೆ, ಕಬಿನಿ ಜಲಾಶಯ ಬಹುತೇಕ ಭರ್ತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19 : ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ. ದಕ್ಷಿಣ ಕನ್ನಡ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರದ ತನಕ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ವಿರಾಜಪೇಟೆ ತಾಲೂಕಿನ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿತ್ತು. ತಲಕಾವೇರಿಯಲ್ಲಿಯೂ ಉತ್ತಮ ಮಳೆಯಾಗಿದೆ.

ಮೈಸೂರು: ಕಬಿನಿ ಜಲಾಶಯ ಭರ್ತಿಗೆ 3 ಅಡಿಯಷ್ಟೇ ಬಾಕಿಮೈಸೂರು: ಕಬಿನಿ ಜಲಾಶಯ ಭರ್ತಿಗೆ 3 ಅಡಿಯಷ್ಟೇ ಬಾಕಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಭಾರೀ ಮಳೆಯಾಗಿದೆ. ಕೊಟ್ಟಿಗೆಹಾರ ಬಸ್ ನಿಲ್ದಾಣದ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಬಣಕಲ್, ಬಾಳೂರು, ಗುತ್ತಿ, ದೇವರಮನೆ, ಭೈರಾಪುರದಲ್ಲಿ ಭಾರೀ ಮಳೆಯಾಗುತ್ತಿದೆ.

Karnataka water level of dams Sep 19, 2017

ಮಲೆನಾಡು, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ಮಡಿಕೇರಿಯಲ್ಲಿ 79.4, ನಾಪೋಕ್ಲುವಿನಲ್ಲಿ 68.6, ಭಾಗಮಂಡಲದಲ್ಲಿ 71, ವಿರಾಜಪೇಟೆಯಲ್ಲಿ 104 ಮಿ.ಮೀ.ಮಳೆ ಸುರಿದಿದೆ.

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1796.20
ಸುಪಾ 1849.92 1793.50
ವಾರಾಹಿ 1949.50 1924.08
ಹಾರಂಗಿ 2859.00 2857.21
ಹೇಮಾವತಿ 2922.00 2287.00
ಕೆಆರ್‌ಎಸ್ 124.80 101.95
ಕಬಿನಿ 2284.00 2280.90
ಭದ್ರಾ 2158.00 2137.41
ತುಂಗಭದ್ರಾ 1633.00 1624.80
ಘಟಪ್ರಭಾ 2175.00 2156.96
ಮಲಪ್ರಭಾ 2079.50 2056.35
ಆಲಮಟ್ಟಿ 1704.81 1704.81
ನಾರಾಯಣಪುರ 1615.00 1614.19
English summary
The Kabini reservoir is almost full with the water-level reaching 2280 ft on Monday as against the full reservoir level of 2,284 ft. Water level in almost all dams in Karnataka has increased considerably. ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X