VAO Exam Scam: ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಅಕ್ರಮ! ತನಿಖೆಗೆ ಆದೇಶಿಸಿದ KEA, ಡಿಸಿಗೆ ಪತ್ರ

ಬೆಂಗಳೂರು: KSRP ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಕೇವಲ‌ 25 ಅಂಕ ಪಡೆದಿದ್ದ ಹಾವೇರಿ ಜಿಲ್ಲೆಯ ಅಭ್ಯರ್ಥಿಯೊಬ್ಬ ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ( KEA) ನಡೆಸಿದ್ದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದವು. ವಿದ್ಯಾರ್ಥಿ ಸಂಘಟನೆಗಳ ಒತ್ತಾಯದ ಮೇರೆಗೆ ಕೆಇಎ ಬುಧವಾರ ತನಿಖೆಗೆ ಆದೇಶಿಸಿದೆ.

ಪಿಯುಸಿ ಪಾಸಾಗಲು 13 ವರ್ಷಗಳನ್ನು ಪಡೆದಿದ್ದ ಹಾವೇರಿಯ 31 ವರ್ಷದ ವ್ಯಕ್ತಿಯೊಬ್ಬರು ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದರು. ನಂತರ ನಡೆದ VAO ಪರೀಕ್ಷೆಯಲ್ಲಿ ‌151 ಅಂಕಗಳನ್ನು ಹೇಗೆ ಪಡೆದ? ಎಂದು ಸಾಮಾಜಿಕ ಜಾಲತಾಣದಲ್ಲಿ ಆತನ ಓಎಂಆರ್ ಸೇರಿ ಹಲವು ಪುರಾವೆಗಳನ್ನು ಎಕ್ಸ್‌ನಲ್ಲಿ ಬುಧವಾರ ಬೆಳಗ್ಗೆ ಹಂಚಿಕೊಳ್ಳಲಾಗಿತ್ತು. ಸೂಕ್ತ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿ ಬಂತು. ಇದರ ಬೆನ್ನಲ್ಲೇ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಅನುಮಾನಗಳ ಬಗ್ಗೆ ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

Karnataka VAO Exam Scam Probe

ಡಿಸಿಗೆ ಪತ್ರ: ವರದಿ ನೀಡಲು ಸೂಚನೆ

ಈ ಸಂಬಂಧ ಜಿಲ್ಲಾ ಪರೀಕ್ಷಾ ಮುಖ್ಯ ಅಧೀಕ್ಷಕರೂ ಆದ ಹಾವೇರಿ ಜಿಲ್ಲಾಧಿಕಾರಿಯವರಿಗೆ ಪತ್ರ ವರೆದು ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಏನಾದರು ಲೋಪಗಳು ಆಗಿವೆಯೇ‌ ಎಂಬುದರ ಬಗ್ಗೆ ಸಿಸಿಟಿವಿ ವಿಡಿಯೊ ತುಣುಕುಗಳನ್ನು ನೋಡಿ, ಸಮಗ್ರವಾಗಿ ವಿಚಾರಣೆ ನಡೆಸಿ ವರದಿ‌ ನೀಡಲು ಕೋರಲಾಗಿದೆ. ಅಗತ್ಯ ಬಿದ್ದರೆ‌ ಪೊಲೀಸರಿಗೆ ದೂರು ಕೊಡುವುದಕ್ಕೂ ಸೂಚಿಸಲಾಗಿದೆ.

ಅನುಮಾನಗಳಿಗೆ ಇತಿಶ್ರೀ ಶೀಘ್ರ; ಕೆಇಎ

ಹಾವೇರಿ ಜಿಲ್ಲೆಯ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ‌ಅ.4ರಂದು ನಡೆದ VAO ಪರೀಕ್ಷೆಯನ್ನು ಅದೇ ಜಿಲ್ಲೆಯ ಶಂಕರ ಬನ್ನೂರು ಎಂಬುವರು ಬರೆದಿದ್ದಾರೆ. ಇವರ ಶೈಕ್ಷಣಿಕ ಹಿನ್ನೆಲೆ ಕೂಡ ಹೇಳಿಕೊಳ್ಳುವಂತಿಲ್ಲ.‌ ಅಂತಹ ಮಾಮೂಲಿ ಅಭ್ಯರ್ಥಿ ಇಷ್ಟೊಂದು ಅಂಕ ಹೇಗೆ ಪಡೆದ? ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ, ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಸಿದ್ದಾರೆ. ಈ ಅನುಮಾನಗಳಿಗೆ‌ ಇತಿಶ್ರೀ ಹಾಡಲು ತನಿಖೆಯ ತೀರ್ಮಾನ ಮಾಡಲಾಗಿದೆ.

ಪ್ರಾಧಿಕಾರದಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ಅರ್ಜಿ ಹಾಕಿದ್ದ ಅಭ್ಯರ್ಥಿಯೇ‌ ಕೇಂದ್ರಕ್ಕೆ ಹೋಗಿ ಪರೀಕ್ಷೆ‌ ಬರೆದಿದ್ದಾರೆ. ಇದು ಮುಖ ಚಹರೆ ತಂತ್ರಜ್ಞಾನದ ಮೂಲಕ ದೃಢೀಕರಣ ಕೂಡ ಆಗಿದೆ. ಅಭ್ಯರ್ಥಿಗೆ ಕೊಟ್ಟಿರುವ ಒಎಂಅರ್ ಕೂಡ ಸರಿ ಇದೆ. ಅಲ್ಲದೆ ಅದೇ ಒಎಂಆರ್‌ ಅನ್ನು ಅ.5ರಂದು ಸ್ಕ್ಯಾನ್ ಮಾಡಿ ಕೆಇಎ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಇದಾರಚೆಗೆ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಏನಾದರು ಲೋಪಗಳು ಆಗಿವೆಯೇ ಎಂಬುದನ್ನು ಅಲ್ಲಿನ ಜಿಲ್ಲಾಧಿಕಾರಿಯೇ‌ ಪರಿಶೀಲಿಸಿ ವರದಿ ನೀಡಬೇಕಾಗಿದೆ.

ತಿದ್ದುಪಡಿ ದಾಖಲೆ

ಸದರಿ ಅಭ್ಯರ್ಥಿ‌ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವುದು‌ 2013ರಲ್ಲಿ. ಇದು ವಿಎಒ ಹುದ್ದೆಗೆ ಅರ್ಜಿ‌ ಹಾಕಿದ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ‌ ದತ್ತಾಂಶದ ಜತೆ‌ ಆನ್ ಲೈನ್ ನಲ್ಲಿ ಹೊಂದಾಣಿಕೆ ಆಗಿದೆ. ಅದರೆ ಕೆಎಸ್ಆರ್ ಪಿ ಅರ್ಜಿಯಲ್ಲಿ ಇದೇ ಅಭ್ಯರ್ಥಿ ತಾನು ಉತ್ತೀರ್ಣನಾಗಿದ್ದು 2026ರಲ್ಲಿ ಎಂದು ತಿದ್ದುಪಡಿ‌ ಮಾಡಿಕೊಂಡಿರುವುದೂ ಪ್ರಾಧಿಕಾರದ ಸರ್ವರ್ ನಲ್ಲಿ ದಾಖಲಾಗಿದೆ.

ಕಷ್ಟಪಟ್ಟು ಓದುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗಬಾರದೆಂದು ನೂರಕ್ಕೆ ನೂರು ಪಾರದರ್ಶಕವಾಗಿ ಪರೀಕ್ಷೆ‌ ನಡೆಸುವ ಉದ್ದೇಶದಿಂದ ಪ್ರಾಧಿಕಾರವು ಕಳೆದೆರಡು ವರ್ಷಗಳಿಂದ ಒಎಂಆರ್ ಪ್ರತಿ ಸ್ಕ್ಯಾನ್ ಮಾಡಿ ವೆಬ್ ಸೈಟ್ ಗೆ ಹಾಕುವುದು ಸೇರಿದಂತೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದರ‌ ನಡುವೆಯೂ ಏನಾದರು ಲೋಪಗಳಿದ್ದರೆ ಅವುಗಳನ್ನು‌ ಬಯಲಿಗೆಳೆದು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಈ ತನಿಖೆ‌‌ ಸಹಕಾರಿಯಾಗಲಿದೆ. ಈ ಕಾರಣಕ್ಕೇ ತನಿಖೆಗೆ ಆದೇಶ ನೀಡಲಾಗಿದೆ ಎಂದು ಅವರು ವಿವರಿಸಿದರು.

ಏನಿದು ಪರೀಕ್ಷಾ ಅಕ್ರಮ?

ಹಾವೇರಿಯ ಈ ಶಂಕರ್ ಅವರು 1994ರಲ್ಲಿ ಜನಿಸಿದ್ದಾರೆ. ಆತ ಪಿಯುಸಿಯನ್ನು 2026ರಲ್ಲಿ ಕಡಿಮೆ ಅಂಕಗಳಿಂದ ಉತ್ತೀರ್ಣನಾಗಿದ್ದಾನೆ. ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯಲ್ಲೂ ಓಎಂಆರ್‌ ನಲ್ಲಿ ತಪ್ಪು ಗುರುತು ಹಾಕಿದ್ದು, ಕಡಿಮೆ (25) ಅಂಕ ಪಡೆದಿದ್ದಾರೆ. ಅದಾಗಿ ಕೆಲವೇ ದಿನಗಳಲ್ಲಿ ನಡೆದ VAO ನೇಮಕಾತಿ ಪರೀಕ್ಷೆಯಲ್ಲಿ 151 ಅಂಕ ಪಡೆದದ್ದು ಹೇಗೆ? ಓಎಂಆರ್‌ ಒಂದೇ ಒಂದು ತಪ್ಪು ಆಗಿಲ್ಲ, ಹೆಚ್ಚುವರಿ ಗುರುತು ಮಾಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+