ಸರ್ಕಾರದ ಹೊಸ ಕಾನೂನು: ಗೂಡ್ಸ್, ಟ್ರಕ್ ಮಾಲೀಕರು ನಿಗಿ ನಿಗಿ ಕೆಂಡ
ಬೆಂಗಳೂರು, ಸೆಪ್ಟಂಬರ್ 01: ಸಾರಿಗೆ ಇಲಾಖೆ ವಿರುದ್ಧ ಗೂಡ್ಸ್ ಟ್ರಕ್ ಮಾಲೀಕರು ನಿಗಿ ನಿಗಿ ಕೆಂಡವಾಗಿದ್ದು, ಬೆಂಕಿ ಉಗುಳುತ್ತಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಬೇಡಿ ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರದ ಈ ಹೊಸ ನಿಯಮಗಳಿಂದ ನಮ್ಮ ಬದುಕು ನಡೆಸಲು ಕಷ್ಟ ಆಗುತ್ತಿದೆ ಎಂದು ಕಿಡಿಕಾರಿದ್ದು, ಜೊತೆಗೆ ಶಾಂತಿ ನಗರದ ಆರ್‌ಟಿಒ ಕಚೇರಿ ಎದುರು ಸಾಲಾಗಿ ಗೂಡ್ಸ್ ಲಾರಿ ನಿಲ್ಲಿಸಿ ಕಂಪ್ಲೀಟ್ ಒಂದು ರೋಡ್ ಬ್ಲಾಕ್ ಮಾಡಿ ಬಿಟ್ಟಿದ್ದಾರೆ.
ಸಾರಿಗೆ ಇಲಾಖೆಯ ಆಯುಕ್ತರ ಜೊತೆಗೆ ತಮ್ಮ ಸಮಸ್ಯೆ ಬಗ್ಗೆ ಪರಿ ಪರಿಯಾಗಿ ಹೇಳಿಕೊಂಡಿದ್ದಾರೆ. ಗೂಡ್ಸ್ ವಾಹನಗಳಿಗೆ ಒಂದೇ ಬಾರಿಗೆ ಲೈಫ್ ಟ್ಯಾಕ್ಸ್‌ನ್ನು ಭರಿಸುವ ಆದೇಶವನ್ನು ರಾಜ್ಯ ಸರಕಾರ ದಿಢೀರ್ ಹೊರಡಿಸಿದ್ದು, ಇದರಿಂದ ಲಾರಿ ಟೆಂಪೋ ಮಾಲಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ. ಲೈಫ್ ಟೈಮ್ ರೋಡ್ ಟ್ಯಾಕ್ಸ್ ಕಟ್ಟಲು ಕೊಟ್ಟಿರುವ ಸರ್ಕಾರ ಆದೇಶವೇ ಇಂದು ಲಾರಿ ಮಾಲೀಕರ ಕಣ್ಣು ಕೆಂಪಾಗಲು ಕಾರಣವಾಗಿದೆ.

ಈ ಮೊದಲು ಮೂರು ತಿಂಗಳಿಗೆ 2 ಸಾವಿರ ವರ್ಷಕ್ಕೆ ಎಂಟು ಸಾವಿರ ಹಣ ರೋಡ್ ಟ್ಯಾಕ್ಸ್ ಕಟ್ಟುತ್ತಿದ್ದ ಎಂಜಿವಿ ವೆಹಿಕಲ್ಸ್. ಈ ರೂಲ್ ಬದಲು ಮಾಡಿರುವ ಹಿನ್ನಲೆ ಸಾರಿಗೆ ಇಲಾಖೆ ವಿರುದ್ಧ ಸಿಡಿದ ಗೂಡ್ಸ್ ಟ್ರಕ್ ಮಾಲೀಕರು ಶಾಂತಿನಗರ ರಸ್ತೆಯುದ್ದಕ್ಕೂ ಗೂಡ್ಸ್ ವಾಹನ ನಿಲ್ಲಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಶಾಂತಿ ನಗರ ಆರ್ಟಿಓ ಕಛೇರಿಗೆ ಮುತ್ತಿಗೆಗೆ ತಯಾರಿ ಕೂಡ ನಡೆಸಿದ್ದರು. ಶಾಂತಿನಗರ ಆರ್ಟಿಓ ಕಚೇರಿ ಟ್ರಕ್ ನಿಲ್ಲಸಿ ಪ್ರತಿಭಟನೆ ಮಾಡಿದ್ದಾರೆ. 250ಕ್ಕೂ ಹೆಚ್ಚು ಎಂಜಿವಿ (ಮೀಡಿಯಂ ಗೂಡ್ಸ್ ವೆಹಿಕಲ್ ) ನಿಲ್ಲಿಸಿರೋ ಗೂಡ್ಸ್ ಟ್ರಕ್ ಮಾಲಿಕರು, ಆದೇಶ ವಾಪಸ್ ಹಿಂಪಡೆಯಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದರು.

ವಾಹನಗಳಿಗೆ ಲೈಫ್ ಟೈಂ ಟ್ಯಾಕ್ಸ್ ಪಾವತಿಗೆ ಸರ್ಕಾರ ಆದೇಶ ವಿರೋಧಿಸಿ ಮುತ್ತಿಗೆಗೆ ಮುಂದಾಗಿರುವ ಮಾಲೀಕರು, ಒಂದು ವೇಳೆ ಸರ್ಕಾರ ಆದೇಶ ಹಿಂಪಡೆಯದೇ ಇದ್ದರೆ ಇಂದು ಬೆಂಗಳೂರಿನಾದ್ಯಂತ ಎರಡೂವರೆ ಸಾವಿರ ಎಂಜಿವಿ ಗೂಡ್ಸ್ ವಾಹನ ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ ಅಂತ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಖಾಲಿ ಶಾಂತಿನಗರ ಆರ್‌ಟಿಒ ಕಚೇರಿ ಎದುರು ಲಾರಿ ನಿಲ್ಲಿಸಿರುವ ಎಫೆಕ್ಟ್ ರೋಡ್ ಬ್ಲಾಕ್ ಆಗಿ ಟ್ರಾಫಿಕ್ ಜಾಮ್ ಆಗಲು ಕಾರಣ ಆಗಿದೆ. ಅಂತದ್ದರಲ್ಲಿ ಇಡೀ ಬೆಂಗಳೂರು ಗಾಡಿ ನಿಲ್ಲಿಸಿದರೆ ಆ ಸಂದರ್ಭ ಊಹೆ ಮಾಡಿಕೊಳ್ಳುವುದು ಕೂಡ ಅಸಾಧ್ಯ ಆಗಿರುತ್ತದೆ. ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಗೂಡ್ಸ್ ವೆಹಿಕಲ್ ಮಾಲಿಕರ ಸಂಘ ಎಚ್ಚರಿಕೆ ನೀಡಿದೆ.
ಇನ್ನು ಶಾಂತಿನಗರದಲ್ಲಿ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಲಾರಿ ನಿಲ್ಲಿಸಲಾಗಿದೆ. ಒಂದು ರಸ್ತೆಯನ್ನು ಕಂಪ್ಲೀಟ್ ಬ್ಲಾಕ್ ಮಾಡಲಾಗಿದ್ದು ಬಿಸಿ ಮುಟ್ಟಿಸುವ ಪ್ರಯತ್ನ ಮಾಡಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಮಾಲೀಕರು ಕೂಡ ಜಮಾಯಿಸಿದ್ದಾರೆ. ಇನ್ನೂ ಪರಿಸ್ಥಿತಿ ನೋಡಿ ನಿಯಂತ್ರಣಕ್ಕೆ ತರುವ ಸಲುವಾಗಿ ಪ್ರತಿಭಟನಾಕಾರರನ್ನು ಸಾರಿಗೆ ಆಯುಕ್ತ ಯೋಗೇಶ್ ಎ.ಎಂ ಭೇಟಿ ಮಾಡಿದ್ದರು.
ಲೈಫ್ ಟ್ಯಾಕ್ಸ್ ಹಿಂಪಡೆಯುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸುತ್ತೇನೆ. ನಾನು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಚಿವರು ಹಾಗೂ ಸರ್ಕಾರದ ಮುಂದೆ ಪ್ರಸ್ತಾಪ ಮಾಡುತ್ತೇವೆ. ಈ ಸಂಬಂಧ ಈಗಾಗಲೆ ಭೇಟಿಗಾಗಿ ತೆರಳುತ್ತೇವೆ ಸಾರಿಗೆ ಆಯುಕ್ತರು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications