Foreign Students: ದೇಶದಲ್ಲೇ ಅತಿ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿರುವುದು ನಮ್ಮ ರಾಜ್ಯದಲ್ಲೇ!
ಬೆಂಗಳೂರು, ಫೆಬ್ರವರಿ 06: ದೇಶದ ಯಾವುದೇ ರಾಜ್ಯಕ್ಕಿಂತ ಕರ್ನಾಟಕವು ಅತಿ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ನೆಲಿ ಒದಗಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ರಾಜ್ಯದ ವಿವಿಧ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ 6,004 ವಿದೇಶಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.
ಉನ್ನತ ಶಿಕ್ಷಣಕ್ಕಾಗಿ ಅಖಿಲ ಭಾರತ ಸಮೀಕ್ಷೆ 2021-22 (All India Survey for Higher Education 2021-22) ವರದಿ ಬಿಡುಗಡೆಯಾಗಿದ್ದು, ಇದರ ಪ್ರಕಾರ ದೇಶದಲ್ಲಿ 6,004 ವಿದೇಶಿ ವಿದ್ಯಾರ್ಥಿಗಳು ತಮ್ಮ್ ಉನ್ನತ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಂಡಿರುವುದು ಕರ್ನಾಟಕ ಎಂಬ ಮಾಹಿತಿ ನೀಡಿದೆ.

ವರದಿಯ ಪ್ರಕಾರ, ಭಾರತದಲ್ಲಿ ಓದಲು ಬಯಸುವವರಿಗೆ ಬೆಂಗಳೂರು ನೆಚ್ಚಿನ ಶೈಕ್ಷಣಿಕ ತಾಣವಾಗಿದೆ. ಕರ್ನಾಟಕದ ನಂತರ ಪಂಜಾಬ್ 5,971 ಅಂತರರಾಷ್ಟ್ರೀಯ ವಿದ್ಯಾರ್ಥಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಕ್ರಮವಾಗಿ 4,856 ಮತ್ತು 4,323 ವಿದೇಶಿ ವಿದ್ಯಾರ್ಥಿಗಳನ್ನು ಹೊಂದಿದ್ದು, ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡಿವೆ.
13,000 ಕ್ಕೂ ಹೆಚ್ಚು ನೇಪಾಳದ ವಿದ್ಯಾರ್ಥಿಗಳು ಭಾರತದಲ್ಲಿ ಅಧ್ಯಯನ ಮಾಡುತ್ತಿರುವುದರಿಂದ ಹೆಚ್ಚಿನ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ನೆರೆಯ ನೇಪಾಳದಿಂದ ಭಾರತಕ್ಕೆ ಬರುತ್ತಾರೆ. ನೇಪಾಳದ ವಿದ್ಯಾರ್ಥಿಗಳಿಗೆ ಭಾರತ ವೀಸಾ ಮುಕ್ತ ದೇಶವಾಗಿದೆ. ಹೀಗಾಗಿ ಅಲ್ಲಿನ ಯುವ ಜನತೆ ತಮ್ಮ ಉತ್ತಮ ಶೈಕ್ಷಣಿಕ ಜೀವನ ಮತ್ತು ಹೆಚ್ಚಿನ ಅವಕಾಶಗಳಿಗಾಗಿ ಭಾರತಕ್ಕೆ ಬರುತ್ತಾರೆ.
ಜಗತ್ತಿನಾದ್ಯಂತ 170 ದೇಶಗಳಿಂದ ಒಟ್ಟು 46,878 ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. ನೇಪಾಳದ ಹೊರತಾಗಿ, ಅಫ್ಘಾನಿಸ್ತಾನ, ಯುಎಇ, ಟಿಬೆಟ್, ಬಾಂಗ್ಲಾದೇಶ, ಐಸ್ಲ್ಯಾಂಡ್ ಮತ್ತು ಶ್ರೀಲಂಕಾದಿಂದ ಅನೇಕ ವಿದ್ಯಾರ್ಥಿಗಳು ಭಾರತೀಯ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನೇಪಾಳವು ಅಗ್ರಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನದ 3,151 ಮಂದಿ, ಅಮೆರಿಕಾದ 2,893 ವಿದ್ಯಾರ್ಥಿಗಳು, ಬಾಂಗ್ಲಾದೇಶದ 2,606 ಮತ್ತು ಯುಎಇಯ 2,287 ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನೇಪಾಳದ ವಿದ್ಯಾರ್ಥಿಗಳು ಸ್ನಾತಕಪೂರ್ವ ಅಧ್ಯಯನಕ್ಕಾಗಿ ಬಂದರೆ, ಅಫ್ಘಾನಿಸ್ತಾನದಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪಿಎಚ್‌ಡಿ ಆಕಾಂಕ್ಷಿಗಳಾಗಿದ್ದಾರೆ.
ಬೆಂಗಳೂರು ಅನೇಕ ಕೋರ್ಸ್‌ಗಳನ್ನು ನೀಡುವ ವ್ಯಾಪಕ ಶ್ರೇಣಿಯ ಖಾಸಗಿ ಕಾಲೇಜುಗಳನ್ನು ಹೊಂದಿದೆ. ಈ ಕಾಲೇಜುಗಳಲ್ಲಿ ಹೆಚ್ಚಿನವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ಅಂತರರಾಷ್ಟ್ರೀಯ ಘಟಕಗಳನ್ನು ಕೂಡ ರಚಿಸಿವೆ. ಬೆಂಗಳೂರು ಕಾಲೇಜುಗಳಲ್ಲದೆ, ಮೈಸೂರು, ಮಣಿಪಾಲ, ಧಾರವಾಡ ಮತ್ತು ಮಂಗಳೂರಿನ ವಿಶ್ವವಿದ್ಯಾನಿಲಯಗಳು ಸಹ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊಂದಿವೆ.
"ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಬೆಂಗಳೂರು ಎಲ್ಲರ ಆದ್ಯತೆಯ ತಾಣವಾಗಿದೆ" ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಅಂತರರಾಷ್ಟ್ರೀಯ ವಿದ್ಯಾರ್ಥಿ ಸೌಲಭ್ಯ ಘಟಕದ ಪ್ರಭಾರಿ ಅಧ್ಯಾಪಕ ಹನುಮಂತಪ್ಪ ಎಂ ಅವರನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
"ನೇಪಾಳದಿಂದ ಭಾರತಕ್ಕೆ ವೀಸಾ-ಮುಕ್ತ ಪ್ರಯಾಣವು ಅಲ್ಲಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿಗೆ ಬರಲು ಪ್ರಮುಖ ಕಾರಣವಾಗಿದೆ. ಅಲ್ಲದೆ, ನಾವು ನೀಡುವ ಕೋರ್ಸ್‌ಗಳಿಂದ ವಿದ್ಯಾರ್ಥಿಗಳು ನಮ್ಮ ರಾಜ್ಯದತ್ತ ಆಕರ್ಷಿತರಾಗುತ್ತಾರೆ. ಕೃತಕ ಬುದ್ಧಿಮತ್ತೆ [AI], ಯಂತ್ರ ಕಲಿಕೆ, ಡೇಟಾ ಸೈನ್ಸ್ ಗಳಂತಹ ಹೊಸ ಕೋರ್ಸ್‌ಗಳು ಜನಪ್ರಿಯವಾಗಿವೆ. ಕಂಪ್ಯೂಟರ್ ಅಪ್ಲಿಕೇಶನ್‌ಗಳು, ವ್ಯವಹಾರ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕೂಡ ಬಹಳಷ್ಟು ವಿದ್ಯಾರ್ಥಿಗಳನ್ನು ಸೆಳೆಯುತ್ತವೆ" ಎಂದು ಮಾಹಿತಿ ನೀಡಿದ್ದಾರೆ.
-
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
ಬಳ್ಳಾರಿ ಹಾಸ್ಟೆಲ್ ಹಲ್ಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಅಪ್ರಾಪ್ತ ಆರೋಪಿ ಪೊಲೀಸ್ ವಶಕ್ಕೆ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
CBSE ಗಣಿತ ಪ್ರಶ್ನೆಪತ್ರಿಕೆಯ QR ಕೋಡ್ ಸ್ಕ್ಯಾನ್ ಮಾಡಿದ್ರೆ ಬರ್ತಿದೆ ಇಂಗ್ಲಿಷ್ ಹಾಡು: ಸಿಬಿಎಸ್ಇ ಸ್ಪಷ್ಟನೆ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ












Click it and Unblock the Notifications