ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: 2020ರಲ್ಲಿ ಅತಿ ಹೆಚ್ಚು ಉದ್ಯಮಿಗಳು ಆತ್ಮಹತ್ಯೆ

|
Google Oneindia Kannada News

ಬೆಂಗಳೂರು, ನವೆಂಬರ್ 10: ಕರ್ನಾಟಕದಲ್ಲಿ 2020ರಲ್ಲಿ ಅತಿ ಹೆಚ್ಚು ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೊರೊನಾ ಲಾಕ್‌ಡೌನ್ ಕಾರಣದಿಂದ ದೇಶದಾದ್ಯಂತ ಉದ್ಯಮಗಳು ಸ್ಥಗಿತಗೊಂಡಿದ್ದರಿಂದ ಉದ್ಯಮಿಗಳು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದಾಗಿ 2020ರಲ್ಲಿ ಸುಮಾರು 11,716 ಉದ್ಯಮಿಗಳು ಆತ್ಮಹತ್ಯೆಯ ಹಾದಿ ತುಳಿದಿದ್ದಾರೆಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್'ಸಿಆರ್'ಬಿ) ವರದಿ ನೀಡಿದೆ.

ಆತ್ಮಹತ್ಯೆ: ಮಹಾರಾಷ್ಟ್ರ ನಂ.1, ಐದನೇ ಸ್ಥಾನದಲ್ಲಿದೆ ಕರ್ನಾಟಕಆತ್ಮಹತ್ಯೆ: ಮಹಾರಾಷ್ಟ್ರ ನಂ.1, ಐದನೇ ಸ್ಥಾನದಲ್ಲಿದೆ ಕರ್ನಾಟಕ

ಈ ಪಟ್ಟಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. 2019ಕ್ಕೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳ ಸಂಖ್ಯೆಯಲ್ಲಿ ಶೇ.29ದಷ್ಟು ಏರಿಕೆಯಾಗಿದೆ.

Karnataka Tops List Of Businessmen’s Suicides In 2020

2019 ರಲ್ಲಿ, ರಾಜ್ಯವು 875 ಉದ್ಯಮಿಗಳ ಆತ್ಮಹತ್ಯೆಗೆ ಶರಣಾಗಿದ್ದರು. ಇದರಲ್ಲಿ 175 ಮಾರಾಟಗಾರರು, 204 ವ್ಯಾಪಾರಿಗಳು ಮತ್ತು 496 ಇತರೆ ವ್ಯಾಪಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2020ರಲ್ಲಿ 592 ಮಾರಾಟಗಾರರು, 968 ವ್ಯಾಪಾರಿಗಳು ಮತ್ತು 212 ಉದ್ಯಮಿಗಳು ಇತರೆ ವ್ಯಾಪಾರಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರೊಂದಿಗೆ ಒಟ್ಟು 1,772 ಮಾಡಿಕೊಂಡಂತಾಗಿದೆ. 1,772 ಪೈಕಿ 1,699 ಮಂದಿ ಪುರುಷಕರು ಹಾಗೂ 73 ಮಂದಿ ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ವರದಿಯಿಂದ ತಿಳಿದುಬಂದಿದೆ.

ಇದರೊಂದಿಗೆ 2019 ರಲ್ಲಿ ದೇಶದ ಉದ್ಯಮ ಸಮುದಾಯದಿಂದ ಆತ್ಮಹತ್ಯೆ ಮಾಡಿಕೊಂಡ ಒಟ್ಟು ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ 2020 ರಲ್ಲಿ ಅಗ್ರ ಸ್ಥಾನಕ್ಕೆ ಏರಿದೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಬಹಿರಂಗಪಡಿಸಿವೆ.

ಕರ್ನಾಟಕದಲ್ಲಿ ಅತೀ ಹೆಚ್ಚು ಜನ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, 2020ರಲ್ಲಿ 1,772 ಜನರು ಸಾವಿನ ಕದ ತಟ್ಟಿದ್ದಾರೆ. 2019ರ ಸಂಖ್ಯೆಗೆ ಹೋಲಿಕೆ ಮಾಡಿದರೆ, 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯು ಶೇ.103ರಷ್ಟು ಏರಿಕೆ ಕಂಡಿದೆ.

ಭಾರತದಲ್ಲಿ 2020 ರ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. 2020 ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 11,716 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೇ ಅವಧಿಯಲ್ಲಿ ದೇಶದಾದ್ಯಂತ 10,677 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂದಾಜಿಸಿದೆ.

2015 ರಲ್ಲಿ, 100 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಾಗ ರೈತ ಆತ್ಮಹತ್ಯೆಯ ಅನುಪಾತ 144 ಇತ್ತು. ಆದರೆ ಇದು 2020 ರ ವೇಳೆಗೆ 100:91 ಆಗಿದೆ ಎಂದು ವರದಿ ಉಲ್ಲೇಖಿಸಿದೆ. ಹೆಚ್ಚಿನ ಆತ್ಮಹತ್ಯೆಗಳು ಆರ್ಥಿಕ ಮುಗ್ಗಟ್ಟಿನಿಂದ ಸಂಭವಿಸಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಕೌಟುಂಬಿಕ ಸಂಬಂಧಗಳಲ್ಲಿನ ಸಮಸ್ಯೆಗಳು ಕೂಡಾ ಉದ್ಯಮಿಗಳು ಆತ್ಮಹತ್ಯೆ ಎಸಗಲು ಕಾರಣವಾಗಿವೆ ಎಂದು ವರದಿ ತಿಳಿಸಿದೆ.

2020 ರ ವೇಳೆಗೆ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ಯಮಿಗಳ ಸಂಖ್ಯೆಯು 29.4% ಹೆಚ್ಚಾಗಿದೆ. 2019 ರಲ್ಲಿ ಈ ಬೆಳವಣಿಗೆಯು 13.3% ರಷ್ಟಿತ್ತು. ಅದೇ ಸಮಯದಲ್ಲಿ, ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆಯು ಹಿಂದಿನ ವರ್ಷಕ್ಕಿಂತ 3.9% ರಷ್ಟು ಹೆಚ್ಚಾಗಿದೆ. ಆದರೆ ರೈತರ ಆತ್ಮಹತ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆಯರ ಸಂಖ್ಯೆ ಸೇರಿಲ್ಲ ಎಂಬ ಆರೋಪಗಳಿವೆ.

ಉದ್ಯಮಿಗಳ ಆತ್ಮಹತ್ಯೆ ವರದಿಯ ಹಿನ್ನಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒಕ್ಕೂಟ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರೈತರು ಮತ್ತು ಉದ್ಯಮಿಗಳು ಒಕ್ಕೂಟ ಸರ್ಕಾರದ "ಕೆಟ್ಟ ನೀತಿಗಳ" ಬಲಿಪಶುಗಳು ಎಂದು ಅವರು ಆರೋಪಿಸಿದ್ದಾರೆ.

ಟ್ವಿಟರ್‌ನಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಡೇಟಾವನ್ನು ಉಲ್ಲೇಖಿಸಿರುವ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿರುವ ರಾಹುಲ್‌ ಗಾಂಧಿ, "ಉದ್ಯಮಿಗಳಾಗಲಿ ಅಥವಾ ರೈತರಾಗಲಿ, ಎಲ್ಲರೂ ಒಕ್ಕೂಟ ಸರ್ಕಾರದ ಕೆಟ್ಟ ನೀತಿಗಳ ಬಲಿಪಶುಗಳು. ಆರ್ಥಿಕತೆಯನ್ನು ಸರಿಪಡಿಸಿ, ಜೀವಗಳನ್ನು ಉಳಿಸಿ" ಎಂದು ಬರೆದಿದ್ದಾರೆ

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

Recommended Video

ಪಾಕಿಸ್ತಾನ-ಚೀನಾ‌ ಸಂಬಂಧ ಗಟ್ಟಿ:ಭಾರತಕ್ಕೆ ಮುಂದಿದೆ ಅಪಾಯ | Oneindia Kannada

English summary
Call it the fallout of the lockdowns or financial crisis triggered by the Covid pandemic, Karnataka reported the highest suicides of businessmen in the country in 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X