Ration Card: ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆಗೆ ಬೇಕಾಗುವ ಅಗತ್ಯ ದಾಖಲೆಗಳು: ಇಲ್ಲಿದೆ ಮತ್ತೊಂದು ಅಪ್ಡೇಟ್
Ration Card: ರಾಜ್ಯದಲ್ಲಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿರುವ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಇದೀಗ ಹೊಸದಾಗಿ ಸದಸ್ಯರ ಸೇರ್ಪಡೆ ಕ್ರಮಗಳನ್ನು ಮತ್ತಷ್ಟು ಬಿಗಿಪಡಿಸಲಾಗಿದೆ. ಹಾಗಾದ್ರೆ, ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪಡಿತರ ಚೀಟಿ ಬರೀ ರೇಷನ್ ಪಡೆಯಲು ಅಷ್ಟೇ ಅಲ್ಲದೆ, ಹಲವು ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅತ್ಯಗತ್ಯವಾಗಿದೆ. ಇದರಲ್ಲಿ ಒಂದು ತಪ್ಪು ಕಂಡುಬಂದರೂ ಪರಿಗಣೆಗೆ ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದಲೇ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಇದೀಗ ಕಾರ್ಡ್‌ನಲ್ಲಿ ಹೆಸರು ಸೇರ್ಪಡೆಗೆ ಈ ಕೆಳಗೆ ನೀಡಿರುವ ದಾಖಲೆಗಳನ್ನು ಕಡ್ಡಾಯ ಮಾಡಲಾಗಿದೆ.

ರಾಜ್ಯದಲ್ಲಿ ಇದೀಗ ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುವ ಕಾರ್ಯ ಮುಂದುವರೆದಿದೆ. ಈ ನಡುವೆಯೇ ಆಹಾರ ಇಲಾಖೆ ಪಡಿತರ ಚೀಟಿಗೆ ಹೊಸದಾಗಿ ಸದಸ್ಯರ ಹೆಸರು ಸೇರ್ಪಡೆ ಮಾಡುವ ಕ್ರಮಗಳನ್ನು ಮತ್ತಷ್ಟು ಬಿಗಿ ಮಾಡಿದೆ. ಹೊಸದಾಗಿ ಪಡಿತರ ಚೀಟಿ ಪಡೆಯಲು ಅಷ್ಟೇ ಅಲ್ಲದೆ, ಹೊಸ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಲು ಸಹ ಜಾತಿ, ಆದಾಯ, ವಿವಾಹ ಮತ್ತಿತರ ಪ್ರಮಾಣ ಪತ್ರಗಳನ್ನು ಕಡ್ಡಾಯ ಮಾಡಲಾಗಿದೆ.
ಹೊಸದಾಗಿ ಮದುವೆ ಆಗಿದ್ದರೆ, ಪತಿ-ಪತ್ನಿ ಹೆಸರು ಸೇರ್ಪಡೆ ಮಾಡಬಹುದು. ಹೆಸರು ತಿದ್ದುಪಡಿ, ಫೋಟೋ, ವಿಳಾಸ ಬದಲಾವಣೆ, ಹೆಸರು ತೆಗೆದುಹಾಕುವಿಕೆ, ನ್ಯಾಯಬೆಲೆ ಅಂಗಡಿ ಬದಲಾವಣೆ, ಕಾರ್ಟ್‌ನಲ್ಲಿರುವ ಸದಸ್ಯರ ಬದಲಾವಣೆಯನ್ನು ಮಾಡಿಸಬಹುದು.
ಆರು ವರ್ಷ ಮೇಲ್ಪಟ್ಟಿದ್ದರೆ ಅವರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆರು ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ, ತಂದೆ- ತಾಯಿಯ ಆಧಾರ್ ಕಾರ್ಡ್, ತಂದೆ -ತಾಯಿಯ ಪಡಿತರ ಚೀಟಿಯ ಮೂಲ ದಾಖಲೆಗಳು ಕಡ್ಡಾಯ ಆಗಿದೆ. ವಿವಾಹ ಆಗಿ ಬರುವ ಸೊಸೆಗೆ ವಿವಾಹ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಹಳೆಯ ಕಾರ್ಡ್‌ನಿಂದ ಹೆಸರು ತೆಗೆದ ದಾಖಲೆ ಕಡ್ಡಾಯ ಆಗಿದೆ.
ಬೆಂಗಳೂರು ಒನ್, ಗ್ರಾಮ ಒನ್ ಸೇರಿದಂತೆ ಸೈಬರ್ ಸೆಂಟರ್‌ಗಳಲ್ಲಿ ಇಲಾಖೆಯ ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು. ಬಿಪಿಎಲ್ ಕಾರ್ಡ್‌ಗಳನ್ನು ಹೊಸದಾಗಿ ಪಡೆಯಲು ಇನ್ನು ಅವಕಾಶ ಕಲ್ಪಿಸಿಲ್ಲ. ಶೀಘ್ರದಲ್ಲೇ ಹೊಸ ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾಡಲಾಗುತ್ತದೆ ಎಂದು ಸಚಿವರು ಈಗಾಗಲೇ ಮಾಹಿತಿ ನೀಡಿದ್ದಾರೆ.












Click it and Unblock the Notifications