Tiger claw pendant case: ಹುಲಿ ಉಗುರಿನ ಪೆಂಡೆಂಟ್‌ಗಾಗಿ ಅಧಿಕಾರಿಯ ಬೆನ್ನು ಬಿದ್ದ ಅರಣ್ಯ ಇಲಾಖೆ

ಬೆಂಗಳೂರು, ಅಕ್ಟೋಬರ್ 26: ಹುಲಿ ಉಗುರಿನ ಪೆಂಡೆಂಟ್‌ಗಳನ್ನು ಹೊಂದಿರುವ ಹಲವಾರು ಸೆಲೆಬ್ರಿಟಿಗಳ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿದೆ. ಈಗ ಅರಣ್ಯ ಇಲಾಖೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯೊಬ್ಬರಿಗಾಗಿ ಇಲಾಖೆ ಬಲೆ ಬೀಸಿದೆ.

ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಇದೇ ರೀತಿಯ ಪೆಂಡೆಂಟ್ ಧರಿಸಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರರು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

Karnataka: Tiger claw pendant case: After movie stars, forest officer under scanner

ಚಿಕ್ಕಮಗಳೂರು ಜಿಲ್ಲೆಯ ಕಳಸ ವ್ಯಾಪ್ತಿಯಲ್ಲಿ ಡಿಆರ್‌ಎಫ್‌ಒ ಆಗಿ ಕಾರ್ಯನಿರ್ವಹಿಸುತ್ತಿರುವ ಎಂ ದರ್ಶನ್ ಅವರು ಹುಲಿ ಉಗುರಿನ ಪೆಂಡೆಂಟ್ ಹೊಂದಿರುವ ಆರೋಪದ ಮೇಲೆ ತಮ್ಮದೇ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಡಿಆರ್‌ಎಫ್‌ಒ ದರ್ಶನ್ ಅವರ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಸಾಮಾಜಿಕ ಹೋರಾಟಗಾರರಾದ ಸುಪ್ರಿತ್ ಮತ್ತು ಅಬ್ದುಲ್ ಖಾದರ್ ಆಲ್ದೂರು ಅರಣ್ಯ ಕಚೇರಿಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ದೂರಿನ ಆಧಾರದ ಮೇಲೆ, ಅರಣ್ಯ ಇಲಾಖೆಯು ಹೆಚ್ಚಿನ ತನಿಖೆಗಾಗಿ ಲಾಕೆಟ್ ಅನ್ನು ಇಲಾಖೆಗೆ ಸಲ್ಲಿಸುವಂತೆ ಅಧಿಕಾರಿಯನ್ನು ಕೇಳಿದೆ ಎಂದು ವರದಿಯಾಗಿದೆ. ಉಗುರುಗಳು ನಿಜವೆಂದು ಅಧಿಕಾರಿಗಳು ಕಂಡುಕೊಂಡರೆ, ಹೆಚ್ಚಿನ ವಿವರಗಳಿಗಾಗಿ ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬಹುದು ಎಂದು ತಿಳಿದುಬಂದಿದೆ.

ಇಂತಹ ಹಲವು ಪ್ರಕರಣಗಳು ವಿವಿಧ ಅರಣ್ಯ ಕಚೇರಿಗಳಲ್ಲಿ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಕರಣಗಳ ಪ್ರಗತಿ ಪರಿಶೀಲನೆ ನಡೆಸಿದರು.

ಹಲವು ಸೆಲೆಬ್ರಿಟಿಗಳಿಗೆ ನೋಟಿಸ್

ದೂರುಗಳು ಮತ್ತು ವೈರಲ್ ಚಿತ್ರಗಳ ಆಧಾರದ ಮೇಲೆ, ಅರಣ್ಯ ಇಲಾಖೆಯು ನಟರಾದ ದರ್ಶನ್, ಜಗ್ಗೇಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಇತರರಿಗೆ ನೋಟಿಸ್ ಜಾರಿ ಮಾಡಿದೆ.

ಕನ್ನಡ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಹುಲಿ ಪಂಜದ ಪೆಂಡೆಂಟ್ ಧರಿಸಿದ್ದಕ್ಕಾಗಿ ಅರಣ್ಯ ಇಲಾಖೆ ಬಂಧಿಸಿದೆ. ನಂತರ ಈ ವಿಷಯ ಮುನ್ನೆಲೆಗೆ ಬಂದಿದೆ. ಅಂದಿನಿಂದ ಸೆಲೆಬ್ರಿಟಿಗಳ ಹಲವಾರು ಚಿತ್ರಗಳು ಇದೇ ರೀತಿಯ ಪೆಂಡೆಂಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿವೆ.

ನಟ ದರ್ಶನ್‌ ಮನೆಯಲ್ಲಿ ಶೋಧ

ನಟ ದರ್ಶನ್ ತೂಗುದೀಪ ಅವರು ಕೊರಳಿಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ನಂತರ ಕರ್ನಾಟಕದ ಅರಣ್ಯ ಇಲಾಖೆ ಅವರ ಮನೆಯಲ್ಲಿ ಶೋಧ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+