ಪೂರಕ ಬಜೆಟ್ : ಅನುದಾನ ಹಂಚಿಕೆಯ ವಿವರ
ಬೆಂಗಳೂರು, ಮಾ. 24 : 2014-15 ನೇ ಸಾಲಿನ ಆರ್ಥಿಕ ವರ್ಷದ ಹೆಚ್ಚುವರಿ ಬೇಡಿಕೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರ 4,173.49 ಕೋಟಿ ರೂ. ಮೊತ್ತದ ಪೂರಕ ಅಂದಾಜು ಪತ್ರವನ್ನು ಸದನಲ್ಲಿ ಮಂಡಿಸಿದೆ. ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ಕೋಟಿ ಹೆಚ್ಚುವರಿ ಅನುದಾನವನ್ನು ಘೋಷಿಸಲಾಗಿದೆ.
ಸೋಮವಾರದ ವಿಧಾನಸಭೆ ಕಲಾಪದಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಪೂರಕ ಅಂದಾಜು ಪತ್ರವನ್ನು ಮಂಡಿಸಿದರು. ನಂತರ ವಿಧಾನಪರಿಷತ್ತಿನಲ್ಲಿಯೂ ಅಂದಾಜು ಪತ್ರವನ್ನು ಮಂಡನೆ ಮಾಡಲಾಯಿತು. [ಕರ್ನಾಟಕ ಬಜೆಟ್ 2014-15 ಮುಖ್ಯಾಂಶ]

ಪೂರಕ ಅಂದಾಜು ಪತ್ರದ ಮೊತ್ತ 4,173.49 ಕೋಟಿ ರೂ. ಆಗಿದೆ. ಈ ಪತ್ರದಲ್ಲಿ ವಿವಿಧ ವಸತಿ ಯೋಜನೆಗಳಿಗೆ 83.84 ಕೋಟಿ, ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ಉನ್ನತೀಕರಣಕ್ಕಾಗಿ 6 ಕೋಟಿ ಅನುದಾನ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅನುದಾನಗಳನ್ನು ಘೋಷಣೆ ಮಾಡಲಾಗಿದೆ.
ಅನುದಾನ ಘೋಷಣೆ
* ಬೆಳೆಸಾಲದ ಮೇಲಿನ ಬಡ್ಡಿ ಸಹಾಯಧನಕ್ಕಾಗಿ ಸಹಕಾರ ಇಲಾಖೆಗೆ 336.48 ಕೋಟಿ
* ಕೃಷಿ ಮಾರುಕಟ್ಟೆ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 37.17
* ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಹೆಚ್ಚುವರಿ ಅನುದಾನ
* ಸಂಧ್ಯಾ ಸುರಕ್ಷಾ ಯೋಜನೆಗೆ 75.70 ಕೋಟಿ [ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು]
* ವಿಕಲಚೇತನರ ಮಾಸಿಕ ಸಹಾಯಧನ ಯೋಜನೆಗೆ 72.70 ಕೋಟಿ,
* ವಿಧವೆಯರ ಸಹಾಯಧನ ಯೋಜನೆಗೆ 49.26 ಕೋಟಿ
* ವಿವಿಧ ವಸತಿ ಯೋಜನೆಗಳಿಗೆ 83.84 ಕೋಟಿ
* ಜವಾಹರಲಾಲ್ ನೆಹರೂ ತಾರಾಲಯದ ಉನ್ನತೀಕರಣಕ್ಕಾಗಿ 6 ಕೋಟಿ
* ನ್ಯಾ.ಕೆಂಪಣ್ಣ ವಿಚಾರಣಾ ಆಯೋಗದ ಸಿಬ್ಬಂದಿ ವೇತನ ಮತ್ತು ಕಚೇರಿ ವೆಚ್ಚಕ್ಕಾಗಿ 12 ಲಕ್ಷ
* 81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 1 ಕೋಟಿ ಹೆಚ್ಚುವರಿ ವೆಚ್ಚ












Click it and Unblock the Notifications