Rain Alert: ಮಳೆ.. ಮಳೆ.. ಮೇ ಮೊದಲ ವಾರದಲ್ಲಿ ಭರ್ಜರಿ ಮಳೆ!

ಮಳೆ.. ಮಳೆ.. ಮಳೆ.. ನೀರು.. ನೀರು.. ನೀರು.. ಹೀಗೆ ಜನರ ಬಾಯಲ್ಲಿ ಈಗ ಕೇಳಿ ಬರುತ್ತಿರುವ ಎರಡು ಪದ ಎಂದರೆ ಅದು ಮಳೆ & ನೀರು ಮಾತ್ರ. ಯಾಕಂದ್ರೆ ಮಳೆ ಬರದೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರ ಎದುರಾಗಿದೆ. ಇದರ ಜೊತೆಗೆ ಕುಡಿಯುವ ನೀರು ಕೂಡ ಸಿಗದ ಸ್ಥಿತಿ ಉಂಟಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಹವಾಮಾನ ಇಲಾಖೆ, ಭರ್ಜರಿ ಮಳೆ ಬಗ್ಗೆ ಸಿಹಿಸುದ್ದಿ ಕೊಟ್ಟಿದೆ. ಹಾಗಾದ್ರೆ ಕರ್ನಾಟಕದಲ್ಲಿ ಮಳೆ ಶುರುವಾಗುವುದು ಯಾವಾಗ? ಯಾವ ಯಾವ ಜಿಲ್ಲೆಯಲ್ಲಿ ಭರ್ಜರಿ ಮಳೆ ಬೀಳಲಿದೆ? ಬನ್ನಿ ತಿಳಿಯೋಣ.

ಮಳೆ ಬಾರದೆ ಮನುಷ್ಯರು ಬದುಕಲು ಆಗುವುದೇ ಇಲ್ಲ, ಯಾಕಂದ್ರೆ ಮಳೆಯಿಂದಲೇ ಈ ನಮ್ಮ ಜೀವನ ನಡೆಯುವುದು. ನೀರು ಇಲ್ಲದೆ ಮನುಷ್ಯ ಒಂದೇ ಒಂದು ದಿನವೂ ಬದುಕಿ ಉಳಿಯಲು ಆಗುವುದಿಲ್ಲ. ಹೀಗಾಗಿ ನೀರು ಮನುಷ್ಯನ ಬದುಕಿಗೆ ಅತ್ಯಗತ್ಯ. ಆದರೆ ನೀರು ಸಿಗಲು ಮಳೆ ಬರಲೇಬೇಕು. ಮಳೆ ಬರದೇ ಇದ್ದರೆ ನೀರು ಸಿಗುವುದಿಲ್ಲ. ಹೀಗಿದ್ದಾಗ ಕಳೆದ 5 ತಿಂಗಳಿಂದ ಬೆಂಗಳೂರಿನಲ್ಲಿ ಮಳೆಯೇ ಬಿದ್ದಿಲ್ಲ. ಏಪ್ರಿಲ್ 2ನೇ ವಾರದಲ್ಲಿ ಒಂದೇ ಒಂದು ದಿನ ಸ್ವಲ್ಪ ಮಳೆ ಬಿದ್ದಿತ್ತು ಅಷ್ಟೇ. ಅದು ಬಿಟ್ಟರೆ ಮತ್ತೆ ಮಳೆರಾಯ ನಾಪತ್ತೆ ಆಗಿದ್ದಾನೆ. ಇಂತಹ ಸ್ಥಿತಿಯಲ್ಲಿ ಈಗ ಭರ್ಜರಿ ಮಳೆ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ.

Karnataka State Will Receive Heavy Rain From First Week Of May 2024

ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ!

ಅಂದಹಾಗೆ ಹವಾಮಾನ ತಜ್ಞರ ಮಾಹಿತಿಯಂತೆ ಮೇ ತಿಂಗಳ ಮೊದಲ ವಾರದಲ್ಲಿ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ & ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಬರಲಿದೆ ಎನ್ನಲಾಗಿದೆ. ಹಾಗೇ ಬೆಂಗಳೂರು, ಮೈಸೂರು, ಹಾಸನ ಸೇರಿ ರಾಮನಗರ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕೂಡ ಭರ್ಜರಿ ಮಳೆ ಬೀಳಲಿದೆ ಎಂದು ಮನ್ಸೂಚನೆ ಸಿಕ್ಕಿದೆ. ಹೀಗಾಗಿ ಜನ ಕೂಡ ಭಾರಿ ಮಳೆ ಬೀಳಲಿ ದೇವರೆ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಕೂಡ ಇದೇ ವಾರದಲ್ಲಿ ಭರ್ಜರಿ ಮಳೆ ಬೀಳುವ ಮುನ್ಸೂಚನೆ ಇದ್ದು, ಕನ್ನಡಿಗರು ಖುಷಿಯಾಗಿದ್ದಾರೆ.

ಬೇಡಿಕೆ ಇಡುತ್ತಿರುವ ಕನ್ನಡಿಗರು!

ಮಳೆ ಯಾಕೆ ಬರ್ತಿಲ್ಲ ಅಂದ್ರೆ ಭೂಮಿಯ ತಾಪಮಾನ ಏರಿಕೆ ಹಾಗೂ ಭೂ ವಾತಾವರಣದ ಮೇಲೆ ಮನುಷ್ಯ ನಡೆಸುತ್ತಿರುವ ದೌರ್ಜನ್ಯ ಇದ್ದಕ್ಕೆ ಕಾರಣ ಅಂತಿದ್ದಾರೆ ವಿಜ್ಞಾನಿಗಳು. ಈ ಆರೋಪಗಳ ನಡುವೆ ಮನುಷ್ಯ ತಾನು ಮಾಡಿರುವ ತಪ್ಪಿಗೆ ತಾನೇ ಸಾಯುತ್ತಿದ್ದಾನೆ. ಮಳೆ ಇಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಯಾರೋ ಶ್ರೀಮಂತರು ಮಾಡುವ ತಪ್ಪಿಗೆ ಇದೀಗ ಬಡ ರೈತರು, ಬಡ ಮಧ್ಯಮ ವರ್ಗದ ಜನ ಹನಿ ಹನಿ ನೀರಿಗೂ ಪರತಪಿಸುವ ಪರಿಸ್ಥಿತಿಯು ನಿರ್ಮಾಣ ಆಗಿದೆ. ಹೀಗಿದ್ದಾಗಲೇ ಜನರು ಮಳೆರಾಯನ ಬಳಿ ಹೊಸ ಡಿಮ್ಯಾಂಡ್ ಇಟ್ಟು, ನಮ್ಮ ಬೇಡಿಕೆ ಪೂರೈಸು ಮಳೆರಾಯ ಅಂತಿದ್ದಾರೆ.

ಭರ್ಜರಿ ಮಳೆಗೆ ಕೌಂಟ್‌ಡೌನ್ ಶುರು!

ಮಳೆ ಬೀಳುತ್ತಿಲ್ಲ ಅಂತಾ ಕನ್ನಡಿಗರು ಪರದಾಡುತ್ತಿರುವ ಸಮಯದಲ್ಲೇ ಭರ್ಜರಿ ಮಳೆಯ ಆಗಮನ ಆಗಿದೆ. ಕಳೆದ 5 ತಿಂಗಳಿಂದ ಕರ್ನಾಟಕದ ಕರಾವಳಿ ಜಿಲ್ಲೆ ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ & ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಕೊರತೆ ಕಾರಣಕ್ಕೆ ಜನರು ನಲುಗಿದ್ದಾರೆ. ಆದರೆ ಇದೀಗ ಕರ್ನಾಟಕದಲ್ಲಿ ಮೇ ಮೊದಲ ವಾರ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ಸಿಗುತ್ತಿದೆ.

ಎಸಿ ಸಿಟಿ ಬೆಂಗಳೂರಲ್ಲಿ ನರಳಾಟ!

ಬೆಂಗಳೂರು ಅಂದ್ರೆ 20 ವರ್ಷಗಳ ಹಿಂದೆ ಎಸಿ ಸಿಟಿ ಎಂಬ ಹೆಸರು ಇತ್ತು. ಯಾಕಂದ್ರೆ ಈ ನಮ್ಮ ಬೆಂಗಳೂರು ಬೇಸಿಗೆ ಸಮಯದಲ್ಲೂ ಕೂಲ್ ಕೂಲ್ ಆಗಿ ಇರೋದು. ಆದರೆ ಏನ್ ಮಾಡೋದು, ಬೆಂಗಳೂರು ಈಗ ಕಾಂಕ್ರಿಟ್ ಕಾಡು ಆಗಿದೆ. ಬೆಂಗಳೂರಿನಲ್ಲಿ ಇದ್ದ ಗಿಡ & ಮರ ಎಲ್ಲಾ ನಾಶವಾಗಿ ಹೋಗುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಅಂತರ್ಜಲ ಕೂಡ ಕುಸಿದು ಹೋಗಿ, ಕೋಟ್ಯಂತರ ಜನ ನರಳುತ್ತಿದ್ದಾರೆ. ಈ ನಡುವೆ ಮಳೆ ಬೇಕು, ಮಳೆ ಬೇಕು ಅಂತ ದೇವರ ಮೊರೆ ಹೋಗುವ ಪರಿಸ್ಥಿತಿ ಕೂಡ ಬಂದಿದೆ. ಆದ್ರೂ ವರುಣ ದೇವ ಮಾತ್ರ ನಮ್ಮ ಜನರ ಮಾತಿಗೆ ಬೆಲೆ ಕೊಟ್ಟು ಮಳೆ ಸುರಿಸುತ್ತಿಲ್ಲ. ಆದರೆ ಮೇ ತಿಂಗಳಲ್ಲಿ ಭರ್ಜರಿ ಮಳೆ, ಸುರಿಯುವ ಮುನ್ಸೂಚನೆ ಇದೆ.

ಮಳೆ ನೀರು ಸಂಗ್ರಹ ಮಾಡಿ

ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲದ ಆರಂಭಕ್ಕೆ ಇನ್ನು ಕೇವಲ 1 ತಿಂಗಳು ಬಾಕಿ ಇದೆ. ಹೀಗಾಗಿ ಮಳೆ ನೀರು ಸಂಗ್ರಹಕ್ಕೆ ಈಗಲಾದರೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ.

ಮಳೆ.. ಮಳೆ.. ಮಳೆ!

ನಿನ್ನೆ ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ಬಂದ ಭಾರಿ ಮಳೆ ನೆಮ್ಮದಿ ನೀಡಿತ್ತು. ಅದರಲ್ಲೂ ಇಷ್ಟು ದಿನ ಮಳೆ ಇಲ್ಲದೆ ಪರದಾಡಿದ್ದ ನಮ್ಮ ಜನರಿಗೆ, ಭರ್ಜರಿ ಮಳೆಯ ರಸದೌತಣ ಸಿಕ್ಕಿತು. ನೋಡ ನೋಡುತ್ತಲೇ ಇಡೀ ಬೆಂಗಳೂರಿಗೆ ಮುತ್ತಿಗೆ ಹಾಕಿದ ಮಳೆ ಮೋಡಗಳು, ಗಂಟೆಗಟ್ಟಲೇ ಮಳೆ ಸುರಿಸಿದವು. ಈ ಮೂಲಕ ಭರ್ಜರಿ ಮಳೆ ಕಂಡು, ಜನರು ಕೂಡ ಕುಣಿದಾಡಿದರು. ಹಾಗೇ ಮಂಡ್ಯ & ಮೈಸೂರು ಭಾಗದಲ್ಲಿ ಕೂಡ ಭಾರಿ ಮಳೆ ತಂಪು ಹರಿಸಿದೆ. ಕಾವೇರಿಯ ಮಡಿಲಿನಲ್ಲಿ ಇದ್ದರೂ ನೀರು ಇಲ್ಲದೆ ನರಳಿದ್ದರು ಕನ್ನಡಿಗರು. ಅದ್ರಲ್ಲೂ ಹಳೇ ಮೈಸೂರು ಭಾಗದಲ್ಲಿ ಕೂಡ ಕಾವೇರಿ ನದಿ ಬತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿಯೇ, ಮಳೆ ಬರಲಿ ಅಂತಾ ಜನರು ಪ್ರಾರ್ಥನೆ ಮಾಡುತ್ತಿದ್ದರು.

ತಂಪು.. ತಂಪು.. ಕೂಲ್.. ಕೂಲ್..!

ಮಳೆ.. ಮಳೆ.. ಭರ್ಜರಿ ಮಳೆ ಬಂದಿದ್ದು, ಭೂತಾಯಿ & ಮನಸ್ಸು ಎರಡೂ ತಂಪಾಗಿದೆ. ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೆಲವೇ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳ ಜನರು ಭಾರಿ ಬಿಸಿಲು & ಬಿಸಿಯಾದ ಗಾಳಿಗೆ ನಲುಗಿ ಹೋಗಿದ್ದರು. ಮನೆ ಮೇಲೆ ಇರುವ ನೀರಿನ ಟ್ಯಾಂಕರ್ ಕೂಡ ಕರಗಿ ಹೋಗುವಷ್ಟು, ಮನೆಯಲ್ಲಿ ಬರುವ ನಲ್ಲಿ ನೀರು ಕೂಡ ಕುದಿಯುವಷ್ಟು ಬಿಸಿಲು ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ತಂಪು ತಂಪು ಕೂಲ್.. ಕೂಲ್.. ಆಗಿದೆ ನಮ್ಮ ಕರ್ನಾಟಕ. ಹಾಗಾದರೆ ಇನ್ನೂ ಎಷ್ಟು ದಿನಗಳ ಕಾಲ ವಾತಾವರಣ ಹೀಗೆ ಇರಲಿದೆ ಗೊತ್ತಾ?

ಮುಂಗಾರು ಮಳೆ ಅಬ್ಬರ ಶುರು!

ಮೇ 31ಕ್ಕೆ ಮುಂಗಾರು ಮಳೆಯ ಮಾರುತಗಳು ಕೇರಳ ರಾಜ್ಯಕ್ಕೆ ಎಂಟ್ರಿ ಕೊಡಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಭಾರತದ ಮಳೆಯ ಪಾಲಿನಲ್ಲಿ ಶೇ. 70 ರಷ್ಟು ಮಳೆಯನ್ನ ಮುಂಗಾರು ಮಳೆ ಒಂದೇ ಸುರಿಸುತ್ತದೆ. ಹೀಗಾಗಿ ಮುಂಗಾರು ಮಳೆ ಕರ್ನಾಟಕ ಸೇರಿ ಇಡೀ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಹೀಗಿದ್ದಾಗಲೇ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟು ಹೋಗಿತ್ತು. ಹೀಗಾಗಿ ಭೀಕರ ಬರ ಎದುರಾಗಿ ರೈತರು & ಜನ ನರಳಿದ್ದರು. ಆದ್ರೆ ಈಗ ಗುಡ್ ನ್ಯೂಸ್ ಸಿಗುತ್ತಿದ್ದು, ಮುಂಗಾರು ಮಳೆ ಅಬ್ಬರ ಗ್ಯಾರಂಟಿ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+