ಮಳೆ.. ಮಳೆ.. ಮುಂಗಾರು ಮಳೆ ಆಗಮನಕ್ಕೆ ಕ್ಷಣಗಣನೆ!

ಮಳೆ ಇಲ್ಲದೆ ಸೊರಗಿದ್ದ ಕರ್ನಾಟಕದ ಜನರಿಗೆ ಮಳೆರಾಯ ಕಳೆದ ಒಂದು ತಿಂಗಳಿಂದ ಭಾರಿ ದೊಡ್ಡ ಕೊಡುಗೆ ನೀಡಿದ್ದಾನೆ. ಅದರಲ್ಲೂ ಭರ್ಜರಿ ಮಳೆಗೆ, ಕರ್ನಾಟಕದ ಪ್ರತಿಯೊಂದು ಜಿಲ್ಲೆ ಕೂಡ ತಂಪಾಗಿದೆ. ಹೀಗಿದ್ದಾಗಲೇ ಮುಂಗಾರು ಮಳೆಯ ಮೋಡಗಳು ಕರ್ನಾಟಕದ ಕಡೆಗೆ ಓಡೋಡಿ ಬರುತ್ತಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಕರ್ನಾಟಕ ಪ್ರವೇಶಿಸಲಿವೆ.

ಇನ್ನೇನು ನಾಳೆಯ ಒಳಗಾಗಿ ಮುಂಗಾರು ಮಳೆಯ ಮೋಡಗಳು ಕೇರಳ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದೆ. ಹಾಗೇ ಮೊದಲು ಕೇರಳಕ್ಕೆ ಪ್ರವೇಶ ಮಾಡಿದ ನಂತರ ಕರ್ನಾಟಕದ ಕಡೆಗೆ ಮುಂಗಾರು ಮಾರುತಗಳು ಹೆಜ್ಜೆ ಹಾಕಲಿವೆ. ಈ ಮೂಲಕ ಜೂ‌ನ್ 1ರ ಬಳಿಕ ಕರ್ನಾಟಕದ ಕರಾವಳಿ ಭಾಗಕ್ಕೆ ಮುಂಗಾರು ಮಾರುತಗಳು ಎಂಟ್ರಿ ಕೊಡಲಿವೆ.

Karnataka State Will Receive Heavy Monsoon Rain From This Date Of 2024

ಭರ್ಜರಿ ಮುಂಗಾರು ಮಳೆ ಗ್ಯಾರಂಟಿ!

ಮುಂಗಾರು ಮಾರುತಗಳ ಆಗಮನ ಹಿನ್ನೆಲೆಯಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಈಗ, ಕರ್ನಾಟಕದ ಕರಾವಳಿ & ದಕ್ಷಿಣ ಒಳನಾಡು ಪ್ರದೇಶಗಳಿಗೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಹಾಗೇ, ವಾಡಿಕೆಗಿಂತ ಹೆಚ್ಚಾಗಿ ಮುಂಗಾರು ಮಳೆ ಅಬ್ಬರಿಸುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದು ರೈತರಿಗೆ ಖುಷಿ ಕೊಟ್ಟಿದೆ. ಅಲ್ಲದೆ ಜನರಿಗೆ ಕೂಡ ನೀರಿನ ಸಮಸ್ಯೆ ಕಡಿಮೆ ಆಗುವ ನಿರೀಕ್ಷೆ ಇದೆ.

ತಾನೇ ಮಾಡಿದ ತಪ್ಪಿಗೆ ಪರದಾಟ!

ಹವಾಮಾನ ವೈಪರಿತ್ಯ ಹಾಗೂ ಮನುಷ್ಯ ಮಾಡಿದ ಹಲವು ತಪ್ಪುಗಳಿಂದ ಭೂಮಿ ಮೇಲೆ ಮಳೆ ಇಲ್ಲದೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಕರ್ನಾಟಕ ಕೂಡ ಮಳೆ ಇಲ್ಲದೆ ಪರದಾಡುತ್ತಿತ್ತು. ಆದ್ರೆ ಇಂತಹ ಸಮಯದಲ್ಲೇ ವರುಣ ದೇವ ಕರುಣೆ ತೋರಿಸಿ ಅಬ್ಬರಿಸಲು ಶುರು ಮಾಡಿದ್ದಾನೆ. ಈ ಮೂಲಕ ಮಳೆಯಲ್ಲಿ ಕರ್ನಾಟಕದ ಜನ ತೊಯ್ದು ಖುಷಿಯಾಗಿದ್ದಾರೆ ಈಗಾಗಲೆ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಕಲಬುರಗಿ ಜಿಲ್ಲೆಗಳಲ್ಲಿ ಮಳೆ ಸಖತ್ ಅಬ್ಬರಿಸಿದೆ. ಈ ಸಮಯದಲ್ಲಿ ಮಧ್ಯ ಕರ್ನಾಟಕದಲ್ಲಿ ಕೂಡ ಮಳೆ ಆರ್ಭಟಿಸಿದೆ. ಮಲೆನಾಡು & ಕರಾವಳಿಗೆ ಕೂಡ ಮಳೆಯ ಸಿಂಚನ ಆಗಿದೆ. ಹೀಗಿದ್ದಾಗ ಮುಂಗಾರು ಮಳೆ ಕೂಡ ಗ್ರಾಂಡ್ ಎಂಟ್ರಿಯ ಕೊಡುತ್ತಿದೆ.

ಮಳೆ.. ಮಳೆ.. ಭರ್ಜರಿ ಮಳೆ ಬೀಳುತ್ತಿರುವುದು ಭಾರಿ ನೆಮ್ಮದಿ ನೀಡುತ್ತಿದೆ. 2024ರ ಜನವರಿ, ಫೆಬ್ರವರಿ, ಮಾರ್ಚ್ & ಏಪ್ರಿಲ್ ತಿಂಗಳಲ್ಲಿ ಕನ್ನಡಿಗರು ಮಳೆ ಇಲ್ಲದೆ ನರಳಿದ್ದರು. ಹೀಗಿದ್ದಾಗ ಶುರುವಾದ ಮಳೆ ಭರ್ಜರಿಯಾಗಿ ಬಿದ್ದಿದೆ, ಹೀಗಾಗಿ ಪರಿಸ್ಥಿತಿ ಸುಧಾರಿಸಿದ್ದು ರೈತರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ಸಮಯದಲ್ಲಿ ಮುಂಗಾರು ಮಳೆ ಆರಂಭಕ್ಕೂ ಮೊದಲು ಕರ್ನಾಟದ ಈ ಜಿಲ್ಲೆಗಳಿಗೆ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದ ಬೋರ್‌ಗಳಲ್ಲಿ ನೀರು ಖಾಲಿ!

ಅಂತರ್ಜಲ ಕುಸಿತ ದೊಡ್ಡ ಸಮಸ್ಯೆ ತಂದೊಡ್ಡಿದೆ, ಕರ್ನಾಟಕದ ಬಹುತೇಕ ಬೋರ್‌ಗಳಲ್ಲಿ ನೀರು ಖಾಲಿ ಆಗಿದೆ. ಅಂತರ್ಜಲ ಕುಸಿಯುತ್ತಿರುವ ಕಾರಣಕ್ಕೆ ಜನರೀಗ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ಮಳೆ ಬರುತ್ತಿದ್ದು ಕೆರೆ ಮತ್ತು ತೊರೆಗಳು ನಿಧಾನವಾಗಿ ತುಂಬುತ್ತಿವೆ. ಈ ನೀರಿಂದ ಇನ್ನೂ ಒಂದು ಇಲ್ಲ 2 ತಿಂಗಳು ದಿನದೂಡಬಹುದು. ಆದರೆ ಜೂನ್ & ಜುಲೈಗೆ ಒಳ್ಳೆಯ ಮಳೆಯು ಬೀಳುವ ನಿರೀಕ್ಷೆ ಇರುವುದು ಖುಷಿ ಕೊಡುತ್ತಿದೆ. ಹೀಗೆ ರೈತರು ಉತ್ತಮವಾಗಿ ಮುಂಗಾರು ಮಳೆ ಬರಲಿದೆ ಅಂತಾ ಕಾಯುತ್ತಿದ್ದಾರೆ. ಈಗಾಗಲೇ, ಕೇರಳಕ್ಕೆ ಮುಂಗಾರು ಮಾರುತಗಳು ಎಂಟ್ರಿ ಕೊಟ್ಟಿದ್ದು. ಇನ್ನೇನು ಕರ್ನಾಟಕದಲ್ಲಿ ಕೂಡ ಮುಂಗಾರು ಮಳೆ ಅಬ್ಬರಿಸಲಿದೆ.

ಉತ್ತರ ಕರ್ನಾಟಕದಲ್ಲೂ ಮಳೆ

ಜೂನ್ 3 ರಂದು ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ರಾಯಚೂರು ಸೇರಿದಂತೆ ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಈ ಮೂಲಕ ಭಾರಿ, ಭರ್ಜರಿ ಮಳೆ ಆಗಮನಕ್ಕೆ ಇದೀಗ ಮುಹೂರ್ತ ಫಿಕ್ಸ್ ಆಗಿದೆ. ರೈತರು ಕೂಡ ಈ ಸುದ್ದಿಯ ಕೇಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ವಾತಾವರಣದಲ್ಲಿ ಯಾವುದೇ ಏರುಪೇರು ಆಗದೇ ಇದ್ದರೆ ಈ ಮುನ್ಸೂಚನೆ ನಿಜವಾಗಲಿದೆ. ಹಾಗೇ ಅಷ್ಟರಲ್ಲಿ ಮುಂಗಾರು ಮಾರುತಗಳ ಎಂಟ್ರಿ ಕೂಡ ಆಗಲಿದೆ.

ಕರ್ನಾಟಕದಲ್ಲಿ ಬಹುಬೇಗ ಮುಂಗಾರು ಮಳೆಯ ಅಬ್ಬರ ಶುರುವಾಗಿದೆ. ಈ ಮೂಲಕವಾಗಿ ಕನ್ನಡಿಗರಿಗೆ ವರುಣ ದೇವ ಸಿಹಿಸುದ್ದಿ ನೀಡಿದ್ದಾನೆ. ಯಾಕಂದ್ರೆ ಮಳೆ ಇಲ್ಲದೆ ಬೆಳೆ ಒಣಗಿ, ಪರದಾಡುತ್ತಿದ್ದ ಸಮಯಕ್ಕೆ ಪೂರ್ವ ಮುಂಗಾರು ಮಳೆ ಕೈಹಿಡಿದು ನಿಲ್ಲಿಸಿತ್ತು. ಈಗ ಮತ್ತೆ ಮುಂಗಾರು ಮಳೆ ಕೂಡ ಕನ್ನಡಿಗರ ಬೆನ್ನಿಗೆ ನಿಂತಿದೆ. ಈ ಮೂಲಕ ಭರ್ಜರಿ ಮಳೆಯಲ್ಲಿ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ. ಅಲ್ಲದೆ ಮುಂದಿನ 10 ದಿನಗಳ ಕಾಲ ಭರ್ಜರಿ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಮಳೆ ಬೀಳುವುದು ಯಾವ ಯಾವ ಜಿಲ್ಲೆಗಳಲ್ಲಿ ಗೊತ್ತಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+