Get Updates
Get notified of breaking news, exclusive insights, and must-see stories!

SSLC Result 2025: ಮೇ 3ರೊಳಗೆ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ ಸಾಧ್ಯತೆ..

ಬೆಂಗಳೂರು, ಏಪ್ರಿಲ್ 30: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತವರ ಪೋಷಕರ ಚಿತ್ತ ಫಲಿತಾಂಶ ಬಿಡುಗಡೆಯತ್ತ ನೆಟ್ಟಿದೆ. Karnataka SSLC Results 2025 ಫಲಿತಾಂಶ ಯಾವಾಗ ಬಿಡುಗಡೆ ಆಗಲಿದೆ? ಎಂದು ಕಾತರದಿಂದ ಕಾಯುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಫಲಿತಾಂಶ ಬಿಡುಗಡೆಗೆ ಸಿದ್ಧತೆ ಆರಂಭಿಸಿರುವ ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ.

ಮಾರ್ಚ್ 21ರಿಂದ ಏಪ್ರಿಲ್ 04 ರವರೆಗೆ ಕರ್ನಾಟಕದ ಸಾವಿರಾರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಸೂಸೂತ್ರವಾಗಿ ನಡೆದಿವೆ. ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನು ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಪೂರ್ಣಗೊಳಿಸಿದೆ. ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಅದಾಗುತ್ತಿದ್ದಂತೆ ಇದೇ ವಾರವೇ ಬಹುನಿರೀಕ್ಷೆ SSLC exam results 2025 karnataka ಬಿಡಗಡೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

Karnataka SSLC Exam Results 2025 Maybe Release on May 2 or 3rd How to Check in website

ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪರಿಶೀಲನೆಗೆ ಹೇಗೆ? ಯಾವ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬೇಕು? ದಿನಾಂಕ ಅಥವಾ 10ನೇ ತರಗತಿ ಫಲಿತಾಂಶ (Karnataka 10th Class Reuslts 2025) ಡೌನ್‌ಲೋಡ್ ಹೇಗೆ ಎಂಬ ಮಾಹಿತಿ ಇಲ್ಲಿದೆ.

ಮೇ 3ರೊಳಗೆ SSLC ಫಲಿತಾಂಶ ಬಿಡುಗಡೆ..?

ಪರೀಕ್ಷೆ ಮೌಲ್ಯಮಾಪನ ಪೂರ್ಣಗೊಳಿಸಿರುವ ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ತಾಂತ್ರಿಕ ಕೆಲಸಗಳಲ್ಲಿ ನಿರತವಾಗಿದೆ. ಆ ಪ್ರಕ್ರಿಯೆ ಇನ್ನೇನು ಪೂರ್ಣಗೊಳ್ಳಲಿದೆ. ಮೇ 1ರಂದು ಕಾರ್ಮಿಕ ರಜೆ ಹಿನ್ನೆಲೆಯಲ್ಲಿ ಮೇ 2 ಇಲ್ಲವೇ 3 ರಂದು ಪರೀಕ್ಷೆ ಫಲಿತಾಂಶ ಬಿಡುಗಡೆ ಆಗುವ ನಿರೀಕ್ಷೆ ಇದೆ. ಮಂಡಳಿಯು ಅಗತ್ಯ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ವೆಬ್‌ಸೈಟ್ ಲಿಂಕ್, ಪರಿಶೀಲನೆ ಹೇಗೆ? ವಿಧಾನಗಳು

* ಈ ಫಲಿತಾಂಶವನ್ನು ಸರ್ಕಾರದ ಅಧಿಕೃತ https://karresults.nic.in/ ವೆಬ್‌ಸೈಟ್ ನಲ್ಲಿ ಪರೀಕ್ಷಿಸಬಹುದಾಗಿದೆ.

* ವಿದ್ಯಾರ್ಥಿಗಳು/ ಪೋಷಕರು ಮೊದಲು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

Karnataka SSLC Exam Results 2025 Maybe Release on May 2 or 3rd How to Check in website

* ನಂತರ SSLC Results ಆಯ್ಕೆ ಮಾಡಿಕೊಳ್ಳಬೇಕು

* ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2025 ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು.

* ಪರದೇ ಮೇಲೆ ಕಾಣಿಸಿಕೊಳ್ಳುವ ಖಾಲಿ ಬಾಕ್ಸ್‌ಗಳಲ್ಲಿ ನಿಮ್ಮ ಪರೀಕ್ಷಾ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಸೇರಿದಂತೆ ಅಗತ್ಯ ಮಾಹಿತಿ ದಾಖಲಿಸಬೇಕು.

* ನಂತರ ತೆರೆದುಕೊಳ್ಳುವ ಅಂಕಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಮುಂದಿನ ಅಗತ್ಯತೆಗಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರ ಪ್ರತಿ ಪಡೆದರೆ ಒಳಿತು. ಹೆಚ್ಚಿನ ಮಾಹಿತಿಗೆ ನಿಮ್ಮ ಶಾಲೆಗಳಿಗೆ ಇಲ್ಲವೇ ಈ ಮೇಲೆ ನೀಡಲಾದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+