ನೈರುತ್ಯ ರೈಲ್ವೆಯ 15 ರೈಲು ನಿಲ್ದಾಣಗಳು ಮೇಲ್ದರ್ಜೆಗೆ: ಪ್ರಧಾನಿ ಮೋದಿ ಚಾಲನೆ

ಬೆಂಗಳೂರು, ಫೆಬ್ರವರಿ 24: ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 372.13 ಕೋಟಿ ರೂಪಾಯಿ ವೆಚ್ಚದಲ್ಲಿ 15 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಿಸಿದೆ. ಫೆಬ್ರವರಿ 26 ರಂದು ಪ್ರಧಾನಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ನೈಋತ್ಯ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಯೋಗೇಶ್ ಮೋಹನ್ ತಿಳಿಸಿದ್ದಾರೆ.

ನೈರುತ್ಯ ರೈಲ್ವೆ ವ್ಯಾಪ್ತಿಯ ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ದೊಡ್ಡಬಳ್ಳಾಪುರ, ಹಿಂದೂಪುರ, ಹೊಸೂರು, ಕೆಂಗೇರಿ, ಕೃಷ್ಣರಾಜಪುರ, ಕುಪ್ಪಂ, ಮಲ್ಲೇಶ್ವರ, ಮಾಲೂರು, ಮಂಡ್ಯ, ರಾಮನಗರ, ತುಮಕೂರು, ವೈಟ್ ಫೀಲ್ಡ್ ರೈಲು ನಿಲ್ದಾಣಗಳು ಒಟ್ಟು ರೂ.372.13 ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಳ್ಳಲಿವೆ. ಸ್ಮಾರ್ಟ್‌ ಪಾರ್ಕಿಂಗ್‌, ಶೌಚಾಲಯ ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ರೈಲು ನಿಲ್ದಾಣಗಳ ಪ್ರಮುಖ ಉನ್ನತೀಕರಣಕ್ಕಾಗಿ ಹೊಸ ಯೋಜನೆಯನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ ಎಂದು DRM ಹೇಳಿದರು.

Karnataka: South Western Railway to spend Rs 372.13 crore to redevelop 15 railway stations

ಹೊಸ ಯೋಜನೆ, 'ಅಮೃತ್ ಭಾರತ್ ಸ್ಟೇಷನ್ ಸ್ಕೀಮ್' (ABSS) ನಿಲ್ದಾಣಗಳ ನಡೆಯುತ್ತಿರುವ ಅಭಿವೃದ್ಧಿಗೆ ದೀರ್ಘಾವಧಿಯ ದೃಷ್ಟಿಕೋನವನ್ನು ಹೊಂದಿದೆ, ಇದರಲ್ಲಿ ನಿಲ್ದಾಣಗಳ ಗುರುತಿಸುವಿಕೆ, ವಿಶಾಲ ಉದ್ದೇಶಗಳನ್ನು ಸ್ಥಾಪಿಸುವುದು, ಮಾಸ್ಟರ್ ಯೋಜನೆಗಳನ್ನು ರಚಿಸುವುದು ಮತ್ತು ವಿವಿಧ ಸೌಲಭ್ಯಗಳನ್ನು ಹೆಚ್ಚಿಸಲು ಹಂತಗಳಲ್ಲಿ ಅವುಗಳನ್ನು ಕಾರ್ಯಗತಗೊಳಿಸುವುದು. ರೈಲ್ವೆ ನಿಲ್ದಾಣಕ್ಕೆ ಉತ್ತಮ ಪ್ರವೇಶದ್ವಾರ, ಕಾಯುವ ಸ್ಥಳ, ಲಿಫ್ಟ್‌, ಎಸ್ಕಲೇಟರ್‌, ಸ್ವಚ್ಛತೆ, ಉಚಿತ ವೈಫೈ ವ್ಯವಸ್ಥೆ, 'ಒಂದು ನಿಲ್ದಾಣ ಒಂದು ಉತ್ಪನ್ನ' ವ್ಯವಸ್ಥೆ, ಮಾಹಿತಿ ವ್ಯವಸ್ಥೆ ಸಹಿತ ಅನೇಕ ಸೌಲಭ್ಯಗಳನ್ನು ಈ ಯೋಜನೆ ಒಳಗೊಂಡಿದೆ ಎಂದು ಹೇಳಿದರು.

ಇದಲ್ಲದೇ ಹೆಚ್ಚುವರಿಯಾಗಿ ಚನ್ನಪಟ್ಟಣ-ಶೆಟ್ಟಿಹಳ್ಳಿ ಲೆವೆಲ್‌ ಕ್ರಾಸಿಂಗ್ ಬದಲಾಗಿ ಆರ್‌ಯುಬಿ (ರೈಲ್ವೆ ಅಂಡರ್‌ ಬ್ರಿಡ್ಜ್‌), ಮಕ್ಕಾಜಿಪಲ್ಲಿ-ನಾಗಸಮುದ್ರಂ ನಡುವಿನ ಲೆವೆಲ್‌ ಕ್ರಾಸಿಂಗ್‌ ಬದಲು ಆರ್‌ಯುಬಿ, ಕುಂಬಾರಿಕೆ ಪಟ್ಟಣದಲ್ಲಿ ಆರ್‌ಒಬಿ (ರೈಲ್ವೆ ಓವರ್‌ ಬ್ರಿಜ್‌) ಮುಂತಾದ ಕಾಮಗಾರಿಗಳಿಗೂ ‍ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು. ಫೆಬ್ರವರಿ 26 ರಂದು 554 ರೈಲ್ವೇ ನಿಲ್ದಾಣಗಳು ಮತ್ತು 1,585 ರಸ್ತೆ ಮೇಲ್ಸೇತುವೆಗಳು/ಅಂಡರ್‌ಪಾಸ್‌ಗಳ ಪುನರಾಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+