Dasara Vacation 2026: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ಬಾರಿ ಬರೋಬ್ಬರಿ 19 ದಿನ ರಜೆ, ಯಾವಾಗಿಂದ? ಇಲ್ಲಿದೆ ಮಾಹಿತಿ
ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆ ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಮುಂಬರುವ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬರೋಬ್ಬರಿ 19 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.
ಪ್ರತಿದಿನ ಓದು, ಬರಹ, ಪರೀಕ್ಷೆ ಎಂದು ಸುಸ್ತಾಗಿರುವ ಮಕ್ಕಳಿಗೆ ಈ ದೀರ್ಘಾವಧಿಯ ರಜೆಯು ಖಂಡಿತವಾಗಿಯೂ ಹೊಸ ಉಲ್ಲಾಸ ತರಲಿದೆ. ಈ ರಜೆಯು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ (ಖಾಸಗಿ) ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೂ ಅನ್ವಯವಾಗಲಿದೆ.

ದಸರಾ ರಜೆ ದಿನಾಂಕಗಳು
ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿರುವ ಅಧಿಕೃತ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, 2026ರ ಅಕ್ಟೋಬರ್ 3ರ ಶನಿವಾರದಿಂದ ದಸರಾ ರಜೆ ಅಧಿಕೃತವಾಗಿ ಪ್ರಾರಂಭವಾಗಲಿದೆ. ವಿಶೇಷವೆಂದರೆ, ಅಕ್ಟೋಬರ್ 2ರಂದು ಗಾಂಧಿ ಜಯಂತಿ ಇರುವುದರಿಂದ ಅಂದು ಸಾರ್ವತ್ರಿಕ ರಜೆ ಇರಲಿದೆ. ಹೀಗಾಗಿ ಅಕ್ಟೋಬರ್ 2ರಿಂದಲೇ ಮಕ್ಕಳಿಗೆ ರಜೆಯ ಮಜಾ ಶುರುವಾಗಲಿದೆ.
ಅಕ್ಟೋಬರ್ 3ರಿಂದ ಆರಂಭವಾಗುವ ಈ ದಸರಾ ರಜೆಯು ಅಕ್ಟೋಬರ್ 21ರ ಬುಧವಾರದವರೆಗೆ ಅಂದರೆ ವಿಜಯದಶಮಿಯ ಹಬ್ಬದವರೆಗೂ ಮುಂದುವರೆಯಲಿದೆ. ಗಾಂಧಿ ಜಯಂತಿ ಸೇರಿ ಒಟ್ಟಾರೆಯಾಗಿ ಸತತ 20 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಶಾಲೆಯಿಂದ ಬಿಡುವು ಸಿಗಲಿದ್ದು, ನಾಡಹಬ್ಬದ ಸಂಭ್ರಮವನ್ನ ಪೂರ್ಣವಾಗಿ ಸವಿಯಲು ಅವಕಾಶ ಸಿಕ್ಕಿದಂತಾಗಿದೆ.
ಪೋಷಕರು ಕೂಡ ತಮ್ಮ ಮಕ್ಕಳೊಂದಿಗೆ ಊರಿಗೆ ಹೋಗಲು ಅಥವಾ ದೂರದ ಪ್ರವಾಸ ಕೈಗೊಳ್ಳಲು ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಬಹುದಾಗಿದೆ.
ಶಾಲೆ ಪುನರಾರಂಭ ಮತ್ತು ಶೈಕ್ಷಣಿಕ ವೇಳಾಪಟ್ಟಿ
ಸುದೀರ್ಘ 19 ದಿನಗಳ ದಸರಾ ರಜೆಯ ನಂತರ ಅಕ್ಟೋಬರ್ 22ರ ಗುರುವಾರದಂದು ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಳ್ಳಲಿವೆ. ಅಕ್ಟೋಬರ್ 22ರಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ಎರಡನೇ ಅವಧಿ ಅಧಿಕೃತವಾಗಿ ಶುರುವಾಗಲಿದೆ. ಈ ಎರಡನೇ ಅವಧಿಯ ತರಗತಿಗಳು ಏಪ್ರಿಲ್ 10, 2027ರವರೆಗೆ ನಿರಂತರವಾಗಿ ನಡೆಯಲಿವೆ ಎಂದು ಶಿಕ್ಷಣ ಇಲಾಖೆ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಏಪ್ರಿಲ್ 10ರಂದು ವಾರ್ಷಿಕ ಪರೀಕ್ಷೆಗಳು ಮುಕ್ತಾಯಗೊಂಡು, ಮರುದಿನ ಅಂದರೆ ಏಪ್ರಿಲ್ 11, 2027ರಿಂದ ಬೇಸಿಗೆ ರಜೆ ಪ್ರಾರಂಭವಾಗಲಿದೆ. ಈ ವೇಳಾಪಟ್ಟಿಯಿಂದಾಗಿ ಶಿಕ್ಷಕರಿಗೆ ಪಠ್ಯಕ್ರಮವನ್ನು ವಿಂಗಡಿಸಲು ಮತ್ತು ಪೋಷಕರಿಗೆ ತಮ್ಮ ಮುಂದಿನ ದಿನಚರಿಯನ್ನ ನಿರ್ವಹಿಸಲು ಅನುಕೂಲವಾಗಲಿದೆ.
ರಜೆಯಲ್ಲಿ ಬದಲಾವಣೆ ಮಾಡುವ ಅಧಿಕಾರ
ರಾಜ್ಯಮಟ್ಟದಲ್ಲಿ ಶಿಕ್ಷಣ ಇಲಾಖೆಯು ಏಕರೂಪದ ರಜಾ ದಿನಾಂಕಗಳನ್ನ ಘೋಷಣೆ ಮಾಡಿದ್ದರೂ, ಸ್ಥಳೀಯ ಮಟ್ಟದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡಿಕೊಳ್ಳುವ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಆಯಾ ಜಿಲ್ಲೆಯ ಹವಾಮಾನ ವೈಪರೀತ್ಯಗಳು ಅಥವಾ ಯಾವುದೇ ಸ್ಥಳೀಯ ಆಡಳಿತಾತ್ಮಕ ಅಗತ್ಯಗಳಿಗೆ ಅನುಗುಣವಾಗಿ ರಜಾ ದಿನಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡುವ ಅಧಿಕಾರವನ್ನ ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ (DDPI) ನೀಡಲಾಗಿದೆ.
ಒಂದು ವೇಳೆ ಯಾವುದಾದರೂ ನಿರ್ದಿಷ್ಟ ಜಿಲ್ಲೆಯಲ್ಲಿ ಅನಿವಾರ್ಯ ಕಾರಣಗಳಿಂದ ರಜೆ ದಿನಾಂಕದಲ್ಲಿ ಬದಲಾವಣೆ ಮಾಡಬೇಕಾಗಿ ಬಂದರೆ, ಉಪನಿರ್ದೇಶಕರು ಪರಿಸ್ಥಿತಿಯನ್ನ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
ಒಟ್ಟಾರೆಯಾಗಿ, ಶಿಕ್ಷಣ ಇಲಾಖೆಯ ಈ ದಸರಾ ರಜೆಯ ಪ್ರಕಟಣೆಯು ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.


Click it and Unblock the Notifications
