Karnataka SC Survey: ಎಸ್‌ಸಿ ಜಾತಿ ಗಣತಿಯಲ್ಲಿ ಸರ್ಕಾರ ಯಡವಟ್ಟು! ಭಾರೀ ಲೋಪಕ್ಕೆ ಬಿಜೆಪಿ ಕಿಡಿ
ಬೆಂಗಳೂರು, ಮೇ 12: ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯಲ್ಲಿನ ಎಲ್ಲ ಒಳಜಾತಿಗಳಿಗೂ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಉದ್ದೇಶ ದತ್ತಾಂಶ ಸಂಗ್ರಹಿಸಲಾಗುತ್ತದೆ. ಈ ಜಾತಿ ಗಣತಿಯಲ್ಲಿ ಹಲವು ಯಡವಟ್ಟುಗಳು ಆಗಿವೆ. ಈ ಸಂಬಂಧ ಬಿಜೆಪಿ ಕೆಂಡ ಕಾರಿದೆ. ಬ್ಬಂದಿಗೆ ಬರೀ 3 ತಾಸು ತರಬೇತಿ ನೀಡಿ ಗಣತಿ ಕಾರ್ಯ ನಡೆದಿದ್ದು, ಎಡವಟ್ಟುಗಳ ಬಗ್ಗೆ ಎಡಗೈ-ಬಲಗೈ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ.
ಪರಿಶಿಷ್ಟ ಜಾತಿ ಜನಗಣತಿ ಬಗ್ಗೆ ಟ್ವಿಟ್ ಮಾಡಿರುವ ಬಿಜೆಪಿಯು ಜಾತಿಗಣತಿ ಜಟಾಪಟಿಯ ಮಧ್ಯೆ ರಾಜ್ಯ ಸರ್ಕಾರ ಒಳಮೀಸಲಾತಿ ಸಮೀಕ್ಷೆಗೆ ಮುಂದಾಗಿದೆ. ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರಿಂದ ಗಣತಿ ನಡೆಯಲಿದೆ. ಆದರೆ ಸಿಬ್ಬಂದಿಗೆ ಗಣತಿ ನಡೆಸುವ ಬಗ್ಗೆ ಕೇವಲ 3 ತಾಸು ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ಕೇವಲ ಮೂರು ಗಂಟೆ ತರಬೇತಿ ಪಡೆದ ಸಿಬ್ಬಂದಿ ಪೈಕಿ ಅನೇಕ ಗಣತಿದಾರರ ಬಳಿ ಉತ್ತಮ ಗುಣಮಟ್ಟದ ಮೊಬೈಲ್‌ಗಳು ಇಲ್ಲ. ಈ ಕಾರಣದಿಂದ ಜಾತಿಗಣತಿ ಆ್ಯಪ್ ಡೌನ್‌ಲೋಡ್ ಮಾಡಿ ಸಮೀಕ್ಷೆ ನಡೆಸಲು ಸಮಸ್ಯೆ ಉಂಟಾಗುತ್ತಿದೆ. ಇದರೊಂದಿಗೆ ಜಸರ್ವರ್ ಸಮಸ್ಯೆ ಸಹ ಎದುರಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಕಾರ್ಯ ವೈಖರಿ ಬಗ್ಗೆ ಬಿಜೆಪಿ ದೂರಿದರು.
ಗಣತಿ ವೇಳೆ ಕೆಲವು ಕಡೆಗಳಲ್ಲಿ ಗೊತ್ತಿದ್ದರೂ ತಪ್ಪು ಮಾಹಿತಿ ದಾಖಲೆ ಸೇರಿಸಲಾಗುತ್ತಿದೆ. ಪರಿಶಿಷ್ಟ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ, ಜಾತಿಗಣತಿಯಲ್ಲಿನ ಪ್ರಶ್ನಾವಳಿಗಳಿಗೆ ಮಾಹಿತಿ ನೀಡಲು ಪರದಾಡುವಂತಾಗಿದೆ. ಹಾಗಾಗಿ ಪ್ರಶ್ನೆಗಳನ್ನು ಸರಳೀಕರಿಸುವ ಅಗತ್ಯವಿದೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕುರಿತಂತೆ ಗಮನಹರಿಸಬೇಕಿದೆ ಎಂದು ರಾಜ್ಯ ಬಿಜೆಪಿ ಸಲಹೆ ನೀಡಿದೆ.
ಒಳ ಮೀಸಲಾತಿಗೆ ಪರ ಸರ್ಕಾರ ಕಾಳಜಿ ವಹಿಸಿದೆ. ಆದರೆ ಸಿಬ್ಬಂದಿಗೆ ಕಡಿಮೆ ಅವಧಿಯ ತರಬೇತಿ ನೀಡಿರುವುದು ಕೆಲವು ಲೋಪಗಳಿಗೆ ಕಾರಣವಾಗಿದೆ. ವೈಜ್ಞಾನಿಕ ರೀತಿಯಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾತಿ ಗಣತಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಹ ಈ ಗಣತಿ ಕುರಿತು ಸ್ಪಷ್ಟಪಡಿಸಿದ್ದಾರೆ.
ಗಣತಿ ವರದಿ ಆಧರಿಸಿ ಒಳಮೀಸಲಾತಿ
ರಾಜ್ಯಾದ್ಯಂತ ಪರಿಶಿಷ್ಠ ಜಾತಿಯಲ್ಲಿರುವ 101 ಒಳಜಾರಿಗಳ ಕುರಿತು ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಇದರ ಆಧಾರದಲ್ಲಿ ಒಳಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ. ಆದರೆ ಆರಂಭದಲ್ಲೇ ಸರ್ಕಾರ ಎಡವಿದೆ ಎನ್ನಲಾಗಿದೆ. ಈ ಹಿಂದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಾಡಲಾಗಿದ್ದ ಕರ್ನಾಟಕ ಜಾತಿ ಗಣತಿ 2025 ಜಾರಿಗೆ ಮುಂದಾಗಿದ್ದ ಸರ್ಕಾರ ತಾನು ಸರಿಯಾಗಿ ಗಣತಿ ಮಾಡಿಲ್ಲ. ತಪ್ಪು ಮಾಹಿತಿ ಎಂಬ ಆರೋಪ ಎದುರಿಸಿತ್ತು.












Click it and Unblock the Notifications