ಕರ್ನಾಟಕದಲ್ಲಿರುವ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಯಾವೆಲ್ಲಾ ಜಿಲ್ಲೆಗಳಲ್ಲಿ ಹಾದುಹೋಗಲಿವೆ?
Karnataka's Longest National Highways: ದೇಶದಲ್ಲೇ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿ ಅಂದ್ರೆ, ಅದು NH 44 ಆಗಿದೆ. ಇದು ಕರ್ನಾಟದಲ್ಲಿ ಹಾದುಹೋಗುತ್ತದೆ ಎನ್ನುವುದೇ ವಿಶೇಷ. ಹಾಗಾದ್ರೆ ಇದನ್ನೊಳಗೊಂಡಂತೆ ರಾಜ್ಯದಲ್ಲಿ ಅತೀ ಹೆಚ್ಚು ಉದ್ದವಾಗಿರುವ ರಾಷ್ಟ್ರಿಯ ಹೆದ್ದಾರಿಗಳು ಯಾವುವು? ಯಾವೆಲ್ಲಾ ಜಿಲ್ಲೆಗಳ ಮೇಲೆ ಹಾದುಹೋಗಲಿವೆ? ಹಾಗೂ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕ ರಾಜ್ಯದಲ್ಲಿ ಇದೀಗ ಸೇವೆಯಲ್ಲಿರುವ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಹಾಗಾದ್ರೆ ಎಷ್ಟು ಕಿ.ಲೋ. ವ್ಯಾಪಿಸಿವೆ ಎನ್ನುವ ಪ್ರಶ್ನೆಗಳು ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತವೆ. ಅದೆಲ್ಲದಕ್ಕೂ ಉತ್ತರವನ್ನು ಕೆಳಗೆ ನೀಡಲಾಗಿದೆ ನೋಡಿ.

ಕರ್ನಾಟಕದಲ್ಲಿ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳು
* NH 13
* NH 44
* NH 4
* NH 206
* NH 48
NH 13: ಇದು ಕರ್ನಾಟಕದೊಳಗಿನ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇದು ಶೋಲಾಪುರ್ನಿಂದ ಮಂಗಳೂರುವರೆಗೆ ಸುಮಾರು 719 ಕಿಲೋ ಮೀಟರ್ ಉದ್ದವಿದೆ. ಮಹಾರಾಷ್ಟ್ರದ ಶೋಲಾಪುರದಿಂದ ಪ್ರಾರಂಭವಾಗಿ, ಕರ್ನಾಟಕದ ಬಿಜಾಪುರದಿಂದ ಚಿತ್ರದುರ್ಗ, ಚನ್ನಗಿರಿ, ಶಿವಮೊಗ್ಗ, ತೀರ್ಥಹಳ್ಳಿ, ಕೋಪ್ಪ, ಕಾರ್ಕಳ ಮೂಲಕ ಕೊನೆಗೆ ಮಂಗಳೂರಿಗೆ ಸಂಪರ್ಕ ಕಲ್ಪಿಸಲಿದೆ.
ರಾಜ್ಯದ ಯಾವೆಲ್ಲಾ ಜಿಲ್ಲೆಗಳ ಮೇಲೆ ಹಾದುಹೋಗಲಿದೆ?:
* ಚಿತ್ರದುರ್ಗ
* ದಾವಣಗೆರೆ
* ಶಿವಮೊಗ್ಗ
* ಚಿಕ್ಕಮಗಳೂರು
* ಉಡುಪಿ
* ದಕ್ಷಿಣ ಕನ್ನಡ
NH 44: ಇನ್ನು ಕರ್ನಾಟದಲ್ಲಿರುವ 4,112 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 44 ಭಾರತದಲ್ಲೇ ಅತೀ ಉದ್ದದ ಹೆದ್ದಾರಿಯಾಗಿದೆ. ಇದು ರಾಜ್ಯದ ಪ್ರಮುಖ ನಗರಗಳ ಮೂಲಕ ಹಾದುಹೋಗಲಿದೆ. ಮುಖ್ಯವಾಗಿ ಉತ್ತರದಿಂದ ದಕ್ಷಿಣದ ಕಡೆ ಸಾಗುವ ದೇಶದ ಅತೀ ಉದ್ದದ ಹೆದ್ದಾರಿ ಆಗಿದ್ದು, ಕರ್ನಾಟಕದಲ್ಲಿ ಹೆಚ್ಚಿನ ಭಾಗದಲ್ಲಿ ಆಗುಹೋಗು ನಗರಗಳನ್ನೂ ಸಂಪರ್ಕಿಸುತ್ತದೆ.
NH 44 ರಾಜ್ಯದ ಯಾವೆಲ್ಲಾ ಜಿಲ್ಲೆಗಳ ಮೇಲೆ ಹಾದುಹೋಗಲಿದೆ?
* ಬಳ್ಳಾರಿ
* ವಿಜಯಪುರ
* ಬೆಂಗಳೂರು
* ಚಿಕ್ಕಬಳ್ಳಾಪುರ
* ದೇವನಹಳ್ಳಿ
* ಹಾಸನ
* ತುಮಕೂರು ಬಳಿಯ ಮಧುಗಿರಿ
* ಮಂಡ್ಯ
* ಮಂಗಳೂರು
NH 4: ಕರ್ನಾಟಕ ರಾಜ್ಯದಲ್ಲಿ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇದು ಒಂದಾಗಿದ್ದು, ಇದು 700 ಕಿ.ಮೀ ಉದ್ದ ವ್ಯಾಪಿಸಿದೆ. ಪುಣೆ-ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು, ಕೋಲಾರ ಜಿಲ್ಲೆಗಳ ಮೂಲಕ ಹಾದುಹೋಗಲಿದೆ.
NH 206: ಈ ರಾಷ್ಟ್ರೀಯ ಹೆದ್ದಾರಿ ತುಮಕೂರು-ಶಿವಮೊಗ್ಗ-ಹೊನ್ನಾವರ ಮೂಲಕ ಹಾದು ಹೋಗಲಿದ್ದು, 365 ಕಿ.ಮೀ ಉದ್ದವಿದೆ ಎಂದು ಅಂದಾಜಿಸಲಾಗಿದೆ.
NH 48: ಈ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಹಾಸನ-ಮಂಗಳೂರು ಮೂಲಕ ಹಾದುಹೋಗಲಿದ್ದು, ಸುಮಾರು 320 ಕಿಲೋ ಮೀಟರ್ ಉದ್ದವಿದೆ.
ಆಸ್ತಿದಾರರಿಗೆ ಬಂಪರ್ ಲಾಟರಿ: ಇನ್ನೂ ಈ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಿಂದ ರಾಜ್ಯಕ್ಕೆ ತುಂಬಾ ಪ್ರಯೋಜನಾಗಳಿವೆ ಹಾಗೂ ಈ ಮಾರ್ಗಗಳಲ್ಲಿ ಭೂಮಿಗೆ ಈಗಲೂ ಚಿನ್ನದೆ ಬೆಲೆ ಇದೆ. ದಿನದಿಂದ ದಿನಕ್ಕೆ ಬೆಲೆ ಏರುತ್ತಿದ್ದರೂ ಸಹ ಉದ್ಯಮಿಗಳು ಸೇರಿದಂತೆ ಹಲವರು ಈ ಭಾಗಗಳಲ್ಲಿ ಆಸ್ತಿ ಕೊಂಡುಕೊಳ್ಳಲು ನಾ ಮುಂದು ತಾ ಮುಂದು ಮಂದು ಎಂದು ಸ್ಪರ್ಧೆ ರೀತಿಯಲ್ಲಿ ಮುಂದೆ ಬರುತ್ತಿದ್ದು, ಇದರಿಂದ ರೈತರಿಗೆ ಬಂಪರ್ ಲಾಟರಿ ಹೊಡೆಯುತ್ತಲಿದೆ.
ರಾಷ್ಟ್ರೀಯ ಹೆದ್ದಾರಿಗಳಿಂದ ಏನೆಲ್ಲಾ ಪ್ರಯೋಜನಾ?
* ಆರ್ಥಿಕ ಅಭಿವೃದ್ಧಿ
* ಪ್ರಯಾಣದ ಸಮಯ ಉಳಿತಾಯ
* ಪ್ರವಾಸೋದ್ಯಮ ಉತ್ತೇಜನೆ
* ರಾಷ್ಟ್ರೀಯ ಭದ್ರತೆ ಸೇರಿದಂತೆ ಹಲವು ಪ್ರಯೋಜನಗಳು ರಾಷ್ಟ್ರೀಯ ಹೆದ್ದಾರಿಗಳಿಂದ ಆಗುತ್ತಿವೆ.












Click it and Unblock the Notifications