ಕರ್ನಾಟಕದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿಗೆ ಗ್ರೀನ್ ಆಸ್ಕರ್

Posted By:
Subscribe to Oneindia Kannada

ಬೆಂಗಳೂರು, ಮೇ 18 : ಕರ್ನಾಟಕದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರು ಇಂಗ್ಲೆಂಡ್ ನ ಪ್ರತಿಷ್ಠಿತ ವೈಟ್ಲಿ ಪ್ರಶಸ್ತಿಗೆ (ಗ್ರೀನ್ ಆಸ್ಕರ್) ಭಾಜನರಾಗಿದ್ದಾರೆ.

ಕರ್ನಾಟಕದ ಹುಲಿ ಕಾರಿಡಾರ್ ರಕ್ಷಣೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಂಜಯ್ ಗುಬ್ಬಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. ವಿವಿಧ ದೇಶಗಳಿಂದ ಸಲ್ಲಿಸಲಾಗಿದ್ದ 166 ಅರ್ಜಿಗಳ ಪೈಕಿ ಭಾರತದ ಇಬ್ಬರಿಗೆ ಸೇರಿದಂತೆ ಒಟ್ಟು 8 ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮತ್ತೋರ್ವ ಅಸ್ಸಾಂ ಮೂಲದ ಪೂರ್ಣಿಮಾ ಬರ್ಮನ್ ಅವರು ಹರ್ಗಿಲಾ ಸ್ಟೂರ್ಕ್ಸ್ ಪಕ್ಷಿ ಸಂತತಿಯ ಉಳಿವಿಗೆ ನೀಡಿದ ಕೊಡುಗೆಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿಯು 29 ಲಕ್ಷ ರು. ನಗದು ಪುರಸ್ಕಾರ ಒಳಗೊಂಡಿದೆ.

Karnataka’s famed wildlife activist Sanjay Gubbi bagged Whitley Award

ಸಂಜಯ್ ಗುಬ್ಬಿ ಅವರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕೆಲಸಕ್ಕೆ ರಾಜೀನಾಮೆ ನೀಡಿ ನಿಸರ್ಗ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು 2012ರಲ್ಲಿ ಹುಲಿ ಸಂರಕ್ಷಣೆಗಾಗಿ ಕಾರ್ನಾಟಕ ಸರ್ಕಾರ ಜತೆ ನಿಕಟವಾಗಿ ಕಾರ್ಯನಿರ್ವಹಿಸಿದ್ದರು.

ವಿಶೇಷವೆಂದರೆ ಈ ಪ್ರಶಸ್ತಿಗೆ ಭಾಜನರಾದ ಪ್ರತಿಯೊಬ್ಬರಿಗೆ ಅವರ ಯೋಜನೆಗಳಿಗೆ ಒಂದು ವರ್ಷಕ್ಕೆ 29 ಲಕ್ಷ ರು. ನೀಡಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka’s famed wildlife activist Sanjay Gubbi won the annual Whitley Awards, dubbed as the ‘Green Oscars’, for his work in the field of animal conservation in India.
Please Wait while comments are loading...