ಕೋಟಿ ಕೋಟಿ ಕುಳಗಳು ವಿಧಾನಸಭೆ ಚುನಾವಣೆಯಲ್ಲಿ ಖರ್ಚು ಮಾಡಿದ್ದು ಲಕ್ಷಗಳಷ್ಟೇ!

ಬೆಂಗಳೂರು, ಜುಲೈ 22: ಭಾರತದ ಅತಿ ಶ್ರೀಮಂತ ಶಾಸಕ ಎನಿಸಿಕೊಂಡವರಲ್ಲಿ ಕರ್ನಾಟಕದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‌ ಡಬ್ಲ್ಯು) ವರದಿಗಳ ಪ್ರಕಾರ ದೇಶದಲ್ಲಿ ಗರಿಷ್ಠ ಸಂಪತ್ತು ಹೊಂದಿರುವ 20 ಶಾಸಕರ ಪಟ್ಟಿಯಲ್ಲಿ ಕರ್ನಾಟಕದ 12 ಮಂದಿ ಶಾಸಕರು ಸ್ಥಾನ ಪಡೆದಿದ್ದಾರೆ.

ಕನಕಪುರ ಶಾಸಕ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌, ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ ಹಾಗೂ ಗೋವಿಂದರಾಜ ನಗರ ಶಾಸಕ ಪ್ರಿಯಾಕೃಷ್ಣ ಅವರ ಒಟ್ಟು ಅಸ್ತಿಯ ಮೌಲ್ಯ ಸಾವಿರ ಕೋಟಿ ದಾಟಿದ್ದು, ಈ ಕೋಟಿ ಕೋಟಿ ಕುಳಗಳು 2023 ರ ವಿಧಾನಸಭೆ ಚುನಾವಣೆಯಲ್ಲಿ ಕರ್ಚು ಮಾಡಿದ್ದು ಲಕ್ಷಗಳಷ್ಟೇ!.

Karnataka Richest MLAs Only Spent Lakh for Assembly Election

ಹೌದು, ಚುನಾವಣಾ ಆಯೋಗ ಒಬ್ಬ ಅಭ್ಯರ್ಥಿ ವಿಧಾನಸಭೆ ಚುನಾವಣೆಯಲ್ಲಿ ಗರಿಷ್ಟ 40 ಲಕ್ಷದವರೆಗೆ ವೆಚ್ಚ ಮಾಡಲು ಮಿತಿ ವಿಧಿಸಿತ್ತು. ಇನ್ನೂ ಚುನಾವಣೆಯ ವೇಳೆ ಅಭ್ಯರ್ಥಿಯೂ ಖರ್ಚು ಮಾಡಿದ ವೆಚ್ಚದ ಮಾಹಿತಿಯನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದಾರೆ.

ಇನ್ನೂ ಅತೀ ಹೆಚ್ಚು ಶ್ರೀಮಂತರಾಗಿರುವ ಡಿ ಕೆ ಶಿವಕುಮಾರ್‌ ಅವರು, 1,400ಕೋಟಿಗೂ ಹೆಚ್ಚು ಆಸ್ತಿಯನ್ನ ಹೊಂದಿದ್ದು, ತಮ್ಮ ಚುನಾವಣಾ ವೆಚ್ಚವನ್ನ 18.29ಲಕ್ಷ ಎಂದು ಡಿ ಕೆ ಶಿವಕುಮಾರ್‌
ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೇ 1.200ಕೋಟಿಗೂ ಹೆಚ್ಚು ಆಸ್ತಿ ಒಡೆಯರಾಗಿರುವ ಕೆ.ಎಚ್‌.ಪುಟ್ಟಸ್ವಾಮಿಗೌಡ ಅವರು ತಮ್ಮ ಚುನಾವಣಾ ವೆಚ್ಚ 10, 78ಲಕ್ಷ. ಹಾಗೂ 1,100ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಪ್ರಿಯಾ ಕೃಷ್ಣ 2.06 ಲಕ್ಷವನ್ನ ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.

Karnataka Richest MLAs Only Spent Lakh for Assembly Election

ಇನ್ನೂ ಎಡಿಆರ್ ಮತ್ತು ಎನ್‌ ಇಡಬು ವರದಿಯಲ್ಲಿರುವ ರಾಜ್ಯದ ಸಿರಿವಂತರ ಶಾಸಕರೆಲ್ಲರೂ ಚುನಾವಣೆಯಲ್ಲಿ ಲಕ್ಷಗಳನ್ನು ವೆಚ್ಚ ಮಾಡಿರುವುದಾಗಿ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಪ್ರಚಾರ ಸಾಮಗ್ರಿಗಳಾದ ಧ್ವನಿವರ್ಧಕ ಸಾಧನಗಳು, ಬ್ಯಾನರ್, ಕರಪತ್ರ, ಭಿತ್ತಿಪತ್ರಗಳು, ವಾಹನಗಳ ಬಾಡಿಗೆ, ಊಟ, ವಸತಿ ವ್ಯವಸ್ಥೆ, ಪೀಠೋಪಕರಣಗಳ ದರ ಹೀಗೆ ವೆಚ್ಚಗಳ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ದಾಖಲಿಸಬೇಕು.

ದೇಶದ ಟಾಪ್20 ಶ್ರೀಮಂತ ಶಾಸಕರಲ್ಲಿ ಕರ್ನಾಟಕದವರೆಷ್ಟು?

ಡಿಕೆ ಶಿವಕುಮಾರ್, ಕಾಂಗ್ರೆಸ್: 1,413ಕೋಟಿ ರೂ

ಕೆಎಚ್ ಪುಟ್ಟಸ್ವಾಮಿಗೌಡ, ಪಕ್ಷೇತರ: 1,267 ಕೋಟಿ ರೂ

ಪ್ರಿಯಾಕೃಷ್ಣ, ಕಾಂಗ್ರೆಸ್: 1,156 ಕೋಟಿ ರೂ

ಬಿಎಸ್ ಸುರೇಶ, ಕಾಂಗ್ರೆಸ್: 648 ಕೋಟಿ ರೂ

ಎನ್.ಎ. ಹ್ಯಾರಿಸ್, ಕಾಂಗ್ರೆಸ್: 439 ಕೋಟಿ ರೂ

ಎಚ್.ಕೆ. ಸುರೇಶ್, ಬಿಜೆಪಿ: 435 ಕೋಟಿ ರೂ

ಆರ್.ವಿ. ದೇಶಪಾಂಡೆ, ಕಾಂಗ್ರೆಸ್: 363 ಕೋಟಿ ರೂ

ಎಂಆರ್ ಮಂಜುನಾಥ್, ಜೆಡಿಎಸ್: 316 ಕೋಟಿ ರೂ

ಎಸ್.ಎನ್. ಸುಬ್ಬಾರೆಡ್ಡಿ, ಕಾಂಗ್ರೆಸ್: 313 ಕೋಟಿ ರೂ

ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್: 312 ಕೋಟಿ ರೂ

ಎಂ ಕೃಷ್ಣಪ್ಪ, ಕಾಂಗ್ರೆಸ್: 296 ಕೋಟಿ ರೂ

ಮುನಿರತ್ನ, ಬಿಜೆಪಿ: 293 ಕೋಟಿ ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+