ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬಕಾರಿ ಇಲಾಖೆ : ಡಿಸೆಂಬರ್ 23-31 ರವರೆಗೆ 1,262 ಕೋಟಿ ರೂ ಮೌಲ್ಯದ ಮದ್ಯ ಮಾರಾಟ !

|
Google Oneindia Kannada News

ಬೆಂಗಳೂರು: ಜನವರಿ,03: ಸಾಲು-ಸಾಲಾಗಿ ಆಗಮಿಸಿದ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ಅಬಕಾರಿ ಇಲಾಖೆಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆದಾಯ ಹರಿದು ಬಂದಿದೆ. ಡಿಸೆಂಬರ್ 23 ರಿಂದ ಡಿಸೆಂಬರ್ 31 ರ ವರೆಗೆ ಸುಮಾರು1,262 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.

ಕಳೆದ ಮೂರು ವರ್ಷಗಳಿಂದ ಕರೊನಾ ಹಾವಳಿಯಿಂದಾಗಿ ಸಂಭ್ರಮಾಚರಣೆಗೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿತ್ತು, ಆದರೇ ಈ ಬಾರಿ ಮುಕ್ತವಾಗಿ ಆಚರಣೆಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಹರಿದು ಬಂದಿದೆ.

ಕ್ರಿಸ್‌ಮಸ್‌: ಪ್ಲಮ್ ಕೇಕ್‌ಗಳಿಗಾಗಿ ಮಾರುಕಟ್ಟೆಗೆ ಮುಗಿಬಿದ್ದ ಕೇರಳಿಗರು ಕ್ರಿಸ್‌ಮಸ್‌: ಪ್ಲಮ್ ಕೇಕ್‌ಗಳಿಗಾಗಿ ಮಾರುಕಟ್ಟೆಗೆ ಮುಗಿಬಿದ್ದ ಕೇರಳಿಗರು

ಈ ಕುರಿತು ಅಬಕಾರಿ ಇಲಾಖೆ ನೀಡಿದ ಮಾಹಿತಿಯನ್ವಯ ಡಿಸೆಂಬರ್ 23 ರಿಂದ 31ರವರೆಗೆ, ಅಂದರೇ ಕಳೆದ 9 ದಿನಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದ್ದು,20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಮತ್ತು 15.04 ಲಕ್ಷ ಲೀಟರ್ ಬಿಯರ್ ಮಾರಾಟಗೊಂಡು ದಾಖಲೆ ಸೃಷ್ಟಿಸಿದೆ.

Karnataka Reported Rs 1,262 crore sale of liquor from Dec 23-31

ದುಪ್ಪಟು ಬೆಲೆಗೆ ಮಾರಾಟ !

ಸಂಭ್ರಮಾಚರಣೆಯ ಭಾಗವಾಗಿ ವಿವಿಧ ರಾಜ್ಯಗಳಲ್ಲಿರುವ ಪಬ್‌ಗಳು ಹೌಸ್‌ಪುಲ್‌ಗಳಾಗಿದ್ದವು. ಈ ಅವಕಾಶವನ್ನೇ ಬಳಸಿಕೊಂಡಿರುವ ಪಬ್‌ ಮಾಲೀಕರು ನಿಗದಿತ ದರಕ್ಕಿಂತ 50% ರಷ್ಟು ಬೆಲೆಯನ್ನು ಹೆಚ್ಚಿಸುವ ಮೂಲಕ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡಿದ್ದಾರೆ. ಹಲವು ಪಬ್‌ಗಳಲ್ಲಿ ಜನರು ಅಧಿಕ ಹಣ ನೀಡಲು ಮುಂದಾದರೂ, ಬಹುತೇಕ ಪಬ್‌ಗಳು ಭರ್ತಿಯಾಗಿದ್ದರಿಂದ ನಿರಾಶೆಗೊಂಡರು. ಇನ್ನು ಕೆಲವು ಮದ್ಯ ಪ್ರೀಯರು ಜಾಣ್ಮೆಯನ್ನು ಪ್ರದರ್ಶಿಸಿದ್ದು, ಮುಂಗಡವಾಗಿ ಮದ್ಯವನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಹೌಸ್‌ ಪಾರ್ಟಿಯಲ್ಲಿ ತೊಡಗಿಸಿಕೊಂಡಿದ್ದರು.

ಡಿಸೆಂಬರ್ 27ರಂದು- - 3.57 ಲಕ್ಷ ಲೀಟರ್ (2.41 ಲಕ್ಷ ಬಿಯರ್)
ಡಿಸೆಂಬರ್ 28ರಂದು - 2.31 ಲಕ್ಷ ಲೀಟರ್ (1.67 ಲಕ್ಷ ಬಿಯರ್)
ಡಿಸೆಂಬರ್ 29ರಂದು - 2.31 ಲಕ್ಷ ಲೀಟರ್ (1.93 ಲಕ್ಷ ಬಿಯರ್)
ಡಿಸೆಂಬರ್ 30ರಂದು - 2.93 ಲಕ್ಷ ಲೀಟರ್ (2.59 ಲಕ್ಷ ಬಿಯರ್)
ಡಿಸೆಂಬರ್ 31ರಂದು - 3 ಲಕ್ಷ ಲೀಟರ್ (2.41 ಲಕ್ಷ ಬಿಯರ್)
Karnataka Reported Rs 1,262 crore sale of liquor from Dec 23-31

31ರಂದು 200 ಕೋಟಿ ರೂ ಮೌಲ್ಯದ ಮದ್ಯ ಮಾರಾಟ !

ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷದ ಮುನ್ನಾದಿನದಂದು ಮದ್ಯ ಮಾರಾಟದಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷ ಡಿಸೆಂಬರ್ 31 ರಂದು 2.25 ಲಕ್ಷ ಕಾರ್ಟನ್ ಬಾಕ್ಸ್‌ಗಳಲ್ಲಿ ಭಾರತೀಯ ನಿರ್ಮಿತ ಮದ್ಯ ಮಾರಾಟವಾಗಿದ್ದು, ಈ ಬಾರಿ ಅದು 2.39 ಲಕ್ಷ ಕಾರ್ಟನ್ ಬಾಕ್ಸ್‌ಗಳಿಗೆ ಹೆಚ್ಚಳವಾಗಿದೆ. ಡಿಸೆಂಬರ್ 31ರಂದು ಸುಮಾರು 200 ಕೋಟಿ ರೂ ಮೌಲ್ಯದ ಬೀರ್ ಮತ್ತು ಐಎಂಎಲ್ ಮಾರಾಟವಾಗಿದೆ ಎಂಬ ಮಾಹಿತಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ.

ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ 2022-23ನೇ ಸಾಲಿಗೆ 29 ಸಾವಿರ ಕೋಟಿ ಆದಾಯದ ಗುರಿ ನೀಡಲಾಗಿತ್ತು. ಈ ವರ್ಷದ ಡಿಸೆಂಬರ್ 29ರವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಇಲಾಖೆಗೆ 21,981 ಕೋಟಿ ರೂ. ಲಾಭವಾಗಿದೆ. ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಇದೇ ಅವಧಿಯಲ್ಲಿ ಮದ್ಯ ಮಾರಾಟದಲ್ಲಿ ಶೇ.14ರಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ 3,921 ವೈನ್‌ಶಾಪ್‌ಗಳು, 3,622 ಬಾರ್ ಮತ್ತು ರೆಸ್ಟೋರೆಂಟ್‌ಗಳು, 1,729 ಹೋಟೆಲ್‌ಗಳು ಮತ್ತು ವಸತಿಗೃಹಗಳು ಮತ್ತು 265 ಕ್ಲಬ್‌ಗಳು ಸೇರಿದಂತೆ ಒಟ್ಟು 12,113 ಮದ್ಯದ ಅಂಗಡಿಗಳಿವೆ.

English summary
In the wake of the Christmas and New Year celebrations, the revenue worth crores of rupees has flowed to the Excise Department of the state. It set a record by selling liquor worth Rs 1,262 crore from December 23 to December 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X