Get Updates
Get notified of breaking news, exclusive insights, and must-see stories!

Kappatagudda: ಮಹದಾಯಿ ಯೋಜನೆ ಜಾರಿ, ಕಪ್ಪತ್ತಗುಡ್ಡ ರಕ್ಷಣೆಗೆ ಬೃಹತ್ ಪಾದಯಾತ್ರೆ

ಹುಬ್ಬಳ್ಳಿ, ಸೆಪ್ಟಂಬರ್ 19: ಉತ್ತರ ಕರ್ನಾಟಕದ ಜನರ ದಶಕಗಳ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಇದರೊಂದಿಗೆ ದಕ್ಷಿಣ‌ ಕಾಶೀ ಎಂದೇ ಕರೆಸಿಕೊಳ್ಳುವ ಕಪ್ಪತ್ತಗುಡ್ಡ ರಕ್ಷಣೆಯ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಹುಬ್ಬಳ್ಳಿಯಿಂದ ಬೃಹತ್ ಪಾದಯಾತ್ರೆ ಆರಂಭವಾಗಿದೆ. ಅದಕ್ಕೆ ಇಂದು ಗುರುವಾರ ಚೆನ್ನಮ್ಮ ವೃತ್ತದಲ್ಲಿ ಚಾಲನೆ ನೀಡಲಾಗಿದೆ.

ಇಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಬಣದ ನೇತೃತ್ವದಲ್ಲಿ ಮುಖಂಡತ್ವದಲ್ಲಿ ರಾಜ್ಯ ಸಮಿತಿ ಮತ್ತು ಉತ್ತರ ಕರ್ನಾಟಕ ಹಾಗೂ ಬೆಳಗಾವಿ ವಿಭಾಗದ ಪದಾಧಿಕಾರಿಗಳು, ಕಾರ್ಯಕರ್ತರು ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿದ್ದರು. ಎರಡು ಮಹತ್ವದ ಯೋಜನೆಗಳ ಪರವಾಗಿ ಬೃಹತ್ ಪ್ರಮಾಣದ ಪಾದಯಾತ್ರೆ ಆರಂಭವಾಗಿದೆ.

Karnataka Rakshana Vedike Launches Rally for Mahadayi Project and Kappatagudda Protection

ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಯಲ್ಲಿ ಸರ್ಕಾರಗಳು ವಿಳಂಬ ಮಾಡುತ್ತಿದೆ. ಇವುಗಳ ಅನುಷ್ಠಾನದಿಂದ ಲಕ್ಷಾಂತರ ಜನರಿಗೆ ಸಹಾಯವಾಗುತ್ತಿದೆ. ಹೀಗಿದ್ದರೂ ಸರ್ಕಾರ ಇವುಗಳ ಜಾರಿಗೆ ಮನಸ್ಸು ಮಾಡುತ್ತಿಲ್ಲ. ಇನ್ನೂ ದಕ್ಷಿಣ‌ ಕಾಶೀ ಎಂದೇ ಕರೆಯುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತಗುಡ್ಡ ಉಳಿಯಬೇಕು ಎಂದು ಕರೆವೇ ರಾಜ್ಯಾಧ್ಯಕ್ಷರು, ಕಾರ್ಯಕರ್ತರ ಆಗ್ರಹಿಸಿದರು.

ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಕರವೇ ಆಕ್ರೋಶ

ಉತ್ತರ ಕರ್ನಾಟಕದ ಜೀವನಾಡಿ ಕಳಸಾ ಬಂಡೂರಿ ಮಹಾದಾಯಿ ನಾಲೆ ಜೋಡಣೆ ಆಗಬೇಕು. ಕಪ್ಪತ್ತಗುಡ್ಡ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ ಅನೇಕ ದಿನಗಳಿಂದ ಸರ್ಕಾರಕ್ಕೆ ನಾವು ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಆದರೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಗಮನ ಹರಿಸದೇ ಕಡೆಗಣಿಸುತ್ತಿವೆ. ನಾಡಿನ ರೈತರ ಬೇಡಿಕೆ ಈಡೇರಿಕೆ ಕಡೆಗೆ ಮಗನ ಹರಿಸುತ್ತಿಲ್ಲ ಎಂದು ಕರೆವೇ ದೂರಿದೆ.

ಗದಗ ಜಿಲ್ಲೆಯ ನರಗುಂದದಿಂದ ಗದಗ ವರಗೆ ಎರಡು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಯಲ್ಲಿ ಉತ್ತರ ಕರ್ಣಾಟಕ ಭಾಗದ ಗದಗ, ಹಾವೇರಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಯ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಧೀಮಂತರಿಗೆ ನಮಿಸಿ ಪಾದಯಾತ್ರೆಗೆ ಚಾಲನೆ

ಪಾದಯಾತ್ರೆ ಆರಂಭಕ್ಕೂ ಮೊದಲೂ ಚೆನ್ನಮ್ಮ ವೃತ್ತದಲ್ಲಿ ರಾಣಿ ಚೆನ್ನಮ್ಮ, ಕ್ರಾಂತಿವೀರ ವೀರ ಸಂಗೊಳ್ಳಿ ರಾಯಣ್ಣ, ಹಾಗೂ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರು ಮತ್ತು ಕರವೇ ರಾಜ್ಯ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು.

ಪಾದಯಾತ್ರೆಯಲ್ಲಿ ನೂರಾರು ದ್ವಿಚಕ್ರ ವಾಹನಗಳು, 50 ರಿಂದ 60 ಆಟೋ ಹಾಗೂ ನೂರಾರು ಬೈಕುಗಳು, 25 ಇತರೆ ವಾಹನಗಳ ಪಾಲ್ಗೊಂಡಿದ್ದವು. ಇಲ್ಲಿನ ರ್ಯಾಲಿ ನಂತರ ನರಗುಂದದಿಂದ ಎರಡು ದಿನಗಳ ಪಾದಯಾತ್ರೆ ಆರಂಭವಾಗಲಿದೆ. ಈ ಪಾದಯಾತ್ರೆಯು 48 ಕಿ.ಮೀ. ಕ್ರಮಿಸಲಿದ್ದು, ಗದಗ ಜಿಲ್ಲೆಯಾದ್ಯಂತ ಹೋರಾಟದ ಜಾಗೃತಿ ಮೂಡಿಸಲು ಕರವೇ ತಿರ್ಮಾನಿಸಿದೆ. ಪಾದಯಾತ್ರೆ ಮುಖೇನ ಸರ್ಕಾರದ ಗಮನ ಸೆಳೆದು ಗದಗ ಜಿಲ್ಲಾಧಿಕಾರಿಗಳು ಹಾಗೂ ಸಚಿವರಾದ ಎಚ್ ಕೆ.ಪಾಟೀಲ್ ಅವರಿಗೆ ಲಿಖಿತ ಮನವಿ ಸಲ್ಲಿಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+