ವಿಜಯಪುರ ಗುಮ್ಮಟ ನಗರಿ & ತುಮಕೂರು ಕಲ್ಪತರು ನಾಡು, ಹಾಗಾದರೆ ನಿಮ್ಮ ಊರಿಗೆ ಇರುವ ಬಿರುದು... Karnataka Rajyotsava
ಕನ್ನಡ ನಾಡಿನ ಎಲ್ಲಾ ಕನ್ನಡಿಗರಿಗೂ ಹಾಗೂ ಕನ್ನಡ ನೆಲದಿಂದ ವಲಸೆ ಹೋಗಿ ಸಾಧನೆ ಮಾಡಿ ಕನ್ನಡ ನಾಡಿಗೆ ಹೆಮ್ಮೆ ತಂದಿರುವ ಎಲ್ಲಾ 7 ಕೋಟಿ ಕನ್ನಡಿಗರಿಗೂ ಹೆಮ್ಮೆಯ ದಿನವಾದ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. ನಾವು ಕನ್ನಡಿಗರು, ಸಾವಿರಾರು ವರ್ಷಗಳ ಇತಿಹಾಸ ನಮಗೆ ಇದೆ. ಭಾರತ ದೇಶದಲ್ಲಿ ಕನ್ನಡಿಗರಿಗೆ ದೊಡ್ಡ ಸ್ಥಾನಮಾನ ಇದ್ದು, ಒಂದೊಂದು ಜಿಲ್ಲೆ ಕೂಡ ಒಂದೊಂದು ವಿಚಾರಕ್ಕೆ ಫೇಮಸ್ ಆಗಿದೆ. ವಿಜಯಪುರ ಗುಮ್ಮಟ ನಗರಿ & ತುಮಕೂರು ಕಲ್ಪತರು ನಾಡು, ಹಾಗಾದರೆ ನಿಮ್ಮ ಊರಿಗೆ ಇರುವ ಬಿರುದು ಯಾವುದು? ಬನ್ನಿ ತಿಳಿಯಿರಿ...
ಕನ್ನಡದ ನೆಲ ವೀರರ ನಾಡು... ಕನ್ನಡ ನಾಡಿಗೆ 5000 ವರ್ಷಗಳ ಬೃಹತ್ ಇತಿಹಾಸ ಇದೆ. ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತರಾಗಿ ಬಾಳಿದ್ದವರು ಕನ್ನಡಿಗರು. ಹೀಗೆ ಕನ್ನಡ ಭಾಷೆಗೆ ಜಗತ್ತಿನ ಮೂಲೆ ಮೂಲೆಯಲ್ಲೂ ದೊಡ್ಡ ಹೆಸರು ಇದೆ. ಕರ್ನಾಟಕ ರಾಜ್ಯ ಸಂಪತ್ಭರಿತ ರಾಜ್ಯ ಮಾತ್ರವಲ್ಲ, ಕನ್ನಡಿಗರು ಕೂಡ ಉತ್ತಮ ಸಂಸ್ಕಾರ ಉಳ್ಳವರು ಕೂಡ ಆಗಿದ್ದಾರೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಒಂದೊಂದು ಜಿಲ್ಲೆ ಕೂಡ ಒಂದೊಂದು ವಿಶೇಷ ಗುಣವನ್ನು ಹೊಂದಿದ್ದು, ವಿಶೇಷ ಹೆಸರನ್ನು ಅಥವಾ ಬಿರುದು ಪಡೆದಿದೆ. ಈ ಬಗ್ಗೆ ಮಾಹಿತಿ ಮುಂದೆ ಇದೆ ಓದಿ...

ಕರ್ನಾಟಕದ ಯಾವ ಜಿಲ್ಲೆಗೆ ಯಾವ ಬಿರುದು?
1) ವಿಜಯಪುರ - ಗುಮ್ಮಟ ನಗರಿ
2) ಧಾರವಾಡ - ಪೇಡಾ ನಗರಿ
3) ಗದಗ - ಮುದ್ರಣ ನಗರಿ
4) ಗೋಕಾಕ - ಕರದಂಟು ನಗರಿ
5) ಬೆಳಗಾವಿ - ಕುಂದಾ ನಗರಿ
6) ಮಂಗಳೂರು - ಬಂದರು ನಗರಿ
7) ಮಡಿಕೇರಿ - ಮಂಜಿನ ನಗರಿ
8) ಬೆಂಗಳೂರು - ಉದ್ಯಾನ ನಗರಿ
9) ಹಾವೇರಿ - ಏಲಕ್ಕಿ ನಗರಿ
10) ಉಡುಪಿ - ಕೃಷ್ಣ ನಗರಿ
11) ದಾವಣಗೆರೆ - ಬೆಣ್ಣೆ ನಗರಿ
12) ಗಂಗಾವತಿ - ಭತ್ತದ ಕಣಜ
13) ಮೈಸೂರು - ಸಾಂಸ್ಕೃತಿಕ ನಗರಿ
14) ಬಾಗಲಕೋಟೆ - ಕೋಟೆ ನಾಡು
15) ಬಳ್ಳಾರಿ - ಗಣಿ ನಾಡು
16) ಚಿತ್ರದುರ್ಗ - ಕೋಟೆ ನಾಡು
17) ತುಮಕೂರು - ಕಲ್ಪತರು ನಾಡು
18) ಕೋಲಾರ - ಚಿನ್ನದ ನಾಡು
19) ಚನ್ನಪಟ್ಟಣ - ಬೊಂಬೆ ನಾಡು
20) ಮಂಡ್ಯ - ಸಕ್ಕರೆ ನಾಡು
21) ರಾಮನಗರ - ರೇಷ್ಮೆ ನಾಡು
22) ಚಿಕ್ಕಮಗಳೂರು - ಕಾಫಿ ನಾಡು
23) ಬಾದಾಮಿ - ಚಾಲುಕ್ಯರ ನಾಡು
24) ತಲಕಾಡು - ಗಂಗರ ನಾಡು
25) ರಾಯಚೂರು - ಬಿಸಿಲ ನಾಡು
26) ಶಿವಮೊಗ್ಗ - ಮಲೆನಾಡಿನ ಹೆಬ್ಬಾಗಿಲು
27) ಕಲಬುರಗಿ - ತೊಗರಿ ಕಣಜ
28) ಕಾರವಾರ - ಜಲಪಾತಗಳ ತವರೂರು
29) ಭದ್ರಾವತಿ - ಕೈಗಾರಿಕೆಗಳ ನಗರಿ
30) ಯಾದಗಿರಿ - ಗಿರಿಗಳ ನಾಡು
31) ಬೀದರ್ - ಸೂಫಿ ಸಂತರ ನಾಡು
32) ಬನವಾಸಿ - ಕದಂಬರ ನಾಡು












Click it and Unblock the Notifications