Karnataka Rain: ಬೆಂಗಳೂರು, ಕರಾವಳಿ ಜಿಲ್ಲೆಗಳಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ- ಹವಾಮಾನ ವರದಿ ಪಡೆಯಿರಿ
ಬೆಂಗಳೂರು, ಮಂಗಳೂರು, ಉಡುಪಿ ಆಗಸ್ಟ್ 19: ಕಳೆದ ಕೆಲ ದಿನಗಳ ಬಿಸಿಲಿನ ಬಳಿಕ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಮೋಡ ಮುಸುಕಿದ ವಾತಾವರಣವಿದ್ದು, ಇಂದು ಸಂಜೆಯ ವೇಳೆಗೆ ಭಾರೀ ಮಳೆಯಾಗಿದೆ. ಇದು ಸಿಲಿಕಾನ್ ಸಿಟಿ ಜನರಿಗೆ ರಿಲೀಫ್ ನೀಡಿದೆ. ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಬೆಳಿಗ್ಗೆಯಿಂದ ಎಡೆಬಿಡದೇ ಮಳೆ ಸುರಿಯುತ್ತಿರುವ ಬಗ್ಗೆ ವರದಿಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಉಂಟಾಗಿರುವುದರಿಂದ ಬೆಂಗಳೂರಿನ ಹವಾಮಾನದಲ್ಲಿ ದಿಢೀರ್ ಬದಲಾವಣೆ ಕಾಣಿಸಿಕೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸಿಲಿಕಾನ್ ಸಿಟಿಯಲ್ಲಿ ನಿನ್ನೆಯಿಂದಲೂ ಮೋಡ ಕವಿದ ವಾತಾವರಣವಿದೆ. ನಿನ್ನೆ ಸಂಜೆ ವೇಳೆಗೆ ಕೆಲವಡೆ ಅಲ್ಪಾವಧಿಯ ಮಳೆ ಸುರಿದಿದೆ.
ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ. ಬೆಳಿಗ್ಗೆ ಜಿಟಿಜಿಟಿ ಮಳೆ ಆಗಿದೆ. ಆದರೆ, ಇಂದು ಸಂಜೆ ನಗರದ ಪ್ರಮುಖ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಇದರೊಂದಿಗೆ ಬಲವಾದ ಗಾಳಿಯೂ ಬೀಸುತ್ತಿದೆ.

ಕರಾವಳಿಯಲ್ಲಿ ಭಾರೀ ಮಳೆ
ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಮುಂದಿನ 24 ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಉತ್ತರ ಒಳನಾಡಿನಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ.
ಉಡುಪಿ ಜಿಲ್ಲೆ
-ತೆಂಕ: 127 ಮಿ.ಮೀ
-ಬೆಳ್ಮಣ್: 120.5 ಮಿ.ಮೀ
-ಪಡುಬಿದ್ರಿ: 110 ಮಿ.ಮೀ
-ಫಲಿಮಾರು: 104.5 ಮಿ.ಮೀ
-ಕಾರ್ಕಳ: 86 ಮಿ.ಮೀ
-ಉಡುಪಿ: 46 ಮಿ.ಮೀ

ದಕ್ಷಿಣ ಕನ್ನಡ ಜಿಲ್ಲೆ
-ಕೆಮ್ರಾಲ್: 106 ಮಿಮೀ
-ಕಿನ್ನಿಗೋಳಿ: 88 ಮಿ.ಮೀ
-ಬಳ್ಕುಂಜೆ: 86 ಮಿ.ಮೀ
-ಪಲ್ಲಡ್ಕ: 79 ಮಿ.ಮೀ
-ಐಕಳ: 77 ಮಿ.ಮೀ
-ಪಡುಪಣಂಬೂರು: 77 ಮಿ.ಮೀ
-ಬಾಲಾ: 75 ಮಿಮೀ
-ತೆಂಕಮಿಜಾರು: 72 ಮಿ.ಮೀ
-ಬಜ್ಪೆ: 71 ಮಿ.ಮೀ
-ನೆಲ್ಲೂರು ಕೆಮರಾಜೆ: 70.5 ಮಿ.ಮೀ
-ಪುತ್ತಿಗೆ: 68.5 ಮಿ.ಮೀ
-ಪಡುಪೆರಾರ್: 65.5 ಮಿ.ಮೀ
-ಮಳವೂರು: 65.5 ಮಿ.ಮೀ
-ಬೆಳುವಾಯಿ: 65 ಮಿ.ಮೀ
-ಗುರುಪುರ: 56.5 ಮಿ.ಮೀ
ಉತ್ತರ ಒಳನಾಡಿನ ರಾಯಚೂರು, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಬೆಂಗಳೂರು ನಗರ, ವಿಜಯಪುರ, ಯಾದಗಿರಿ, ಬಳ್ಳಾರಿಯಲ್ಲೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೈಸೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು ಜಿಟಿಜಿಟಿ ಮಳೆಯಾಗುತ್ತಿದೆ.












Click it and Unblock the Notifications