Rain Alert: ಕರ್ನಾಟಕದ ಈ 10 ಜಿಲ್ಲೆಗಳಿಗೆ ಮುಂದಿನ 05 ದಿನ ಭಾರಿ ಮಳೆ! ಯೆಲ್ಲೋ ಅಲರ್ಟ್
ಬೆಂಗಳೂರು, ಆಗಸ್ಟ್ 26: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿಯಲಿದೆ. ನಾಳೆ ಬುಧವಾರ ಗೌರಿ ಗಣೇಶ ಹಬ್ಬದ ದಿನದಂದೆ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಕೆಲವೆಡೆ ಆಗಾಗ ಸೋನೆ ಮಳೆ ಬರುತ್ತಿದ್ದು, ಬಿಸಿಲಿನ ತಾಪ ತುಸು ಹೆಚ್ಚಾಗಿದೆ..
ಬುಧವಾರ (ಆ.27)ದಿಂದ ಆಗಸ್ಟ್ 31ರವರೆಗೆ ರಾಜ್ಯದಲ್ಲಿ ಧಾರಾಕಾರ ಮಳೆ ಆಗಲಿದೆ. ಮುಂದಿನ 05 ದಿನಗಳ ಪೈಕಿ ಮೂರು ದಿನ 10 ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದೊಂದು ದಿನ ಜೋರು ಮಳೆ ಆಗಲಿದೆ. ಈ ಜಿಲ್ಲೆ ಸೇರಿದಂತೆ ನಿರಂತರ ಮಳೆ ಆಗಲಿರುವ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಾದ್ಯಂತ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ತಿಳಿಸಿದೆ.

ತಾತ್ಕಾಲಿಕವಾಗಿ ಬ್ರೇಕ್ ನೀಡಿದ್ದ ಮುಂಗಾರು ಮಳೆ ಹಬ್ಬದ ಸಡಗರದ ಹೊತ್ತಿನಲ್ಲಿ ಅರ್ಧ ರಾಜ್ಯಕ್ಕೆ ದರ್ಶನ ನೀಡಲಿದೆ. ಇದರ ಹೊರತು ಹಾವೇರಿ, ಗದಗ, ಧಾರವಾಡ, ಕೊಪ್ಪಳ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ದಾವಣಗೆರೆ, ವಿಜಯನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಬಿಸಿಲಿನ ದರ್ಶನ ಕಂಡು ಬಂದಿದೆ. ಮಳೆಗಾಲದಲ್ಲಿ ಒಣ ಹವೆಯ ದೃಶ್ಯ ಮರುಕಳಿಸಿದೆ.
ಬೆಂಗಳೂರಿನ ಹವಾಮಾನ ಮುನ್ಸೂಚನೆ
ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಅಲ್ಲಲ್ಲಿ ಮೋಡ ಕವಿದ ವಾತವರಣ ಕಂಡು ಬರಲಿದೆ. 30-40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿ, ಹಗುರ ಮಳೆಯ ನಿರೀಕ್ಷೆ ಇದೆ. ನಗರ ಕನಿಷ್ಠ ತಾಪಮಾನ 20 ಹಾಗೂ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಇದರ ಹೊರತು ಬೆಂಗಳೂರಿಗೆ ಭಾರೀ ಮಳೆ ಮುನ್ಸೂಚನೆ ಇಲ್ಲ ಎಂಬುದು ದೃಢವಾಗಿದೆ.
ಮಧ್ಯ ಪ್ರದೇಶ, ಬಂಗಾಳಕೊಲ್ಲಿ ಆಗ್ನೇಯ ಭಾಗದಲ್ಲಿ ಸೃಷ್ಟಿಯಾಗಿರುವ ವಾಯು ಚಂಡಮಾರುತ ಪ್ರಸರಣವು ದುರ್ಬಲಗೊಂಡಿದೆ. ಬೇರೆಡೆ ಇಂತಹ ವೈಪರೀತ್ಯಗಳು ತೀವ್ರಗೊಂಡರೆ ಕರ್ನಾಟಕಕ್ಕೆ ಮತ್ತೆ ಹೆಚ್ಚಿನ ಮಳೆ ಆಗಬಹುದ ಎಂಬ ನಿರೀಕ್ಷೆ ಇದೆ.












Click it and Unblock the Notifications