Karnataka Rains: ಇಂದಿನಿಂದ ರಾಜ್ಯದಲ್ಲಿ ಮಳೆ ಆರ್ಭಟ ಶುರು: ಈ ಜಿಲ್ಲೆಗಳಿಗೆ ಭಾರೀ ಮಳೆ & ಆರೆಂಜ್ ಅಲರ್ಟ್?
Karnataka Weather Alert: ಕರ್ನಾಟಕ ರಾಜ್ಯದಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟಿಸುವುದು ಖಚಿತವಾಗಿದೆ. ಇಂದಿನಿಂದ (ಸೆಪ್ಟಂಬರ್ 11) ಮುಂದಿನ ಐದು ದಿನಗಳವರೆಗೆ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ (65-115 ಮಿಲಿ ಮೀಟರ್) ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಯಾವೆಲ್ಲ ಜಿಲ್ಲೆಗಳಿಗೆ ಎಷ್ಟು ಜಿಲ್ಲೆ ಮಳೆ ಎಚ್ಚರಿಕೆ, 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾvದಿಂದಾಗಿ ಬೀದರ್, ಕಲಬುರಗಿ, ಯಾದಗಿರಿ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಸೆಪ್ಟಂಬರ್ 11 & 12ರಂದು ಭಾರೀ ಮಳೆ ಸುರಿಯಲಿದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಸೆಪ್ಟಂಬರ್ 13ರಂದು 14ರಂದು ವಿಜಯಪುರ, ಕೊಪ್ಪಳ, ರಾಯಚೂರು, ಯಾದಗಿರಿ, ಮತ್ತೆ ಕಲಬುರಗಿಯಲ್ಲಿ ಹಾಗೂ ಸೆಪ್ಟಂಬರ್ 15ರಂದು ಒಂದು ದಿನ ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜೋರು ಗಾಳಿ ಸಹಿತ ಧಾರಾಕಾರ ಮಳೆ ಆಗಲಿದೆ ಎಂಬ ಮುನ್ಸೂಚನೆ ನೀಡಲಾಗಿದೆ.

ಉಳಿದಂತೆ ರಾಜ್ಯದ ಹಾವೇರಿ, ಗದಗ, ಧಾರವಾಡ, ಬಾಲಗಕೋಟೆ, ದಾವಣಗೆರೆ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು, ಉತ್ತರ ಕನ್ನಡ ಭಾಗಗಳಲ್ಲಿ ಹಗುರ ಮಳೆ ಆಗಬಹುದು. ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಮಳೆ ವಿರಾಮ ನೀಡಿದೆ. ಭಾರೀ ಮಳೆ ನಿರೀಕ್ಷೆ ಈ ಭಾಗಕ್ಕೆ ಸದ್ಯಕ್ಕೆ ಇಲ್ಲ. ಬದಲಾಗಿ ಒಳನಾಡು ಜಿಲ್ಲೆಗಳಲ್ಲಿ ಮಳೆ ಸಕ್ರಿಯವಾಗಿದೆ.
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಹಾವೇರಿ, ಧಾರವಾಡ, ಬೆಳಗಾವಿ, ಗದಗ, ಕಲಬುರಗಿ, ಬೀದರ್ ಗಳಲ್ಲಿ ಮಳೆಯ ವಾತಾವರಣ ಕಂಡು ಬಂದಿದೆ. ಬಿಸಿಲು ಅಪರೂಪ ಎಂಬಂತಾಗಿದ್ದು, ಇಂದಿನಿಂದ ಹಲವೆಡೆ ವ್ಯಾಪಕ ಮಳೆ ಆಗಲಿದೆ. ಒಡಿಶಾ, ಆಂಧ್ರ ಪ್ರದೇಶದ ಕರಾವಳಿ ಭಾಗಗಳ ಸಮೀಪ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪ್ರಸರಣ ಇದೆ. ಅದರ ತೀವ್ರತೆಯ ಪರಿಣಾಮವಾಗಿ ಕರ್ನಾಟಕದ ಹಲವೆಡೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ವಾತಾವರಣ ಹೇಗಿರುತ್ತೆ?
ರಾಜಧಾನಿ ಬೆಂಗಳೂರಿನಲ್ಲಿ ಒಣಹವೆಯ ವಾತಾವರಣ ಕಂಡು ಬಂದಿದೆ. ಕಳೆದ ವಾರಾಂತ್ಯದವರೆಗೆ ಆಗಾಗ ಉತ್ತಮ ಮಳೆ ಕಂಡು ಬಂದಿತ್ತು. ಕಳೆದ ಶನಿವಾರದ ನಂತರ ಎಲ್ಲಿಯೂ ಮಳೆ ಆದ ಬಗ್ಗೆ ವರದಿ ಆಗಿಲ್ಲ. ನಗರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟುವ ನಿರೀಕ್ಷೆ ಇದೆ. ಕನಿಷ್ಠ ತಾಪಮಾನ 20-21ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ಮಾಹಿತಿ ನೀಡಿದೆ.












Click it and Unblock the Notifications