Karnataka Rains: ಕೆಲವೇ ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Karnataka Rains: ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ದೊಡ್ಡ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಹಾಗರೆಯೇ ಇಂದು (ಆಗಸ್ಟ್ 24) ಇನ್ನೂ ಕೆಲವೇ ಕ್ಷಣಗಳಲ್ಲಿ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆ ಇದೆ. ಹಾಗಾದರೆ ಎಲ್ಲೆಲ್ಲಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಮಳೆರಾಯ ಆರ್ಭಟಿಸುತ್ತಿದ್ದಾನೆ. ಹಾಗೆಯೇ ಇನ್ನೂ ಕೆಲವೇ ಗಂಟೆಗಳಲ್ಲಿ ನಗರದ ಹಲವೆಡೆ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.

ಈಗಾಗಲೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಬೆಳಗಾವಿ ಸೇರಿದಂತೆ ಹಲವೆಡೆ ಮಳೆರಾಯ ದೊಡ್ಡ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಅಲ್ಲದೆ ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೀದರ್, ಕೋಲಾರ, ವಿಜಯನಗರ, ಧಾರವಾಡ, ಬೆಂಗಳೂರು ಸೇರಿ ಹಲವೆಡೆ ಸಾಧಾರಣ ಮಳೆಯಾಗಿದೆ.
ಹಾಗೆಯೇ ಇಂದು (ಆಗಸ್ಟ್ 24) ಇನ್ನೂ ಕೆಲವೇ ಗಂಟೆಗಳಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುವ ಸಾಧ್ಯತೆಯಿದ್ದು, ಮತ್ತೊಂದೆಡೆ ಇನ್ನುಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.
ಈಗಾಗಲೇ ಹಲವೆಡೆ ಭಾರೀ ಮಳೆಯಿಂದ ಬೆಳೆಗಳೆಲ್ಲ ನೀರುಪಾಲಾಗಿ ಅನ್ನದಾತರು ಕಂಗಾಲಾಗಿದ್ದರೆ, ಇನ್ನೂ ಕೆಲವೆಡೆ ಇದೀಗ ಬಿಸಿಲಿನ ವಾತಾವರಣ ಮುಂದುವರೆದಿದ್ದು ಬೆಳೆಗಳೆಲ್ಲ ಒಳಗಿಹೋಗುವ ಹಂತವನ್ನು ತಲುಪಿವೆ.
ಅನ್ನದಾತ ಕಂಗಾಲು: ಭಾರೀ ಮಳೆ ಹಿನ್ನೆಲೆ ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಅತೀವೃಷ್ಟಿಯಾಗಿ ರೈತರು ಬೆಳೆದ ಬೆಳೆಗಳಿಗೆ ರೋಗ ತಗುಲಿ ಸರ್ವನಾಶವಾದ ಘಟನೆಗಳು ನಡೆದಿವೆ. ಹಾಗೆಯೇ ಅಡಿಗೆ ಮನೆಯ ಕೆಂಪು ರಾಣಿ ಅಂತೆ ಪ್ರಖ್ಯಾತಿ ಪಡೆದಿರುವ ಟೊಮೆಟೋಗೆ ಹೂಜಿ ರೋಗ ತಗುಲಿದ್ದು, ಗುಣಮಟ್ಟ ಕುಸಿತಗೊಂಡು ರೈತರು ಕಂಗಲಾದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಅತೀವೃಷ್ಟಿಯಿಂದಾಗಿ ಟೊಮೆಟೊ ಫಸಲಿಗೆ ಹೂಜಿ ರೋಗ ಬರುತ್ತಿದ್ದು, ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಉತ್ತಮ ದರ ಇದ್ದರೂ ಎರಡನೇ ದರ್ಜೆ ಟೊಮೆಟೊ ಕೊಳ್ಳಲು ಯಾರೂ ಬಾರದ ಹಿನ್ನೆಲೆ ರೈತರು ಟೊಮೆಟೊವನ್ನು ಬಿಸಾಡಿ ಹೋಗುತ್ತಿದ್ದಾರೆ.
ಕೆಜಿಗೆ 10 ರೂಪಾಯಿ ಕುಸಿದ ಟೊಮೆಟೊ ಬೆಲೆ: ಗುಂಡ್ಲುಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಕೆ.ಜಿ.ಟೊಮೆಟೊಗೆ 10 ರೂಪಾಯಿ ಇದ್ದು, ಇದು ಕೂಡ ಉತ್ತಮ ಬೆಲೆಯಾಗಿದೆ. ಆದರೆ, ಗುಣಮಟ್ಟದ ಟೊಮೆಟೊವನ್ನು ಮಾತ್ರ ತೆಗೆದುಕೊಳ್ಳುವುದರಿಂದ ಎರಡನೇ ದರ್ಜೆ ಟೊಮೆಟೊವನ್ನು ಬಿಸಾಡಿ ಹೋಗುತ್ತಿದ್ದಾರೆ.
ವಹಿವಾಟು ಕೂಡ ಕಡಿಮೆ: ವಯನಾಡು ದುರಂತದ ಬಳಿಕ ಕೇರಳದಿಂದ ಬರುವ ಖರೀದಿದಾರರ ಸಂಖ್ಯೆಯೂ ಕಡಿಮೆಯಾಗಿದ್ದು, ಟೊಮೆಟೊಗೆ ಬರ ಸಿಡಿಲು ಬಂದಂತಾಗಿದೆ. ಇನಗನು ಎಪಿಎಂಸಿಗೆ ತಂದು ಯಾರೂ ಕೊಳ್ಳುವವರಿಲ್ಲದೇ ಟೊಮೆಟೊವನ್ನು ಬೆಳೆಗಾರರು ಎಪಿಎಂಸಿ ಆವರಣ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಸುರಿದು ಹೋಗುತ್ತಿದ್ದಾರೆ.












Click it and Unblock the Notifications