Karnaraka Rains: ಕೆಲವೇ ಕ್ಷಣಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Karnaraka Rains: ಮುಂದಿನ ಮೂರು ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಡಗು, ಹಾಸನ, ದಾವಣಗೆರೆ, ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬರೆದಿದ್ದಾನೆ. ಹಾಗೆಯೇ ಮುಂದಿನ ಮೂರು ಗಂಟೆಗಳ ಕಾಲ ಅಂದರೆ ಇನ್ನು ಕೆಲವೇ ಕ್ಷಣಗಳಲ್ಲಿ ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕಾರವಾರ ಹಾಗೂ ಬೀದರ್, ಬೆಳಗಾವಿ ಭಾಗಗಳಲ್ಲಿ ವ್ಯಾಪಕವಾಗಿ ಗುಡುಗು ಸಹಿತ ಭಾರೀ ಮಳೆಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಾಗೆಯೇ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಕನ್ನಡ , ಚಿಕ್ಕಮಗಳೂರು , ಚಾಮರಾಜನಗರ , ಬೆಳಗಾವಿ , ಹಾಸನ , ಕೊಡಗು, ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಇಂದು ಬೆಳಗ್ಗೆ 8ರವರೆಗೆ ಜಿಲ್ಲಾವಾರು ಗರಿಷ್ಠ ಮಳೆ ವಿವರ
* ಹಾಸನ (ಹೊಂಗಡಹಳ್ಳ): 133 ಮಿಲಿ ಮೀಟರ್
* ದಕ್ಷಿಣ ಕನ್ನಡ: 131 ಮಿಲಿ ಮೀಟರ್
* ಉಡುಪಿ: 90.5 ಮಿಲಿ ಮೀಟರ್
* ಕೊಡಗು: 77 ಮಿಲಿ ಮೀಟರ್
* ಚಿಕ್ಕಮಗಳೂರು: 58 ಮಿಲಿ ಮೀಟರ್
* ಶಿವಮೊಗ್ಗ: 58 ಮಿಲಿ ಮೀಟರ್
* ಕಲಬುರಗಿ: 53 ಮಿಲಿ ಮೀಟರ್
* ಯುಕೆ: 52 ಮಿಲಿ ಮೀಟರ್
* ತುಮಕೂರು: 48 ಮಿಲಿ ಮೀಟರ್
* ಬೆಳಗಾವಿ: 47 ಮಿಲಿ ಮೀಟರ್
* ಬೀದರ್: 46 ಮಿಲಿ ಮೀಟರ್
ಈಗಾಗಲೇ ಜೂನ್ ತಿಂಗಳ ಆರಂಭದಲ್ಲಿ ಸುರಿದ ಮುಂಗಾರು ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಜೀವಕಳೆ ಬಂದಂತಾಗಿದೆ. ಅಲ್ಲದೆ, ಕೆಲವೆಡೆ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿ ಹರಿದು ಅವಾಂತರಗಳೇ ಸೃಷ್ಟಿಯಾಗಿವೆ. ಮತ್ತೊಂದೆಡೆ ಭಾರೀ ಮಳೆಯಿಂದ ಬತ್ತಿಹೋಗುವ ಹಂತ ತಲುಪಿದ್ದ ಜಲಮೂಲಗಳಿಗೆ ನೀರು ಹರಿದುಬಂದಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಇನ್ನು ಜೂನ್ ಮೂರನೇ ವಾರದಲ್ಲಿ ಹಲವೆಡೆ ಮಳೆಯ ಪ್ರಮಾಣ ತಗ್ಗಿದ್ದು, ಬಿಸಿಲಿನ ವಾತಾವರಣ ಮುಂದುವರೆದಿದೆ. ಆದರೆ ಇದೀಗ ಬಂದಿರುವ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರ ಭಾರೀ ಮಳೆಯಾದರೆ, ರೈತರ ಮುಖದಲ್ಲಿ ಮತ್ತಷ್ಟು ಮಂದಹಾಸ ಹೆಚ್ಚಾದಂತಾಗಲಿದೆ. ಕೆಲವೆಡೆ ಇನ್ನೂ ಮಳೆರಾಯ ಕರುಣೆ ತೋರಿಲ್ಲ. ಮುಂದಿನ ದಿನಗಳಲ್ಲಾದರೂ ಕರುಣೆ ತೋರುತ್ತಾನ ಎಂದು ಕಾದುನೋಡಬೇಕಿದೆ.












Click it and Unblock the Notifications