Karnataka Rains: ಮುಂದಿನ 24 ಗಂಟೆಗಳ ಕಾಲ ಮಳೆ.. ಮಳೆ.. ಗ್ಯಾರಂಟಿ!
ಮಳೆ.. ಮಳೆ.. ಮಳೆ.. ಮಳೆ.... ಎಲ್ಲಿ ನೋಡಿದರೂ ಬರೀ ಮಳೆಯದ್ದೇ ಸುದ್ದಿ, ಹೀಗೆ ಮಳೆಯದ್ದೇ ಸದ್ದು. ಮಳೆ ಸುರಿಯುತ್ತಿರುವ ರೀತಿಗೆ ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಯಾಕೆ ಅಂದ್ರೆ, ಚಳಿಗಾಲ ಡಿಸೆಂಬರ್ ತಿಂಗಳಲ್ಲಿ ಕೂಡ ಈ ರೀತಿಯಾಗಿ ಭಾರಿ ಭರ್ಜರಿ ಮಳೆ ಬರ್ತಾ ಇರೋದು ರೈತರು ಬೆಳೆದ ಬೆಳೆಗೆ ಹಾಗೂ ನಗರ ಪ್ರದೇಶದ ಜನರ ಆರೋಗ್ಯದ ಮೇಲೆ ಭಾರಿ ದೊಡ್ಡ ಪರಿಣಾಮ ಬೀರುತ್ತಿದೆ.
ಪರಿಸ್ಥಿತಿ ಹೀಗೆ ಸೂಕ್ಷ್ಮವಾಗಿರುವ ಸಮಯದಲ್ಲೇ, ಮುಂದಿನ 24 ಗಂಟೆಗಳ ಕಾಲ ಭಾರಿ ಭರ್ಜರಿ ಮಳೆ ಸುರಿಯುವುದು ಗ್ಯಾರಂಟಿ ಆಗಿದೆ. ಇಂದು ಸುರಿಯುವ ಮಳೆಯು ಭಾರಿ ಘೋರವಾಗಿ ಇರಲಿದ್ದು, ಬೆಳಗ್ಗೆಯಿಂದ ರಾತ್ರಿ ತನಕ ಒಂದೇ ಸಮನೇ ಧೋ ಅಂತಾ ಮಳೆ ಸುರಿಯುವ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ, ಈಗ ಕರ್ನಾಟಕ ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ? ಬನ್ನಿ ತಿಳಿಯೋಣ.

ಬೆಂಗಳೂರು ಸೇರಿದಂತೆ ಮುಂದಿನ 24 ಗಂಟೆ...
ವಾತಾವರಣ ಹಾಳಾಗಿ ಹೋಗಿದೆ... ಮಳೆ ಬರಬೇಕಾದ ಕಾಲದಲ್ಲಿ ಬಿಸಿಲು ಬೀಳುತ್ತಿದೆ, ಹಾಗೇ ಚಳಿ ಇರಬೇಕಾದ ಸಮಯದಲ್ಲಿ ಮಳೆ ಬರುತ್ತೆ, ಇನ್ನು ಬೇಸಿಗೆಯ ಪಾಡು ನಿಮಗೇ ಗೊತ್ತಿದೆ ಬಿಡಿ. ಹೀಗೆ ವಾತಾವರಣದಲ್ಲಿ ಭಾರಿ ದೊಡ್ಡ ಬದಲಾವಣೆ ಆಗಲು ಮನುಷ್ಯರ ದುರಾಸೆಯೇ ಕಾರಣ ಎಂಬ ಆರೋಪ ಇದೆ. ಅದ್ರಲ್ಲೂ 2024ರ ಮಳೆಗಾಲ ಆ ದೇವರಿಗೇ ಪ್ರೀತಿ ಅಂತಾ ಕಾಣುತ್ತೆ.
ಯಾಕಂದ್ರೆ 2023ರ ವರ್ಷದಲ್ಲಿ ಕೈಕೊಟ್ಟು ಓಡಿ ಹೋಗಿದ್ದ ಮಳೆ ಮೋಡಗಳು ಇದೀಗ 2024 ರಲ್ಲಿ ಬಡ್ಡಿ ಸಮೇತ ವಾಪಸ್ ಕೊಡ್ತಿವೆ. ಇದರ ಪರಿಣಾಮ ಮತ್ತೆ ಮಳೆ ಬರಲು ಆರಂಭಿಸಿದ್ದು, ಇಂದು ಬೆಂಗಳೂರು ಸೇರಿ, ಮುಂದಿನ 24 ಗಂಟೆಗಳ ಕಾಲ ಭಾರಿ ಭರ್ಜರಿ ಮಳೆ ಗ್ಯಾರಂಟಿ ಆಗಿದೆ! ಈ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.
ಮಳೆ.. ಮಳೆ.. ಭಾರಿ ಮಳೆ..!
ಡಿಸೆಂಬರ್ 12 ಅಂದ್ರೆ ಇಂದಿನಿಂದ ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆ ಅಬ್ಬರಿಸುವ ಎಚ್ಚರಿಕೆ ನೀಡಲಾಗಿದೆ. ಹೊಸ ಚಂಡಮಾರುತದ ಆರ್ಭಟ ಶುರುವಾಗಿದ್ದು, ಬಂಗಾಳ ಕೊಲ್ಲಿ ಪ್ರದೇಶ ಅಲ್ಲಾಡಿ ಹೋಗಿದೆ. ಹೀಗಾಗಿ ಈಗಾಗಲೇ ತಮಿಳುನಾಡು ಸೇರಿದಂತೆ ಕೇರಳ ಹಾಗೂ ಶ್ರೀಲಂಕಾ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರು & ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಸೇರಿ ದಕ್ಷಿಣ ಕನ್ನಡ, ಉಡುಪಿ & ಉತ್ತರ ಕನ್ನಡ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸುವ ಮುನ್ನೆಚ್ಚರಿಕೆ ನೀಡಲಾಗಿದೆ.
ಇದರ ಜೊತೆ ಹಾಸನ, ಕೊಡಗು, ರಾಮನಗರ, ತುಮಕೂರು ಜಿಲ್ಲೆಗೂ ಮಳೆ ಅಬ್ಬರ ಜೋರಾಗಿ ಇರಲಿದೆ ಎಂದು ವಾರ್ನಿಂಗ್ ಕೊಡಲಾಗಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೂ ಮಳೆ ಮೋಡಗಳು ಅಪ್ಪಳಿಸಲಿವೆ ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಹಿಡಿದು ಸಂಜೆ & ರಾತ್ರಿ ಕೂಡ ಮಳೆ ಅಬ್ಬರಿಸಿ ಬೊಬ್ಬಿರಿಯಲಿದೆ.












Click it and Unblock the Notifications