ತ್ವರಿತ ಅಲರ್ಟ್ ಗಳಿಗಾಗಿ
For Daily Alerts
LIVE

Karnataka Rains and Weather Live: ಕರ್ನಾಟಕದ ಹವಾಮಾನ, ಮುಂಗಾರು ಮಳೆ; ಲೈವ್ ಅಪ್ ಡೇಟ್ಸ್
ಕರ್ನಾಟಕಕ್ಕೆ ಮುಂಗಾರು ಆಗಮಿಸಿದೆ. ವಿವಿಧ ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ರಾಜ್ಯದಲ್ಲಿನ ಕೃಷಿ ಚಟುವಟಿಕೆಗಳಿಗೆ ಮುಂಗಾರು ಹಂಗಾಮಿನಲ್ಲಿ ಸುರಿಯುವ ಮಳೆಯೇ ಆಧಾರವಾಗಿದೆ.
ಕರ್ನಾಟಕದ ಕರಾವಳಿ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆ ಅಧಿಕವಾಗಿ ಸುರಿಯುತ್ತದೆ. ಕೊಡಗು, ಮೈಸೂರು ಭಾಗದಲ್ಲಿ ಸುರಿಯುವ ಮಳೆಯೇ 'ಕಾವೇರಿ' ನದಿಗೆ ಆಸರೆ.
ಮಲೆನಾಡು ಭಾಗದಲ್ಲಿ ಅಧಿಕ ಮಳೆ ಸುರಿದರೆ ಲಿಂಗನಮಕ್ಕಿ ಜಲಾಶಯ ಭರ್ತಿ ಆಗುತ್ತದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾದರೆ ಕುಡಿಯುವ ನೀರು, ಕೃಷಿಗೆ ಪೂರಕವಾಗುತ್ತದೆ.
ಕೆಆರ್‌ಎಸ್, ತುಂಗಭದ್ರಾ, ಲಿಂಗನಮಕ್ಕಿ, ತುಂಗಭದ್ರಾ ಸೇರಿದಂತೆ ರಾಜ್ಯದ ವಿವಿಧ ಜಲಾಶಯಗಳು ಭರ್ತಿಯಾದರೆ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ಮಳೆಯ ಪ್ರಮಾಣ ಸೇರಿದಂತೆ ಮಳೆಯ ಸಂಕ್ಷಿಪ್ತ ಮಾಹಿತಿಗಳು ಈ ಪುಟದಲ್ಲಿ ನಮಗೆ ಸಿಗಲಿದೆ.
Newest First Oldest First
ದಕ್ಷಿಣ ಒಳನಾಡನಲ್ಲಿ ಮುಂಗಾರು ದುರ್ಬಲವಾಗಿದೆ. ಕದ್ರ, ಸುಬ್ರಹ್ಮಣ್ಯ, ಕೊಲ್ಲೂರು, ಉಪ್ಪಿನಂಗಡಿ, ಕಾರ್ಕಳದಲ್ಲಿ ಹೆಚ್ಚು ಮಳೆಯಾಗಿದೆ.ಸುಳ್ಯ, ಮಾಣಿ, ಧರ್ಮಸ್ಥಳ, ಭಾಗಮಂಡಲ, ಕಮ್ಮರಡಿ, ತಿಪಟೂರು, ಪಣಂಬೂರು, ಗೋಕರ್ಣ, ಮಡಿಕೇರಿ, ವಿರಾಜಪೇಟೆ, ಶೃಂಗೇರಿ, ಕುಣಿಗಲ್, ಮುಲ್ಕಿ, ಶಿರಾಲಿ, ತ್ಯಾಗರ್ತಿ, ತಾಳಗುಪ್ಪ, ಸಿದ್ದಾಪುರ, ಹಾರಂಗಿ, ಹೊಸನಗರ, ಕೊಟ್ಟಿಗೆಹಾರ, ಎಚ್‌ಡಿ ಕೋಟೆ, ಚನ್ನಗಿರಿ,ಹೊಳಲ್ಕೆರೆಯಲ್ಲಿ ಸಾಧಾರಣ ಮಳೆಯಾಗಿದೆ.