Karnataka weather: ಹೆಚ್ಚಾದ ತಾಪಮಾನ, ಅ.29ರಿಂದ ಈ ಜಿಲ್ಲೆಗಳಿಗೆ ಮಳೆ, ವರದಿ
ಬೆಂಗಳೂರು, ಅಕ್ಟೋಬರ್ 24: ಕರ್ನಾಟಕದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಅಧಿಕ ತಾಪಮಾನದ ವಾತಾವರಣ ಸೃಷ್ಟಿಯಾಗಿದೆ. ಜುಲೈ 29ರವರೆಗೆ ಇದೇ ವಾತಾವರಣ ಮುಂದುವರಿಯಲಿದ್ದು, ನಂತರ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಹಿಂಗಾರು ಮಳೆ ಸಕ್ರಿಯವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳು ಸೃಷ್ಟಿಯಾಗಿವೆ. ಅವುಗಳು ಇಂದಿನಿಂದ ಮತ್ತಷ್ಟು ತೀವ್ರಗೊಳ್ಳಲಿವೆ. ಈ ಸಂಬಂಧ ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಜಿಲ್ಲೆಗಳಲ್ಲಿ ಕೆಲವೆಡೆ ವ್ಯಾಪಕ ಮಳೆ ಬರುವ ಸಾಧ್ಯತೆಗಳು ಇವೆ.

ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬಾಲಗಕೋಟೆ, ವಿಜಯಪುರ, ಹಾವೇರಿ, ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ, ತುಮಕೂರು, ಬೆಂಗಳೂರು ನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗು ನಿರೀಕ್ಷೆ ಇದೆ.
ಈಗಾಗಲೇ ಒಳನಾಡಿ ಜಿಲ್ಲೆಗಳಲ್ಲಿ ಇಡಿ ದಿನ ತಾಪಮಾನ ಏರಿಕೆ ಆಗಿದ್ದು, ಬೆಳಗ್ಗೆ ಇಬ್ಬನಿ ಬೀಳುತ್ತಿದೆ. ಸದ್ಯ ಶಿರಾಲಿ ಮತ್ತು ಕಾರವಾರದಲ್ಲಿ ರಾಜ್ಯದ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಕಲಬುರಗಿ, ಚಿಕ್ಕನಹಳ್ಳಿಯಲ್ಲಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬೆಂಗಳೂರಿನಲ್ಲಿ ತಾಪಮಾನ ಏರಿಕೆ
ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸದ್ಯ ಬೆಂಗಳೂರು ನಗರದಲ್ಲಿ ನೀಲಿ ಸ್ವಚ್ಚ ಆಕಾಶದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿ ಮೋಡ, ತಂಪು ವಾತಾವರಣ ಇಲ್ಲ. ಬೆಳಗ್ಗೆ ಮಾತ್ರ ಆಗಾಗ ತಣ್ಣನೆಯ ಗಾಳಿ ಬೀಸುವಿಕೆ ಇದೆ. ಉಳಿದಂತೆ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಹ್ಯಾಮೂನ್ (Hamoon Cyclone) ಮತ್ತು ಅರಬ್ಬಿ ಸಮುದ್ರದಲ್ಲಿನ ತೇಜ್ (Tej Cyclone) ಚಂಡಮಾರುತವು ಇಂದಿನಿಂದ ತೀವ್ರಗೊಳ್ಳಲಿದೆ. ಉಳಿದಂತೆ ಸದ್ಯಕ್ಕೆ ಇವುಗಳ ಪ್ರಭಾವ ಕರ್ನಾಟಕದ ಮೇಲೆ ಇಲ್ಲ ಎಂದು ಐಎಂಡಿ ಸ್ಪಷ್ಟಪಡಿಸಿದೆ.












Click it and Unblock the Notifications