Rain Alert: ಮಳೆ.. ಮಳೆ.. ಕರ್ನಾಟಕದಲ್ಲಿ ಭರ್ಜರಿ ಮಳೆ ಗ್ಯಾರಂಟಿ!

2023 ಕರ್ನಾಟಕದ ಪಾಲಿಗೆ ಅತ್ಯಂತ ದುರದೃಷ್ಟಕರ ವರ್ಷ. ಮುಂಗಾರು ಮಳೆ ಸರಿಯಾಗಿ ಬೀಳದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಮಳೆಯನ್ನೇ ಆಶ್ರಯಿಸಿ ಕೃಷಿ ಕೈಗೊಳ್ಳುವ ರೈತರಿಗೆ ಆತಂಕ ಎದುರಾಗಿತ್ತು. ಕರ್ನಾಟಕ ಸೇರಿ ಭಾಗಶಃ ಇಡೀ ದೇಶ ಸಾಕಷ್ಟು ಮಳೆ ಕೊರತೆ ಎದುರಿಸಿತ್ತು. ಕೆಲವು ರಾಜ್ಯಗಳಲ್ಲಿ ವಿಪರೀತ ಮಳೆ ಬಂದಿದ್ದರೂ, ಹಲವು ರಾಜ್ಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೆ ಮಳೆಯ ವಿಚಾರವಾಗಿ ಇದೀಗ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ!

ಕಳೆದ ವರ್ಷ ಅಂದ್ರೆ 2023ರಲ್ಲಿ ಇನ್ನೇನು ಮುಂಗಾರು ಮಳೆ ಆರಂಭವಾಗುವ ಸಮಯಕ್ಕೆ, ಭೀಕರ ಚಂಡಮಾರುತ ಅಪ್ಪಳಿಸಿದ ಪರಿಣಾಮ ಎಲ್ಲವೂ ಅಲ್ಲೋಲ ಕಲ್ಲೋಲವಾಗಿತ್ತು. ಈ ಕಾರಣಕ್ಕೆ ಜನರು ಕೂಡ ಮಳೆ ಇಲ್ಲದೆ ಪರದಾಡಿದ್ದರು. ಕರ್ನಾಟಕದ ಯಾವುದೇ ಡ್ಯಾಂಗೂ ಸರಿಯಾಗಿ ನೀರು ಬರಲೇ ಇಲ್ಲ. ಹೀಗಾಗಿ ಇಡೀ ಕರ್ನಾಟಕ ಈಗ ಭಾರಿ ನೀರಿನ ಕೊರತೆಯ ಎದುರಿಸುತ್ತಿದೆ. ಜನರು ಕೂಡ ಹನಿ ಹನಿ ನೀರಿಗೂ ಪರಿತಪಿಸುತ್ತಿದ್ದಾರೆ. ಆದರೆ 2024 ರಲ್ಲಿ ಮಾತ್ರ ಕರ್ನಾಟಕಕ್ಕೆ ಭರ್ಜರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ! ಹವಾಮಾನ ಇಲಾಖೆ ಈ ಬಗ್ಗೆ ಭರ್ಜರಿ ಸುದ್ದಿ ನೀಡಿದೆ. ಹಾಗಾದ್ರೆ ಕರ್ನಾಟಕದಲ್ಲಿ ಯಾವಗಿನಿಂದ ಮಳೆ ಬರುತ್ತೆ?

Karnataka Rain State May Witness For Good Rain In This Year

ಭರ್ಜರಿ ಮಳೆ ಬೀಳಲು ಕಾರಣವೇನು?

ಎಲ್‌ನಿನೋ ಜಾಗತಿಕ ವಾತಾವರಣದಲ್ಲಿ ಭಾರಿ ಪರಿಣಾಮ ಬೀರುತ್ತದೆ. ಅದರಲ್ಲೂ ನಮ್ಮ ದೇಶದಲ್ಲಿ ಕೂಡ ವಾತಾವರಣ & ಮಳೆ ನಿರ್ಧಾರ ಆಗುವುದೇ ಎಲ್‌ನಿನೋ ಪರಿಣಾಮದಿಂದ ಎನ್ನಬಹುದು. ಈ ಹಿನ್ನೆಲೆಯಲ್ಲಿ ಇದೀಗ ಭಾರತ ಅದರಲ್ಲೂ ಪ್ರಮುಖವಾಗಿ ಕರ್ನಾಟಕದ ರೈತರಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಅದು ಏನೆಂದರೆ ಕರ್ನಾಟಕದಲ್ಲಿ ಈ ಬಾರಿ ಭರ್ಜರಿಯಾಗಿ ಮಳೆ ಸುರಿಯಲಿದೆ ಎನ್ನಲಾಗಿದೆ. ನೈರುತ್ಯ ಮಾನ್ಸೂನ್ ಸಮಯದಲ್ಲಿ ಈ ಬಾರಿ ಭರ್ಜರಿ, ಗುಡುಗು & ಸಿಡಿಲು ಸಹಿತ ಮಳೆ ಬೀಳುವ ನಿರೀಕ್ಷೆ ಇದೆ. ಇದರ ಜೊತೆಗೆ ಇನ್ನೇನು ಕೆಲವೇ ದಿನದಲ್ಲಿ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

ಭಾರಿ ಮಳೆಗೆ ತತ್ತರಿಸಿದ ಉತ್ತರ!

ಉತ್ತರ ಭಾರತದ ಬಹುತೇಕ ರಾಜ್ಯದಲ್ಲಿ ಗುಡುಗು & ಸಿಡಿಲು ಸಹಿತ ಮಳೆ ಬಿದ್ದಿದೆ. ಈ ಕಾರಣಕ್ಕೆ ಅಲ್ಲಿನ ಜನ ಪೂರ್ತಿ ನಲುಗಿ ಹೋಗಿದ್ದಾರೆ. ಅದ್ರಲ್ಲೂ ಪರೀಕ್ಷೆ ಆರಂಭ ಆಗಿರುವ ಸಮಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ ಉತ್ತರ ಭಾರತದಲ್ಲಿ ಬಹುತೇಕ ರಾಜ್ಯಗಳ ಶಾಲಾ & ಕಾಲೇಜು ಬಂದ್ ಮಾಡಿ ರಜೆ ಘೋಷಣೆ ಮಾಡಲಾಗಿದ್ದು ಪರೀಕ್ಷೆ ಮುಂದೂಡಿಕೆ ಆಗುತ್ತಿವೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಿದ್ದಾಗ ನಮ್ಮಲ್ಲಿ ಅಂದ್ರೆ ಕರ್ನಾಟಕದಲ್ಲಿ ಕೂಡ ಭರ್ಜರಿ ಮಳೆ ಮುನ್ಸೂಚನೆ ಸಿಕ್ಕಿದೆ.

ಹವಾಮಾನ ಇಲಾಖೆ ತಜ್ಞರ ಪ್ರಕಾರ ಕರ್ನಾಟಕದಲ್ಲಿ ವರುಣ ದೇವ ಕರುಣೆಯ ತೋರಿಸಲಿದ್ದು, ಮುಂದಿನ ಕೆಲ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಮುಖ್ಯವಾಗಿ ಗಮನಿಸಬೇಕಾದ ಅಂಶ ಏನೆಂದರೆ ಮಾರ್ಚ್‍ ಮೊದಲ ವಾರದಲ್ಲಿ ದಾವಣಗೆರೆ, ಬೆಂಗಳೂರು, ಮೈಸೂರು, ಕೊಡಗು & ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಬರಲಿದೆ ಅಂತಾ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿತ್ತು. ಹೀಗಾಗಿ ಇನ್ನೇನು ಕೆಲವೇ ದಿನದಲ್ಲಿ ಸಿಹಿಸುದ್ದಿ ಸಿಗುತ್ತದೆ ಎನ್ನಲಾಗುತ್ತಿದೆ.

Karnataka Rain State May Witness For Good Rain In This Year

ಡ್ಯಾಂಗಳಲ್ಲಿ ನೀರು ಖಾಲಿಯಾಗುತ್ತಿದೆ

ಕರ್ನಾಟಕದ ಬಹುತೇಕ ಜಲಾಶಯಗಳು ಈಗ ಖಾಲಿ ಆಗಿದ್ದು, ಜನರು ಕೂಡ ನೀರಿಗೆ ಈಗ ಪರದಾಡುತ್ತಿದ್ದಾರೆ. ಹೀಗಿದ್ದಾಗ ಒಂದೇ ಒಂದು ಭರ್ಜರಿ ಮಳೆ ಸುರಿದರೆ ಜನರು ನಿಟ್ಟುಸಿರು ಬಿಡಬಹುದು. ಇಲ್ಲವಾದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ. ಮತ್ತೊಂದು ಕಡೆ ಮುಂದಿನ ಕೆಲವೇ ತಿಂಗಳಲ್ಲಿ ಬರುವ ಮುಂಗಾರು ಮಳೆ ಉತ್ತಮವಾಗಿ ಬೀಳುತ್ತೆ ಅಂತಾ ಹವಾಮಾನ ಇಲಾಖೆ ತಿಳಿಸಿರುವುದು ಖುಷಿ ಕೊಟ್ಟಿದೆ.

ಮುಂಗಾರು ಮಳೆಯೇ ನಮಗೆ ಆಧಾರ..

ಕರ್ನಾಟಕದ ಜನ ಮಾನ್ಸೂನ್ ಅಂದರೆ, ಮುಂಗಾರು ಮಳೆಯನ್ನೆ ಅವಲಂಬಿಸಿ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಉತ್ತರ ಕರ್ನಾಟಕವೇ ಇರಲಿ & ದಕ್ಷಿಣ ಕರ್ನಾಟಕವೇ ಇರಲಿ, ಈ ನಮ್ಮ ಕರ್ನಾಟಕಕ್ಕೆ ಮುಂಗಾರು ಮಳೆಯೇ ಆಧಾರ. ಅಕಸ್ಮಾತ್ ಮುಂಗಾರು ಮಳೆ ಕೈಕೊಟ್ಟು ಹೋದರೆ, ಪರಿಸ್ಥಿತಿ ಭೀಕರವಾಗುತ್ತದೆ. ಜನರು ಕೂಡ ಹನಿ ಹನಿ ನೀರಿಗೂ ಒದ್ದಾಡುತ್ತಾರೆ ಎನ್ನಬಹುದು. ಈಗ ಕೂಡ ಅಷ್ಟೇ ಅಂತಹದ್ದೇ ಪರಿಸ್ಥಿತಿ ಬಂದಿದೆ. ಯಾಕಂದ್ರೆ 2023 ರಲ್ಲಿ ಮಳೆರಾಯ ಅಂದ್ರೆ ವರುಣ ದೇವ ಮುಂಗಾರು ಮಳೆಯನ್ನೇ ಸರಿಯಾಗಿ ಸುರಿಸಲಿಲ್ಲ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಭೀಕರ ಬರ ಎದುರಾಗಿರುವ ಸಮಯಕ್ಕೇ ಮಳೆಯ ಮುನ್ಸೂಚನೆ ಸಿಗುತ್ತಿದೆ.

ಮಳೆಗಾಗಿ ಜನರಿಂದ ವಿಶೇಷ ಪೂಜೆ

ಮಳೆ ಬಾರದೆ ಭೂಮಿ ಬಾಯಿ ಬಿಟ್ಟಿದೆ ದೇಶದ ಬಹುತೇಕ ರಾಜ್ಯಗಳಲ್ಲಿ ಈ ಬಾರಿ ಮಳೆ ಕೊರತೆ ದೊಡ್ಡ ಸಮಸ್ಯೆ ತಂದೊಡ್ಡಿದೆ. ಹೀಗಿದ್ದಾಗ ದಿಢೀರ್ ವರುಣ ದೇವ ಕರ್ನಾಟಕವು ಸೇರಿದಂತೆ, ಭಾರತದ ಹಲವು ರಾಜ್ಯದಲ್ಲಿ ಮಳೆ ಸುರಿಸುವ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಬೇಸಿಗೆ ಆರಂಭಕ್ಕೆ ಮೊದಲೇ ಮಳೆಯ ಮುನ್ಸೂಚನೆ ಸಿಕ್ಕಂತಾಗಿದೆ. ಆದರೆ ಆದಷ್ಟು ಬೇಗ ಮಳೆಯ ಆಗಮನ ಆಗಬೇಕು ಅನ್ನೋದೆ ಜನರ ಆಗ್ರಹ. ಹೀಗಾಗಿ ಹಲವು ಕಡೆ ವಿಶೇಷ ಪೂಜೆಯನ್ನ ಕೂಡ ಜನ ನೆರವೇರಿಸಿದ್ದಾರೆ, ಈ ಮೂಲಕ ವರುಣ ದೇವನ ಬಳಿ ಜನರು ಬೇಡಿಕೆ ಇಟ್ಟಿದ್ದಾರೆ. ಪ್ರಾರ್ಥನೆಯನ್ನೂ ಮಾಡಿದ್ದಾರೆ, ಹೀಗಾಗಿ ವರುಣ ದೇವ ಜನರ ಪ್ರಾರ್ಥನೆಗೆ ಫಲ ನೀಡ್ತಾನಾ? ಅನ್ನೋದನ್ನ ಕಾದು ನೋಡಬೇಕಿದೆ.

ಕರ್ನಾಟಕದಲ್ಲಿ ಈ ವಾರ ಮಳೆ ಗ್ಯಾರಂಟಿ?

ಹವಾಮಾನ ಇಲಾಖೆ ಈ ಹಿಂದೆಯೇ ನೀಡಿದ ಮಾಹಿತಿ ಪ್ರಕಾರ, ಕನ್ನಡಿಗರ ನೆಲದಲ್ಲಿಯೂ ಭಾರಿ ಮಳೆಯ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಅಧಿಕಾರಿಗಳು ನೀಡಿದ್ದ ಮಾಹಿತಿಯಂತೆ ಈ ವಾರದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಮಳೆ ಬೀಳುವ ನಿರೀಕ್ಷೆ ಇದೆ. ಹೀಗಾಗಿ ಕನ್ನಡಿಗರು ಕೂಡ ಉತ್ತಮವಾಗಿ ಮಳೆ ಬೀಳಲಿ ದೇವರೆ ಅಂತಾನು ಕಾಯುತ್ತಿದ್ದಾರೆ. ಅವರ ಪ್ರಶ್ನೆಗೆ ಇನ್ನೇನು ಕೆಲವೇ ದಿನದಲ್ಲಿ ಉತ್ತರ ಸಿಗಲಿದ್ದು. ಅದರಲ್ಲೂ ಒಂದು ಸರಿಯಾದ ಮಳೆ ಕರ್ನಾಟಕಕ್ಕೆ ಬಿದ್ದರೆ, ಪರಿಸ್ಥಿತಿ ಹಿಡಿತಕ್ಕೆ ಸಿಗಲಿದೆ. ಇಲ್ಲವಾದರೆ ಬರದ ನಡುವೆ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+