Rain Alert: ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ತಂಪೆರೆದ ಮಳೆ
ಒಂದು ಕಡೆ ಕಾಶ್ಮೀರದಲ್ಲಿ ಹಿಮದ ಮಳೆಯಾಗುತ್ತಿದ್ದರೆ, ಇತ್ತ ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ಬೇಸಿಗೆಯಲ್ಲೇ ಮಳೆ ಆರಂಭವಾಗಿದೆ. ಬುಧವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.
ಬುಧವಾರ ಮಧ್ಯಾಹ್ನ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಿಗ್ಗಾಲುವಿನಲ್ಲಿ ಉತ್ತಮ ಮಳೆಯಾಗಿದೆ. ಅದಾದ ಬಳಿಕ ಕಾಕೋಟು, ಪರಂಬು ಪ್ರದೇಶಗಳಲ್ಲಿ ಕೂಡ ಸಾಧಾರಣ ಮಳೆ ಸುರಿದಿದೆ.

ಕುಶಾಲನಗರ, ಪಿರಿಯಾಪಟ್ಟಣದ ನಡುವೆ ಹಲವು ಕಡೆಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. @Coorgthekashmir ಎಕ್ಸ್ ಹ್ಯಾಂಡಲ್‌ನಲ್ಲಿ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದೆ.
ಕುಶಾಲನಗರ, ಪಿರಿಯಾಪಟ್ಟಣದ ಮಧ್ಯ pic.twitter.com/2qKxfOFzmC
— Coorgthekashmirofkarnataka (@Coorgthekashmir) March 13, 2024
ಮಾರ್ಚ್ 20ರ ನಂತರ ಮಡಿಕೇರಿಯ ಹಲವು ಕಡೆಗಳಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದರೂ, ಆದರೆ ನಿರೀಕ್ಷೆಗೂ ಮುನ್ನವೇ ಹಲವು ಪ್ರದೇಶಗಳಲ್ಲಿ ಮಳೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಕಾಕೋಟು ಪರಂಬು pic.twitter.com/v0z1UXZ0Wr
— Coorgthekashmirofkarnataka (@Coorgthekashmir) March 13, 2024
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ
ಹವಾಮಾನ ಮುನ್ಸೂಚನೆಗಳ ಪ್ರಕಾರ ರಾಜ್ಯದಲ್ಲಿ ಈ ಬಾರಿ ವಾಡಿಕೆಯಂತೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮೇ ಜೂನ್ ನಡುವೆ ರಾಜ್ಯದಲ್ಲಿ ಮಳೆಗಾಲ ಶುರುವಾಗಲಿದ್ದು, ವ್ಯಾಪಕ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಎಲ್ ನಿನೋ ಪ್ರಭಾವದಿಂದಾಗಿ ಜಾಗತಿಕ ತಾಪಮಾನ ಹೆಚ್ಚಳವಾಗಿದ್ದು, ಸದ್ಯ ಎಲ್ ನಿನೋ ಕಡಿಮೆಯಾಗುತ್ತಿದ್ದು, ವಾತಾವರಣ ತಂಪಾಗಲಿದೆ. ಇನ್ನು ಎರಡು ಮೂರು ತಿಂಗಳಲ್ಲಿ ಎಲ್ ನಿನೋ ಕಡಿಮೆಯಾಗಲಿದೆ. ಎಲ್ ನಿನೋ ಪರಿಣಾಮದಿಂದಲೇ ಜಾಗತಿಕವಾಗಿ ಕಳೆದ ಬಾರಿ ಮಳೆ ಕಡಿಯಾಗಿದ್ದಲ್ಲದೆ, ಉಷ್ಣತೆ ಕೂಡ ಹೆಚ್ಚಾಗಿತ್ತು.
ಜಾಗತಿಕ ಮುನ್ಸೂಚನೆ ವ್ಯವಸ್ಥೆ (GFS) ಮಳೆ ಸಂಗ್ರಹ ಹಂಚಿಕೆ ಪಶ್ಚಿಮ ಘಟ್ಟಗಳು, ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಬಾರಿ ಮೊದಲು ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಈಗ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ. ಬೇಸಿಗೆಯಲ್ಲಿ ಮಳೆಯಾದರೆ ಕಾಫಿ ಬೆಳೆಯ ಮೇಲೆ ಪರಿಣಾಮ ಬೀರಬಹುದು ಎಂದು ಬೆಳೆಗಾರರು ಆತಂಕಗೊಂಡಿದ್ದಾರೆ.
ರಾಜ್ಯದಲ್ಲಿ ಮಳೆ ಆರಂಭ ಯಾವಾಗ?
ರಾಜ್ಯದಲ್ಲಿ ಮಳೆ ಯಾವಾಗ ಆರಂಭ ಎನ್ನುವುದನ್ನು ಈಗಲೇ ಖಚಿತವಾಗಿ ಹೇಳಲಾಗದಿದ್ದರೂ ಅವಧಿಗೂ ಮುನ್ನವೇ ಮಳೆ ಆರಂಭವಾಗುವ ಸಾಧ್ಯತೆ ಇದೆ. ಜೂನ್ ವೇಳೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 13 ರಿಂದ ಅಶ್ವಿನಿ ಮಳೆ ಆರಂಭವಾಗಲಿದೆ, ಏಪ್ರಿಲ್ 27ರಿಂದ ಭರಣಿ ಮಳೆ ಶುರುವಾಗಲಿದೆ. ಭರಣಿ ಮಳೆ ಉತ್ತಮವಾಗಿ ನಡೆಸಿದರೆ ಬಿಸಿಲಿನಿಂದ ಕಂಗೆಟ್ಟಿರುವ ಜನ ಸ್ವಲ್ಪ ನಿರಾಳರಾಗಲಿದ್ದಾರೆ.












Click it and Unblock the Notifications