Karnataka Rain: ದೀಪಾವಳಿಗೆ ಬಿಡುವು ಕೊಟ್ಟ ಮಳೆ: ಈ ದಿನದಿಂದ ಮತ್ತೆ ಮಳೆ ಸಾಧ್ಯತೆ
ರಾಜ್ಯದಲ್ಲಿ ಹಲವು ದಿನಗಳಿಂದ ವ್ಯಾಪಕವಾಗಿದ್ದ ಮಳೆ ಪ್ರಮಾಣ ಸದ್ಯ ಕಡಿಮೆಯಾಗಿದೆ. ಈ ಬಾರಿ ದೀಪಾವಳಿ ಸಂಭ್ರಮಕ್ಕೆ ಮಳೆ ಅಡ್ಡಿಯಾಗುವುದಿಲ್ಲ, ಇನ್ನೂ ನಾಲ್ಕೈದು ದಿನಗಳ ಕಾಲ ರಾಜ್ಯದಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಶನಿವಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿಯಲ್ಲಿ 12.5 ಮಿಮೀ ಮಳೆಯಾಗಿದ್ದು, ರಾಜ್ಯದಲ್ಲಿ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ.

ವಿಜಯಪುರ ಜಿಲ್ಲೆಯ ನಾಗತಿಬಸಾಪುರ, ನಾಗತಿಬಸಾಪುರ, ಹಾಸನ ಜಿಲ್ಲೆಯ ಜಂಬೂರು, ಯಲಗತವಳಿ, ಶಾಂತಿಗ್ರಾಮ, ಹಲಸುಲಿಗೆ, ಬೈಲಹಳ್ಳಿ, ಉಡುಪಿ ಜಿಲ್ಲೆಯ ಮೊಲಹಳ್ಳಿ, ತಲ್ಲೂರು, ಗುಜ್ಜಾಡಿ, ವಡ್ಡರ್ಸೆ, ಕಡೆಕರ್, ಕುಚ್ಚೂರು, ಚಿಕ್ಕಮಗಳೂರು ಜಿಲ್ಲೆಯ ಮೇಲಿನ ಹುಲುವತ್ತಿ, ತುಳುವಿನಕೊಪ್ಪ, ತ್ರಿಪುರ, ದಾಸರಹಳ್ಳಿ, ಚಿಕ್ಕಂಗಲದಲ್ಲಿ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಮತ್ತೆ ಮಳೆ ಯಾವಾಗ?
ನವೆಂಬರ್ 15ರ ನಂತರ ರಾಜ್ಯದಲ್ಲಿ ಮತ್ತೆ ಮಳೆ ಆರಂಭವಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಬರುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ವಿಜಯಪುರ, ಹಾಸನ, ಬೆಳಗಾವಿ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮೈಸೂರು, ತುಮಕೂರು ಜಿಲ್ಲೆಯಲ್ಲಿ ಚದುರಿದಂತೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ, ಕೊಡಗು, ಬೀದರ್, ಕೊಪ್ಪಳ, ರಾಯಚೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಮನಗರ, ಧಾರವಾಡ, ವಿಜಯಪುರ, ಹಾವೇರಿ, ಕೋಲಾರ, ಬಳ್ಳಾರಿ, ಗದಗ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಮುಂಗಾರು ಸಂಪೂರ್ಣವಾಗಿ ಕೈಕೊಟ್ಟ ಬಳಿಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂಗಾರು ತಂಪೆರದಿತ್ತು, ಹಲವು ಕಡೆಗಳಲ್ಲಿ ಕೆರೆ ಕಟ್ಟೆಗಳಿಗೂ ಅಲ್ಪ ಸ್ವಲ್ಪ ನೀರು ಬಂದ ಕಾರಣ ರೈತರಲ್ಲಿ ಸಮಾಧಾನ ತಂದಿತ್ತು, ಈಗ ಮಳೆ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಮತ್ತೆ ನಾಲ್ಕೈದು ದಿನಗಳ ನಂತರ ಮಳೆ ಬರುವ ಮುನ್ಸೂಚನೆ ಸಿಕ್ಕಿರುವುದು ಉತ್ತಮ ಸುದ್ದಿಯಾಗಿದೆ.












Click it and Unblock the Notifications