ಶಿಕ್ಷಕರಿಗೆ ಸಭ್ಯ ಉಡುಗೆ ತೊಡಲು ಹೇಳಿದ ಶಿಕ್ಷಣ ಇಲಾಖೆ
ಬೆಂಗಳೂರು, ಆಗಸ್ಟ್ 04 : 'ಶಾಲಾ ಶಿಕ್ಷಕರು ಸಭ್ಯ ಉಡುಗೆ ಧರಿಸಬೇಕು' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ, ಸಭ್ಯ ಉಡುಗೆ ಯಾವುದು ಎಂಬ ಕುರಿತು ಸುತ್ತೋಲೆಯಲ್ಲಿ ತಿಳಿಸಿಲ್ಲ.
ಇತ್ತೀಚೆಗಷ್ಟೇ ಪದವಿ ಕಾಲೇಜುಗಳ ಉಪನ್ಯಾಸಕಿಯರು ಸೀರೆ ಮಾತ್ರ ಉಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆ ವಿವಾದವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಕಮಿಷನರ್ ಅದನ್ನು ವಾಪಸ್ ಪಡೆದಿದ್ದರು. ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ಉಡುಗೆ ಬಗ್ಗೆ ಸುತ್ತೋಲೆ ಹೊರಡಿಸಿದೆ.

'ಶಾಲಾ ಶಿಕ್ಷಕರು ಸಭ್ಯ ಉಡುಗೆ ಧರಿಸಬೇಕು. ಆದರೆ, ಇದು ವಸ್ತ್ರ ಸಂಹಿತೆ ಆದೇಶ ಅಲ್ಲ. ಯಾವ ರೀತಿಯ ಉಡುಗೆ ತೊಡಬೇಕು ಎಂಬುದು ಅವರ ವಿವೇಚನಾ ಸ್ವಾತಂತ್ರ್ಯಕ್ಕೆ ಬಿಟ್ಟಿದ್ದು' ಎಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕ ಬಿ.ಕೆ. ಬಸವರಾಜ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications