ಬಿಜೆಪಿ ನಾಯಕರೇ ನಿಮ್ಮ ಮೊಸಳೆ ಕಣ್ಣೀರಿನ ನಾಟಕ ಸಾಕು ಎಂದ ಸಚಿವ ರಾಮಲಿಂಗಾ ರೆಡ್ಡಿ, ಬೆಲೆ ಏರಿಕೆ ಬಗ್ಗೆ ಪರೋಕ್ಷ ಸಮರ್ಥನೆ!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆಯ ಪರ್ವವನ್ನೇ ಶುರು ಮಾಡಿದೆ. ನಂದಿನಿ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾದ ಬೆನ್ನಲ್ಲೇ ಇದೀಗ ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ಬಸ್‌ಗಳ ಪ್ರಯಾಣ ದರ ಹೆಚ್ಚಳವಾಗಿದೆ. ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಹಲವು ಸಚಿವರು ಈ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದು, ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು, ಆರ್. ಅಶೋಕ್ ಅವರೇ, ನಿಮ್ಮ ಮೊಸಳೆ ಕಣ್ಣೀರಿನ ನಾಟಕ ಸಾಕು! ಕೇಂದ್ರದ ನಿಮ್ಮದೇ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಮಾತನಾಡಲು ಧೈರ್ಯವಿಲ್ಲದೆ, ಈಗ ದೀಪಾವಳಿ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Karnataka Price Hike Row Minister Ramalinga Reddy Hits Back R Ashoka Over BJP s Economic Policies

ರಾಜ್ಯ ಸರ್ಕಾರದ ಮೇಲೆ 'ಗಬ್ಬರ್ ಟ್ಯಾಕ್ಸ್' ಎಂದು ಬೊಬ್ಬೆ ಹೊಡೆಯುವ ನಿಮಗೆ, 2014ರಿಂದ ಇಲ್ಲಿಯವರೆಗೆ ಕೇಂದ್ರ ಬಿಜೆಪಿ ಸರ್ಕಾರ ಜನಸಾಮಾನ್ಯರ ಮೇಲೆ ನಡೆಸಿದ ಬೆಲೆ ಏರಿಕೆಯ ಮಹಾಸುಲಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

* ಕೆಲವು ಹಸಿ ಹಸಿ ಸತ್ಯಗಳು ಇಲ್ಲಿವೆ ಎಂದಿರುವ ಅವರು, ಅಡುಗೆ ಅನಿಲ (LPG): 2014ರಲ್ಲಿ ₹400 ಇದ್ದ ಸಿಲಿಂಡರ್ ಬೆಲೆ ಇಂದು ಸುಮಾರು ₹1,000ಕ್ಕೆ ಏರಿ, ಬಡವರ ಒಲೆ ಆರಿಸಿದೆ.

* ಇಂಧನ ಲೂಟಿ ಮತ್ತು ಹಣದುಬ್ಬರ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರದ ತೆರಿಗೆಯನ್ನು ಮನಬಂದಂತೆ ಹೆಚ್ಚಿಸಿ ಜನಸಾಮಾನ್ಯರ ಜೇಬು ಕತ್ತರಿಸಲಾಗಿದೆ.

ಇಂಧನ ಬೆಲೆ 2009 UPA ಅವಧಿಯಲ್ಲಿ ₹36.89 ಈಗ ₹98.13. ಕಳೆದ 2 ವರ್ಷಗಳ ಅವಧಿಯಲ್ಲೇ ಬರೋಬ್ಬರಿ 7 ಬಾರಿ ಹೆಚ್ಚಳವಾಗಿದ್ದು, ₹10.47 ಪ್ರತಿ ಲೀಟರ್ ಗೆ ಜಾಸ್ತಿಯಾಗಿದೆ. ಕೇಂದ್ರ ಸರ್ಕಾರ ಇಂಧನದ ಮೇಲೆ ವಿಧಿಸುವ ಈ ಪರೋಕ್ಷ ಸುಲಿಗೆಯಿಂದಲೇ ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಹಣದುಬ್ಬರ ಉಂಟಾಗಿದೆ. ಇದು ಅಸಲಿ 'ಗಬ್ಬರ್ ಟ್ಯಾಕ್ಸ್' ಅಲ್ಲವೇ? ಇದಕ್ಕೆ ನಿಮ್ಮ ಉತ್ತರವೇನು ಎಂದು ಪ್ರಶ್ನೆ ಮಾಡಿದ್ದಾರೆ.

* ನಿಜವಾದ ಗಬ್ಬರ್ ಸಿಂಗ್ ಟ್ಯಾಕ್ಸ್ (GST): ಸ್ವಾತಂತ್ರ್ಯದ ನಂತರ ಎಂದೂ ಇಲ್ಲದ ರೀತಿಯಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹೇರಿದ ಕೀರ್ತಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಬೇಳೆಕಾಳುಗಳು, ಹಾಲು, ಮೊಸರು, ಆಸ್ಪತ್ರೆ ಸೇವೆಗಳೂ ಸೇರಿದಂತೆ ದಿನನಿತ್ಯದ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿ ಮಧ್ಯಮ ವರ್ಗದವರನ್ನು ಉಸಿರುಗಟ್ಟಿಸಲಾಗಿದೆ.

ಕರ್ನಾಟಕಕ್ಕೆ ದ್ರೋಹ ಬಗೆಯುತ್ತಿರುವ ಕೇಂದ್ರದ ತೆರಿಗೆ ಅನ್ಯಾಯ

ಕೇಂದ್ರ ಸರ್ಕಾರ ಕರ್ನಾಟಕದಿಂದ ಜಿಎಸ್‌ಟಿ, ನೇರ ತೆರಿಗೆ ಮತ್ತು ಸೆಸ್ ರೂಪದಲ್ಲಿ ವಾರ್ಷಿಕ ₹4.5 ಲಕ್ಷ ಕೋಟಿಗೂ ಅಧಿಕ ಹಣವನ್ನು ಲೂಟಿ ಮಾಡುತ್ತಿದೆ! ಆದರೆ, ನಮಗೆ ವಾಪಸ್ ಸಿಗುವ ತೆರಿಗೆ ಪಾಲು ಮತ್ತು ಅನುದಾನ ಮಾತ್ರ ತೀರಾ ಅಲ್ಪ. ಇತ್ತೀಚಿನ ಕೇಂದ್ರದ ತೆರಿಗೆ ಹಂಚಿಕೆಯಲ್ಲೂ ಲಕ್ಷಾಂತರ ಕೋಟಿ ರೂ. ಸಂಗ್ರಹವಾಗುವ ನಮ್ಮ ರಾಜ್ಯಕ್ಕೆ ಸಿಕ್ಕಿದ್ದು ಕೇವಲ ₹4,504 ಕೋಟಿ ಮಾತ್ರ! ನಮ್ಮ ಹಕ್ಕಿನ ಹಣವನ್ನು ಕಸಿದುಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಕೇಂದ್ರದ ಗುಲಾಮಗಿರಿ ಮಾಡುತ್ತಿರುವ ನಿಮಗೆ ರಾಜ್ಯದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ?

* ಬಂಡವಾಳಶಾಹಿಗಳಿಗೆ ಸಾಲ ಮನ್ನಾ, ಬಡವರಿಗೆ ಗಬ್ಬರ್ ಟ್ಯಾಕ್ಸ್: ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಕುಳಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಮಣ್ಣು ಮಾಡುವ (Write-off) ಕೇಂದ್ರ ಸರ್ಕಾರ, ಬಡವರು ಹಾಗೂ ಮಧ್ಯಮ ವರ್ಗದ ದಿನಸಿ ಹಾಗೂ ಔಷಧಿಗಳ ಮೇಲೂ ಜಿಎಸ್‌ಟಿ ಹಾಕಿ ರಕ್ತ ಹಿಂಡುತ್ತಿದೆ. ಇದುವೇ ಬಿಜೆಪಿ ಸರ್ಕಾರದ ಅಸಲಿ ಬಂಡವಾಳಶಾಹಿ ಲೂಟಿ.

* ಸ್ವಿಟ್ಸ್‌ರ್ಲ್ಯಾಂಡ್ ಬ್ಯಾಂಕ್ ಕಪ್ಪು ಹಣ ಮಾಯವಾಯಿತೇ?: ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುವುದಾಗಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರ ಮಾತಿಗೆ ಈಗ 12 ವರ್ಷ ಕಳೆದಿವೆ. ಆ ಕಪ್ಪು ಹಣ ಏನಾಯಿತು? 12 ವರ್ಷವಾದರೂ ಆ ಸುಳ್ಳು ಭರವಸೆ ಈಡೇರದಿರಲು ಕಾರಣವೇನು? ದೇಶದ ಜನರಿಗೆ ಮೋಸ ಮಾಡಿದ್ದೇಕೆ?

* 2 ಕೋಟಿ ಉದ್ಯೋಗಗಳು ಎಲ್ಲಿವೆ?: ದೇಶದ ಯುವಕರಿಗೆ ವರ್ಷಕ್ಕೆ 2 ಕೋಟಿಯಂತೆ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಮೋದಿ ಸರ್ಕಾರ, ಕಳೆದ 12 ವರ್ಷಗಳಲ್ಲಿ ಕೋಟ್ಯಂತರ ಯುವಕರ ಭವಿಷ್ಯವನ್ನು ಬೀದಿಪಾಲು ಮಾಡಿದೆ. ನಿರುದ್ಯೋಗಿಗಳ ಕಣ್ಣೀರು ನಿಮಗೆ ಕಾಣುವುದಿಲ್ಲವೇ?

ಬರ ಪರಿಹಾರದಲ್ಲೂ ಮಲತಾಯಿ ಧೋರಣೆ

ರಾಜ್ಯದಲ್ಲಿ ತೀವ್ರ ಬರಗಾಲ ಬಂದು ರೈತರು ಕಂಗಾಲಾದಾಗ, ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಪರಿಹಾರವನ್ನೂ ವಿಳಂಬ ಮಾಡಿ ಸರಿಯಾಗಿ ನೀಡದೆ ಮಲತಾಯಿ ಧೋರಣೆ ತೋರಿದ ಕೇಂದ್ರ ಸರ್ಕಾರದ ಪರವಾಗಿ ಮಾತನಾಡುವ ನಿಮಗೆ ಕನ್ನಡಿಗರ ಬಗ್ಗೆ ಮಾತನಾಡಲು ಯಾವ ಹಕ್ಕಿದೆ?

ಈ ಯಾವ ವಿಚಾರಗಳ ಬಗ್ಗೆಯೂ ಮಾತನಾಡದೇ, ದೆಹಲಿಯ ನಿಮ್ಮ ಹೈಕಮಾಂಡ್ ಮುಂದೆ ಬಾಲ ಮುದುರಿಕೊಂಡು ಕೂರುವುದೇ ನಿಮ್ಮ ಸಾಧನೆಯೇ? ಕನ್ನಡಿಗರ ತೆರಿಗೆ ಹಣವನ್ನು ದೆಹಲಿಗೆ ದರೋಡೆ ಮಾಡಿಸುತ್ತಾ ರಾಜ್ಯದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಿ ಎಂದೂ ಸಚಿವ ರಾಮಲಿಂಗಾ ರೆಡ್ಡಿ ಅವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+