ಅಂಚೆ ಮೂಲಕ ಕೊವಿಡ್ 19 ಪ್ರತಿರೋಧಕ ಕಷಾಯ ಮನೆ ಮನೆಗೆ
ಬೆಂಗಳೂರು, ಜುಲೈ 15: ಅಂಚೆ ಇಲಾಖೆ ಮೂಲಕ ಮಾವಿನ ಹಣ್ಣನ್ನು ಜನರಿಗೆ ಪೂರೈಕೆ ಮಾಡಿದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕೆಎಸ್‌ಎಂಡಿಎಂಸಿ) ಈಗ ಎಲ್ಲರಿಗೂ ಕಷಾಯ ಕುಡಿಸಲು ಮುಂದಾಗಿದೆ.
Recommended Video
ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸಾರ್ವಜನಿಕರ ಆರೋಗ್ಯ ವೃದ್ಧಿಗಾಗಿ ಕಷಾಯ ಕುಡಿಸುವುದು ಕರ್ನಾಟಕ ಸರ್ಕಾರದ ಉದ್ದೇಶವಾಗಿದೆ. ಕೊವಿಡ್ 19 ವಿರುದ್ಧ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಇದಾಗಿದ್ದು, ಮನೆ ಮನೆಗೆ ಅಂಚೆ ಇಲಾಖೆ ಮೂಲಕ ತಲುಪಿಸಲು ಕೆಎಸ್‌ಎಂಡಿಎಂಸಿ ಇಚ್ಛಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಸಿ. ಜಿ. ನಾಗರಾಜ್ ಹೇಳಿದ್ದಾರೆ.
ಕಷಾಯ ತಯಾರಿಸಲು ಬೇಕಾದ ಸಿದ್ಧಪದಾರ್ಥಗಳನ್ನು ಒಳಗೊಂಡ 3 ಕೆಜಿಯ ಪ್ಯಾಕೇಜಿಗೆ 600 ರು ವಿಧಿಸಲಾಗಿದೆ. ಇದನ್ನು ಬಳಸಿಕೊಂಡು ಸುಲಭವಾಗಿ ಕಷಾಯ ತಯಾರಿಸಿಕೊಂಡು ಕುಡಿಯಬಹುದು. ಕಷಾಯ ಕಿಟ್ ಬಳಸಲು ಬಯಸುವವರು KSMDMC ಅಧಿಕೃತ ವೆಬ್ ತಾಣದಲ್ಲಿ ಬುಕ್ ಮಾಡಬಹುದು. ಮುಂದಿನ ವಾರದಿಂದ ಕಷಾಯ ಕಿಟ್ ಪೂರೈಕೆ ಆರಂಭವಾಗಲಿದೆ.

ಈ ಹಿಂದೆ 100 ಟನ್ ಗಳಿಗೂ ಅಧಿಕ ಮಾವು ಮಾರಾಟ ಮಾಡಿ ತಕ್ಕಮಟ್ಟಿನ ಯಶಸ್ಸು ಕಂಡಿರುವ KSMDMC ಈಗ ಇದೇ ರೀತಿ ಮಸಾಲೆ ಪದಾರ್ಥ ಬೆಳೆಯುವ ಬೆಳೆಗಾರರಿಗೆ ನೆರವಾಗಲು ಮುಂದಾಗಿದೆ.
ಗಿಡಮೂಲಿಕೆ, ಸಾಂಬಾರು ಪದಾರ್ಥ, ಗಿಡ ಗಂಟೆಗಳನ್ನು ಒಳಗೊಂಡ ಈ ಕಿಟ್ ನಿಂದ ತಯಾರಾಗುವ ಕಷಾಯ ಕೊವಿಡ್ 19 ಹಾಗೂ ವಿಷಯ ಶೀತ ಜ್ವರ, ನೆಗಡಿ, ಕೆಮ್ಮು ಲಕ್ಷಣ ಉಳ್ಳವರ ಪ್ರತಿರೋಧ ಹೆಚ್ಚಿಸಲಿದೆ ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಒಂದೆಡೆ ಡಾ. ಗಿರಿಧರ್ ಕಜೆ ಅವರ ಕೊವಿಡ್ 19 ಔಷಧ ಬಳಕೆ ಹೆಚ್ಚಾಗುತ್ತಿದೆ. ಪತಂಜಲಿ ಸಂಸ್ಥೆಯ ಕೊರೊನಿಲ್ ಬಗ್ಗೆ ನಂಬಿಕೆ ಬಂದಿಲ್ಲವಾದರೂ ಕುತೂಹಲದಿಂದ ಬಳಸುವವರ ಸಂಖ್ಯೆ ಕಡಿಮೆಯಾಗಿಲ್ಲ.












Click it and Unblock the Notifications