Narendra Modi: ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ: ಕನ್ನಡದಲ್ಲಿ ಹೇಳಿದ ಮೋದಿ

ವಿಜಯಪುರ,ಏಪ್ರಿಲ್29:‌ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಹಲವು ಬಾರೀ ಹೇಳಿಕೆಯನ್ನ ನೀಡಿದ್ದು, ಮೋದಿ ಅವರು ಕನ್ನಡದಲ್ಲಿ ಈ ಸಾಲು ಉಚ್ಛರಿಸದಾಗ ಕಾರ್ಯಕರ್ತರಿಂದ ಹರ್ಷೋದ್ಘಾರ ಮೊಳಗಿತು.

ಹೌದು, ವಿಜಯಪುರದ ಸೈನಿಕ ಶಾಲೆಯಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಮಾತನ್ನ ಆರಂಭಿಸಿ, ಪಂಚನದಿಗಳ ನಾಡು ವಿಜಯಪುರದ ಎಲ್ಲ ಜನತೆಗೆ ನಮಸ್ಕಾರಗಳು, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎನ್ನುವ ಸಾಲುಗಳನ್ನು ಕನ್ನಡದಲ್ಲಿ ಹಲವಾರು ಬಾರಿ ಉಚ್ಚರಿಸಿದರು.

Karnataka Polls: PM Narendra Modi speaks in kannada in vijayapura

ನನ್ನ ಕೊನೆಯ ಚುನಾವಣೆ ಮತ ಕೊಡಿ ಎಂದು ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ನಾಯಕರು ಮತ ಕೇಳುತ್ತಿದ್ದಾರೆ, ಆದರೆ ಯುವಕರೇ ಇರಲಿ, ಮಹಿಳೆಯರೇ ಇರಲಿ, ದಲಿತರೇ ಇರಲಿ, ಆದಿವಾಸಿಗಳೇ ಇರಲಿ ಉತ್ಸಾಹಭರಿತ ಬಿಜೆಪಿಗೆ ಮತ ನೀಡಲು ನಿರ್ಧರಿಸಿದ್ದಾರೆ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ರಚನೆಗೆ ನಿರ್ಧರಿಸಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ 100 ರೂ. ಅನುದಾನ ಫಲಾನುಭವಿಗಳಿಗೆ ತಲುಪುವ ಹೊತ್ತಿಗೆ 15 ಪೈಸೆಯಾಗಿರುತ್ತದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಯೊಬ್ಬರು ಗಂಭೀರವಾಗಿ ಹೇಳಿದ್ದರು. ಆದರೆ ಈಗ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಸಂಪೂರ್ಣ ಹಣ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗೆ ತಲುಪುತ್ತಿದೆ.

ಗರೀಬಿ ಹಟಾವೋ ಹೆಸರಿನಲ್ಲಿ ರೂಪಿಸಿದ ಅನೇಕ ಯೋಜನೆಗಳಿಂದ ಏನೂ ಪ್ರಯೋಜನವಾಗಿಲ್ಲ, ಭ್ರಷ್ಟಾಚಾರ ಮಾತ್ರ ಜನರಿಗೆ ಕೊಡುಗೆಯಾಗಿ ಸ್ವೀಕರಿಸಿತು, ಕಾಂಗ್ರೆಸ್ ಪ್ರಧಾನಮಂತ್ರಿ ಹೇಳಿದಂತೆ ಕೇಂದ್ರ ಸರ್ಕಾರದಿಂದ 1 ರೂ. ಬರುತ್ತದೆ ಇಲ್ಲಿಗೆ ಬಂದು ಮುಟ್ಟಲು 15 ಪೈಸೆ ಅಷ್ಟೇ ಬರುತ್ತದೆ, ಶೇ.85 ಅನುದಾನ ಭ್ರಷ್ಟಾಚಾರ, ಪ್ರಧಾನಮಂತ್ರಿಯೊಬ್ಬರು ಇದನ್ನು ಸಾರಿದ್ದರು, ಪಂಚಾಯತನಿಂದ ಪಾರ್ಲಿಮೆಂಟ್‌ವರೆಗೆ ಕಾಂಗ್ರೆಸ್ ಸರ್ಕಾರ ಲೂಟಿಯನ್ನು ತಡೆಗಟ್ಟಲು ಏನೂ ಮಾಡಲಿಲ್ಲ, ಬಡವರ ಕಣ್ಣೀರು ಒರೆಸಲಿಲ್ಲ, ಇಂದಿನ ಪರಿಸ್ಥಿತಿಗೆ ಹೋಲಿಕೆ ಮಾಡಿ ನೋಡಿದಾಗ ಬಡವರ ದೊಡ್ಡ ಪ್ರಮಾಣದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Karnataka Polls: PM Narendra Modi speaks in kannada in vijayapura

ಆದರೆ ಇಂದು ಬಿಜೆಪಿ ಸರ್ಕಾರದ ಸಾರಥ್ಯದಲ್ಲಿ 29 ಲಕ್ಷ ಕೋಟಿ ರೂ. ಹಣವನ್ನು ಬಿಪಿಟಿ ಮೂಲಕ ಯೋಜನಾ ಫಲಾನುಭವಿಗಳಿಗೆ ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಬರುವ 100 ರೂ. ಅನುದಾನ ಪೂರ್ಣಪ್ರಮಾಣದಲ್ಲಿ 100 ರೂ. ಫಲಾನುಭವಿಗಳಿಗೆ ದೊರಕುತ್ತಿದೆ. ಕಾಂಗ್ರೆಸ್ ಈ ಕಾರ್ಯ ಮಾಡಿದ್ದರೆ ಬಡವರ ಹಕ್ಕಿನ ಶೇ.85 ರಷ್ಟು ಹಣ ಗಾಯಬ್ ಆಗುತ್ತಿರಲಿಲ್ಲ, ಅದೇ ಕಾಂಗ್ರೆಸ್ ಸರ್ಕಾರ ಇದ್ದರೆ 24 ಲಕ್ಷ ಕೋಟಿ ರೂ. ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿತ್ತು.

ಡಬಲ್ ಇಂಜಿನ್ ಸರ್ಕಾರ ಇದೇ ಹಣ ಬಳಸಿ ಬಡವರಿಗೆ ಪಡಿತರ ನೀಡುತ್ತಿದೆ, ಕಾಂಗ್ರೆಸ್ ಸರ್ಕಾರ ಅನ್ನದಾತನ ಹೆಸರಿನಲ್ಲಿ ಘೋಷಣೆ ಘೋಷಿಸುತ್ತಿತ್ತು, ಆದರೆ ಬಡ ರೈತರಿಗೆ ಯಾವ ಪ್ರಯೋಜನ ದೊರಕಿಲ್ಲ, ಕಿಸಾನ್ ಸಮ್ಮಾನ ಯೋಜನೆ 1.5 ಲಕ್ಷ ಕೋಟಿ ರೂ. ಕರ್ನಾಟಕಕ್ಕೆ 600 ಕೋಟಿ ರೂ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಈ ಹಣ ಯಾವತ್ತೂ ನಿಮಗೆ ಸೇರುತ್ತಿರಲಿಲ್ಲ ಎಂದು ಗುಡುಗಿದರು.

ಅನ್ನದಾತನ ಸಮಸ್ಯೆಯನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿಲ್ಲ. ಆದರೆ ಬಿಜೆಪಿ ಅನ್ನದಾತನ ಸಮಸ್ಯೆಗಳ ಮೇಲೆ ಅರಿವಿದೆ, ಪಂಚನಾದಿಗಳ ಬೀಡಿದ್ದರೂ ನೀರಾವರಿಗೆ ದೊಡ್ಡ ಪ್ರಯತ್ನಗಳು ನಡೆಯಬೇಕಿದ್ದವೋ ಅಷ್ಟು ಪ್ರಯತ್ನ ಪ್ರಯತ್ನ ನಡೆದಿಲ್ಲ ಅನೇಕ ನೀರಾವರಿ ಯೋಜನೆಗಳ, ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.

ಕಾಂಗ್ರೆಸ್ ಸರ್ಕಾರದ ಅಲಕ್ಷ್ಯದಿಂದ ತೊಂದರೆ ಎದುರಿಸಿದ್ದು ಮಹಿಳೆಯರು. ಮಹಿಳೆಯರ ಸುರಕ್ಷತೆ, ಉದ್ಯೋಗದ ಬಗ್ಗೆ ಚಿಂತೆಯೇ ಮಾಡಿಲ್ಲ. ಡಬಲ್ ಇಂಜನಿನ್ ಸರ್ಕಾರ ಆಯಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ಯೋಜನೆ ಜಾರಿ ಮಾಡಿ ಮಹಿಳೆಯರಿಗೆ ಆರೋಗ್ಯದ ಅಭಯ ನೀಡಿದೆ ಎಂದರು.

ಕಾಯಕ, ದಾಸೋಹದ ಮಾರ್ಗವನ್ನು ಅಣ್ಣ ಬಸವಣ್ಣ ತೋರಿದ್ದಾರೆ. ಬಿಜೆಪಿಯ ವಿಚಾರಧಾರೆಯಾಗಿರುವ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ ಎನ್ನುವ ಉಕ್ತಿಗೆ ಬಸವಣ್ಣನವರ ಆಶಯವೇ ಆಧಾರ, ಅಣ್ಣ ಬಸವಣ್ಣನವರ ಕಾಯಕ-ದಾಸೋಹದ ಪ್ರಭಾವ ಬಿಜೆಪಿ ಎಲ್ಲ ಯೋಜನೆಗಳಲ್ಲಿ ಕಾಣಿಸಿಗುತ್ತಿದೆ, ಬಿಜೆಪಿ ಸರ್ಕಾರ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ ಪ್ರಾತಿನಿಧ್ಯ, ಆರ್ಥಿಕ-ಸಾಮಾಜಿಕ ಸುರಕ್ಷೆ ನೀಡಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+