ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ; ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ
ಬೆಂಗಳೂರು,ಏಪ್ರಿಲ್15: ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ದಳಪತಿಗಳು ಅಳೆದುತೂಗಿ 49 ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ಕಚೇರಿಯಲ್ಲಿ ಘೋಷಿಸಿದರು.
ಇನ್ನೂ ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಹಾಸನ ಟಿಕೆಟ್ ಅನ್ನು ಎಚ್.ಎಸ್. ಪ್ರಕಾಶ್ ಅವರ ಪುತ್ರನಾಗಿರುವ ಸ್ವರೂಪ್ ಪ್ರಕಾಶ್ ಅವರಿಗೆ ನೀಡಲಾಗಿದೆ. ಇನ್ನೂ 49 ಅಭ್ಯರ್ಥಿಗಳ ರಾಜಕಾರಣದಲ್ಲಿ ಬೆಳೆದುಬಂದ ಹಾದಿ ಹಾಗೂ ರಾಜಕೀಯ ಏರಿಳಿತಗಳ ಮಾಹಿತಿ ಇಲ್ಲಿದೆ ನೋಡಿ.

ಕರೂರು ವಿಧಾನಸಭಾ ಕ್ಷೇತ್ರ: ವೈ ಎಸ್ ವಿ ದತ್ತಾ
ವೈ ಎಸ್ ವಿ ದತ್ತ ಸಜ್ಜನ ರಾಜಕಾರಣಿ. ಬಿಎಸ್‍ಸಿ ಪದವೀಧರರಾದ ದತ್ತಾರವರು ಗಣಿತ ಮತ್ತು ಭೌತಶಾಸ್ತ್ರದ ಅದ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದು, 2013 ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದತ್ತ ಅವರು ಕಡೂರು ಕ್ಷೇತ್ರದಿಂದ ಶಾಸನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಿಂದೆ ವಿಧಾನ ಪರಿಶತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಜನಪ್ರತಿನಿಧಿಯಾಗಿ ಎಂಎಲ್‍ಎ, ಎಂಎಲ್ಸಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿಯೂ, ಪಕ್ಷದಲ್ಲಿ ಅಧಿಕೃತ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಡೂರು ಕ್ಷೇತ್ರದಿಂದ 2013 ರಲ್ಲಿ ಶಾಸಕರಾಗಿ ಚುನಾಯಿತರಾದವರು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಸ್ಥಾನ, ಎಂಎಲ್ಎ, ಎಂಎಲ್ಸಿ, ಪಕ್ಷ ವಕ್ತಾರ ಸ್ಥಾನಗಳನ್ನು ಪಡೆದಿದ್ದರು. 2015 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು.

ತಾವು ಇಪ್ಪತ್ತನೇ ವಯಸ್ಸಿನಲ್ಲಿ ಸಮಾಜವಾದಿ ಪಕ್ಷದೊಳಗೆ ಬಂದಿದ್ದು, ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ಮಧ್ಯೆ ಅಸಮಾಧಾನ ಬಂದಾಗ ಜಾತಿ ನೋಡದೆ ಗೌಡರ ಜತೆ ಉತ್ತಮ ಸಂಬಂಧ ಹೊಂದಿದ್ದ ವೈ ಎಸ್ ವಿ ದತ್ತಾ ಅವರು ಮುಂದಿನ ರಾಜಕೀಯ ಜೀವನಕ್ಕಾಗಿ ಜನವರಿ 15 ರಂದು ಜೆಡಿಎಸ್ ಪಕ್ಷವನ್ನ ತೊರೆದು ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಯಾಗಿದ್ದ ವೈ ಎಸ್ ವೈ ದತ್ತ ಅವರಿಗೆ ಕಾಂಗ್ರೆಸ್ ಕರೂಡುರಿನಿಂದ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಮತ್ತೆ ಮರಳಿ ಜೆಡಿಎಸ್ ಪಕ್ಷವನ್ನ ಸೇರ್ಪಡೆಯಾಗಿದ್ದು, ಕಡೂರಿನಿಂದ ಜೆಡಿಎಸ್ ವೈ ಎಸ್ ವಿ ದತ್ತಾ ಅವರನ್ನ ಕಣಕ್ಕಿಳಿಸಿದೆ.
ಹೊಳೆನರಸೀಪುರ: ಹೆಚ್ ಡಿ ರೇವಣ್ಣ
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವಒರ ಪುತ್ರ ಹಾಗೂ ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಶಾಸಕರಾಗಿರುವ ಹೆಚ್ ಡಿ ರೇವಣ್ಣ ಅವರು, 1994 ರಲ್ಲಿ ಹೊಳೆನರಸೀಪುರ ವಿಧಾನಸಭೆ ಸ್ಥಾನವನ್ನು ಗೆದ್ದರು. ನಂತರ 1999 ರಲ್ಲಿ ಮತ್ತೊಮ್ಮೆ ಸೋಲು ಅನುಭವಿಸಿದರು. ಇನ್ನೂ 2004 ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾದರು . ಈ ಬಾರಿ ಅವರು ಧರಂ ಸಿಂಗ್ ಮತ್ತು ಎಚ್‌ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಪಿಡಬ್ಲ್ಯೂಡಿ (ಲೋಕೋಪಯೋಗಿ ಇಲಾಖೆ) ಮತ್ತು ಇಂಧನ ಖಾತೆ ಸಚಿವರಾದರು .
ಎಚ್‌ಡಿ ರೇವಣ್ಣ ಅವರು 9 ವರ್ಷಗಳ ಕಾಲ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷರೂ ಆಗಿದ್ದರು . 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರದಿಂದ ಎಚ್‌ಡಿ ರೇವಣ್ಣ 92,713 ಮತಗಳನ್ನು ಪಡೆದಿದ್ದು, ಇದೀಗ 2023 ರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದಾರೆ.
ಸಕಲೇಶಪುರ: ಹೆಚ್ ಕೆ ಕುಮಾರಸ್ವಾಮಿ
ಸಕಲೇಶಪುರ ವಿಧಾನಸಭಾ ಕ್ಷೇತ್ರ ಹಾಲಿ ಶಾಸಕರಾಗಿರುವ ಹೆಚ್ ಕೆ ಕುಮಾರಸ್ವಾಮಿ ಅವರು ಆರು ಬಾರಿ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ . 2018ರಲ್ಲಿ ಭರ್ಜರಿ ಚುನಾವಣಾ ತಯಾರಿ ನಡೆಸಿದ್ದ ಎಂ ಪಿ ಕುಮಾರಸ್ವಾಮಿ ಅವರು 2023 ರ ವಿಧಾನಸಭಾ ಕ್ಷೇತ್ರಕ್ಕೂ ಸಹ ಜೆಡಿಎಸ್ ಟಿಕೆಟ್ ನೀಡಿ ಕಣಕ್ಕಿಳಿದ್ದು, ಚುನಾವಣಾ ತಯಾರಿ ನಡೆಸುತ್ತಿದ್ದಾರೆ. ಸಕಲೇಶಪುರ ಕ್ಷೇತ್ರದ ಶಾಸಕರಾಗಿದ್ದಾರೆ. ಅಲ್ಲದೇ ಜೆಡಿಎಸ್ ಪಾರ್ಲಿಮೆಂಟರಿ ಬೋರ್ಡ್ ಅಧ್ಯಕ್ಷರಾಗಿದ್ದಾರೆ.
ಇನ್ನೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ಎಂ ಪಿ ಕುಮಾರಸ್ವಾಮಿ ಅವರು, ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ .
ಅರಕಲಗೂಡು: ಎ ಮಂಜು
ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿರುವ ಎ ಮಂಜು ಅವರಿಗೆ ಜೆಡಿಎಸ್ ಅರಕಲಗೂಡಿನಿಂದ ಟಿಕೆಟ್ ನೀಡಿದ್ದು, ಚುನಾವಣಾ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. 1999 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅರಕಲಗೂಡಿನಿಂದ ಶಾಸಕರಾಗಿ ಆಯ್ಕೆಯಾದರು. ನಂತರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ 2008 ಮತ್ತು 2013 ರಲ್ಲಿ ಅರಕಲಗೂಡು ವಿಧಾನಸಭಾ ಸ್ಥಾನಗಳನ್ನು ಗೆದ್ದರು. 2013 ರ ಚುನಾವಣೆಯ ನಂತರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವರಾಗಿದ್ದರು.
2014ರ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ದೇವೇಗೌಡರ ಎದುರು ಸೋತಿದ್ದರು. ನಂತರ ಅವರು ಮತ್ತೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು ಮತ್ತು 2019 ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಸೋಲನ್ನ ಅನುಭವಿಸಿ, ಇದೀಗ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದ್ದಿದ್ದಾರೆ.
ಹಾಸನ: ಸ್ವರೂಪ್ ಪ್ರಕಾಶ್
2018 ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದ ಸ್ವರೂಪ್ ಅವರು 50,342 ಮತಗಳನ್ನ ಪಡೆದಿದ್ದು, ಸೋಲನ್ನ ಅನುಭವಿಸಿದ್ದರು, ಇನ್ನೂ ಈ ಬಾರಿಯೂ ಜೆಡಿಎಸ್ ಹಾಸನ ಕ್ಷೇತ್ರದಿಂದ ಟಿಕೆಟ್ ನೀಡಿದ್ದು, ಚುನಾವಣಾ ತಯಾರಿ ನಡೆಸುತ್ತಿದ್ದಾರೆ.












Click it and Unblock the Notifications