#ByeByeBJP: ಕೊನೆಯ ಹಂತದಲ್ಲಿ ಸೋಶಿಯಲ್ ಮಿಡಿಯಾ ಮೂಲಕ ಕಾಂಗ್ರೆಸ್ ವಾರ್
ಬೆಂಗಳೂರು, ಮೇ 8: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಇನ್ನೇನು ಕೆಲ ಹೊತ್ತಿನಲ್ಲಿ ಅಂತ್ಯಗೊಳ್ಳಲಿದೆ. ಈ ಮಹತ್ವದ ಸಂದರ್ಭದಲ್ಲಿ #ByeByeBJP ಎಂಬ ಹ್ಯಾಶ್‌ಟ್ಯಾಗ್ ಅಡಿ ಕಾಂಗ್ರೆಸ್ ಕ್ಯಾಂಪೇನ್ ಮಾಡುತ್ತಿದೆ. ಈ ಮೂಲಕ ಹಲವು ಮಹತ್ವದ ವಿಚಾರಗಳನ್ನು ಕಾಂಗ್ರೆಸ್ ಹಂಚಿಕೊಂಡಿದೆ.
'ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕವನ್ನು ಕೋವಿಡ್ ವೈರಸ್ಸಿಗಿಂತಲೂ ಕ್ರೂರವಾಗಿ ಪೀಡಿಸಿದ ಬಿಜೆಪಿ ಸರ್ಕಾರದ ಅಂತ್ಯ ಸಮೀಪಿಸಿದೆ. ಕರ್ನಾಟಕಕ್ಕೆ ಕಾಡುತ್ತಿದ್ದ 40% ಕಮಿಷನ್ ಪಿಡುಗು ತೊಲಗಲಿದೆ, ಮುಂದೆ ಕಾಂಗ್ರೆಸ್ ನೇತೃತದಲ್ಲಿದೆ ಕರ್ನಾಟಕ ಪ್ರಗತಿಯತ್ತ ಸಾಗಲಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

'ರಸ್ತೆಗುಂಡಿಗಳಿಗೆ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ 40% ಕಮಿಷನ್ನಿನ ಭ್ರಷ್ಟ ಬಿಜೆಪಿ ಸರ್ಕಾರ ತೊಲಗುವ ಸಮಯ ಬಂದಿದೆ. ಇನ್ಮುಂದೆ ಕಮಿಷನ್ ರಹಿತ, ಭ್ರಷ್ಟಾಚಾರ ರಹಿತ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ. ಕರ್ನಾಟಕದ ಪ್ರತಿಯೊಬ್ಬರ ಕಾಳಜಿಯೂ ಇನ್ಮುಂದೆ ಕಾಂಗ್ರೆಸ್ ಸರ್ಕಾರದ ಹೊಣೆ' ಎಂದು ಕಾಂಗ್ರೆಸ್ ಹೇಳಿದೆ.
'ನಮ್ಮ ಬ್ಯಾಂಕುಗಳು, ನಮ್ಮ ಸಂಸ್ಥೆಗಳು, ನಮ್ಮ ಕೆಎಂಎಫ್, ನಮ್ಮ ನಂದಿನಿ ಎಲ್ಲವೂ ನಮ್ಮ ಅಸ್ಮಿತೆಯ ಸಂಕೇತಗಳು. ಕನ್ನಡಿಗರ ಅಸ್ಮಿತೆಯನ್ನು ಕಾಪಾಡೋಣ. 40% ಸರ್ಕಾರಕ್ಕೆ #ByeByeBJP ಹೇಳೋಣ' ಎಂದು ಕಾಂಗ್ರೆಸ್ ಟೀಕಿಸಿದೆ.

'ಕೊರೊನಾ ಸಮಯದಲ್ಲಿ ಅನುಭವಿಸಿದ್ದು ಸಾಕು. ಹಗರಣಗಳನ್ನು ನೋಡಿದ್ದೂ ಸಾಕು. ಹಗರಣಗಳಿಗೆ ಮುಕ್ತಿ ಹಾಡೋಣ. 40% ಸರ್ಕಾರಕ್ಕೆ #ByeByeBJP ಹೇಳೋಣ' ಎಂದು ಹೇಳಿದೆ.
40% ಕಮಿಷನ್ ತೆಗೆದುಕೊಳ್ಳುವ ಪೇಸಿಎಂ ತೊಲಗಿಸೋಣ
— Karnataka Congress (@INCKarnataka) May 8, 2023
ರಾಜ್ಯವನ್ನು ಪ್ರಗತಿಯ ಹಾದಿಗೆ ಮರಳಿ ತರೋಣ
40% ಸರ್ಕಾರಕ್ಕೆ #ByeByeBJP ಹೇಳೋಣ! pic.twitter.com/UVtvCVmKZe
'40% ಕಮಿಷನ್ ತೆಗೆದುಕೊಳ್ಳುವ ಪೇಸಿಎಂ ತೊಲಗಿಸೋಣ. ರಾಜ್ಯವನ್ನು ಪ್ರಗತಿಯ ಹಾದಿಗೆ ಮರಳಿ ತರೋಣ. 40% ಸರ್ಕಾರಕ್ಕೆ #ByeByeBJP ಹೇಳೋಣ' ಎಂದು ಕಾಂಗ್ರೆಸ್ ಟ್ವೀಟಿಸಿದೆ.
ಉದ್ಯೋಗಕ್ಕೂ ಲಂಚ ಅಥವಾ ಮಂಚ
— Karnataka Congress (@INCKarnataka) May 8, 2023
ಈ ಲಂಚ ಮಂಚದ ಸರ್ಕಾರ ತೊಲಗಿಸಿಸೋಣ
40% ಸರ್ಕಾರಕ್ಕೆ #ByeByeBJP ಹೇಳೋಣ! pic.twitter.com/sQo9kUjKNM

'ಉದ್ಯೋಗಕ್ಕೂ ಲಂಚ ಅಥವಾ ಮಂಚ. ಈ ಲಂಚ ಮಂಚದ ಸರ್ಕಾರ ತೊಲಗಿಸಿಸೋಣ. 40% ಸರ್ಕಾರಕ್ಕೆ #ByeByeBJP ಹೇಳೋಣ' ಎಂದು ಹೇಳಿದೆ.
ಸುಳ್ಳು ಭಾಷಣ ಸಾಕು, ಪೊಳ್ಳು ಭರವಸೆಯೂ ಸಾಕು. ಅಭಿವೃದ್ಧಿಯ ಆಡಳಿತಕ್ಕೆ ಮತ ನೀಡೋಣ. 40% ಸರ್ಕಾರಕ್ಕೆ #ByeByeBJP ಹೇಳೋಣ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ












Click it and Unblock the Notifications