Siddaramaiah: ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಾರೆ; ಒಬ್ಬರೆ ಒಬ್ಬ ಮುಸ್ಲಿಂಗೆ ಟಿಕೆಟ್ ಕೊಟ್ಟಿದಾರಾ?: ಸಿದ್ದರಾಮಯ್ಯ ಪ್ರಶ್ನೆ

ರಾಯಚೂರು, ಏಪ್ರಿಲ್28:‌ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಬಾರೀ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಿದ್ದಾರೆ. ಆದರೆ ಬಿಜೆಪಿ ಟಿಕೆಟ್‌ ಹಂಚಿಕೆಯಲ್ಲಿ ಒಬ್ಬರೆ ಒಬ್ಬ ಮುಸ್ಲಿಂ ,ಕ್ರಿಶ್ಚಿಯನ್‌ಗೆ ಟಿಕೆಟ್ ಕೊಟ್ಟಿದಾರಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗ ಮಾತನಾಡಿದ ಅವರು, ಮುಸ್ಲಿಂರಿಗೆ 14 % ಕ್ರಿಶ್ಚಿಯನ್‌ರಿಗೆ 2% ಟಿಕೆಟ್ ಜನಸಂಖ್ಯೆಯಿದೆ ಅವರಿಗೆ ನಾವು ಟಿಕೆಟ್ ನೀಡಿದ್ದೇವೆ, ಬಿಜೆಪಿಯವರು ಒಬ್ಬರಿಗಾದರೂ ಟಿಕೆಟ್ ನೀಡಿದ್ದೀರಾ ಎಂದು ಪ್ರಶ್ನೆಸಿದ್ದಾರೆ.

Karnataka polls: BJP Is Doing Hate Politics By Removing Reservation Says Siddaramaiah

ಬಿಜೆಪಿಯವರು ದೇಷ್ವದ ರಾಜಕಾರಣ ಮಾಡುತ್ತಾರೆ. ಮುಸ್ಲಿಂರ ಮೀಸಲಾತಿ ತೆಗೆದು ಹಾಕಿದರು ಬಿಜೆಪಿಯವರು ದ್ವೇಷದ ರಾಜಕಾರಣ, ಮತ ಧೃವಿಕರಣ ಮಾಡುತ್ತಿದ್ದಾರೆ. ಸಂಘ ಪರಿವಾರದವರು ಹುಟ್ಟಿದಾಗಿನಿಂದ ಸಮಾಜ ಒಡೆಯುವುದರಲ್ಲಿ ನಿರತರಾಗಿದ್ದಾರೆ. ಒಂದು ಧರ್ಮದವರನ್ನ ಇನ್ನೊಂದು ಧರ್ಮದವರ ಮೇಲೆ ಎತ್ತಿಕಟ್ಟುವುದು ಮಾಡುತ್ತಿದ್ದಾರೆ ಎಂದು ಸಂಘ ಪರಿವಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಇನ್ನೂ ಬಿಜೆಪಿಯವರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂಘ ಪರಿವಾರದ ಮುಖವಾಣಿ ಆರ್ಗನೈಸರ್ ಓದಬೇಕು. ಅಂಬೇಡ್ಕರ್ ಸಂವಿಧಾನದ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾಗುತ್ತೆ. ಸಾವರ್ಕರ್ ಏನ್ ಹೇಳಿದ್ರು, ಗೋಲವಾಲಕರ್ ಏನ್ ಹೇಳಿದ್ದರೆ ಎನ್ನುವುದು ತಿಳಿಯುತ್ತದೆ ಎಂದರು.

Karnataka polls: BJP Is Doing Hate Politics By Removing Reservation Says Siddaramaiah

ಕಾಂಗ್ರೆಸ್ ಒಂದೇ ಇವತ್ತು ಜಾತ್ಯಾತೀತ ಪಕ್ಷ, ಜೆಡಿಎಸ್ ಆ ಕಡೆಗೂ ಇಲ್ಲಾ ಈ ಕಡೆಗೂ ಇಲ್ಲಾ, ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುವವರು. ಜೆಡಿಎಸ್‌ ಪಕ್ಷಕ್ಕೆ ಸಿದ್ಧಾಂತವಿಲ್ಲ, ಬಿಜೆಪಿ ಗೆದ್ದರೆ ಬಿಜೆಪಿ , ಕಾಂಗ್ರೆಸ್ ಗೆದ್ರೆ ಕಾಂಗ್ರೆಸ್ ಬಾಲ ಹಿಡಿತಾರೆ ಎಂದು ಜೆಡಿಎಸ್‌ ವಿರುದ್ದ ವಾಗ್ಧಾಳಿ ನಡೆಸಿದರು.

ಇನ್ನೂ ಸಿ ಟಿ ರವಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ ಅವರು, ಅವನ್ಯಾವನೋ ಸಿಟಿ ರವಿ ಅಂತೆ, ನನ್ನನ್ನ ಸಿದ್ದರಾಮುಲ್ಲಾ ಖಾನ್ ಅಂತ ಕರಿತಾನೆ, ಅವನ್ನ ಅವನ ಊರಲ್ಲಿ ಲೂಟಿ ರವಿ ಅಂತ ಕರಿತಾರೆ, ಜನರ ಭಾವನೆಗಳನ್ನ ಕೆರಳಿಸುವ ಕೆಲಸ ಮಾಡುತ್ತಾರೆ. ಅಮಿತ್ ಶಾ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೇವೆ ಎಂದು ಹೇಳುತ್ತಾರೆ, ಈಗ ಭ್ರಷ್ಟಾಚಾರ ರಾಜ್ಯದಲ್ಲಿ ನಡೆದಿದೆ, ಇದಕ್ಕೆ ಅಮಿತ್‌ ಶಾ ಏನು ಹೇಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಚುನಾವಣೆಯ ಹೊತ್ತಲಿ ಬಿಜೆಪಿಯವರ ಆಟೋಪಗಳನ್ನ ನಂಬಬೇಡಿ. ಬಿಜೆಪಿಯವರು ಜನರ ಆರ್ಶೀವಾದ ಪಡೆದು ಬಂದವರು ಅಲ್ಲ. ಕೋಟ್ಯಾಂತರ ರೂಪಾಯಿ ಖರ್ಚು ‌ಮಾಡಿ ಅಧಿಕಾರ ಹಿಡಿದಿದ್ದಾರೆ, ಈಗ ಲೂಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದರು.

ಬಿಜೆಪಿ ವಿರುದ್ಧ ಹೋರಾಡಲು ಜೆಡಿಎಸ್ ಪಕ್ಷಕ್ಕೆ ಶಕ್ತಿ ಇಲ್ಲ: ರಿಜ್ವಾನ್ ಅರ್ಷದ್

ಬಿಜೆಪಿ ವಿರುದ್ಧ ಹೋರಾಡಲು ಜೆಡಿಎಸ್ ಪಕ್ಷಕ್ಕೆ ಶಕ್ತಿ ಇಲ್ಲ. ಈ ಕಾರಣದಿಂದ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದ ಅವರು, ಶಮ್ಶುಲ್ಲಾ ಖಾನ್ ಜನತಾದಳದ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದು, ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರ ಘಟಕ ಕಟ್ಟಿದ್ದಾರೆ ಎಂದರು.

ರಾಜ್ಯದಲ್ಲಿ ಮತ್ತೆ ಈ ಭ್ರಷ್ಟ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದು ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಬೇಕು. ಪಕ್ಷದ ಅಲ್ಪಸಂಖ್ಯಾತ ಘಟಕದ ಹಾಲಿ ಅಧ್ಯಕ್ಷರೇ ಆ ಪಕ್ಷದ ಮೇಲೆ ನಂಬಿಕೆ ಇಡದಿದ್ದರೆ ಆ ಪಕ್ಷ ಚುನಾವಣೆಯಲ್ಲಿ ಬಿಜೆಪಿಯನ್ನು ಯಾವ ಮಟ್ಟಿಗೆ ಎದುರಿಸಲಿದೆ ಎಂಬುದು ಅರ್ಥವಾಗುತ್ತಿಲ್ಲ. ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಅವರು ತಮ್ಮದೇ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ.

ಈ ಚುನಾವಣೆಯಲ್ಲಿ ಜೆಡಿಎಸ್ ನಿಜವಾಗಿಯೂ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದೆಯೇ ಅಥವಾ ಕಾಟಾಚಾರದ ಹೋರಾಟ ಮಾಡುತ್ತಿದೆಯೇ ಎಂದು ಇಬ್ರಾಹಿಂ ಅವರು ಹೇಳಬೇಕು. ಇವರ ಜತೆ ಆಮ್ ಆದ್ಮೀ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸೊಹೇಲ್ ದಿಲ್ವಾಜಿ ಅವರು ಪಕ್ಷ ಸೇರುತ್ತಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+