Siddaramaiah: ಬಜರಂಗದಳ ವಿವಾದವಲ್ಲ: ನಮಗೆ ಬಹುಮತ ಬರೋದು ಖಚಿತ; ಸರ್ವೆಗಳೇ ಹೇಳ್ತಿದೆ: ಸಿದ್ದರಾಮಯ್ಯ

ಮೈಸೂರು, ಮೇ 11: ಬಜರಂಗದಳ ವಿಚಾರ ಒಂದು ವಿವಾದದ ವಿಚಾರವೇ ಅಲ್ಲ. ನನಗೆ ವಿಶ್ವಾಸ ಇದೆ, ಈ ಬಾರಿ ನಮಗೆ ಬಹುಮತ ಬರುವುದು ಖಚಿತ. ಈಗಾಗಲೇ ಹಲವು ಚುನಾವಣೋತ್ತರ ಸರ್ವೆಗಳೂ ಸಹ ಅದನ್ನೇ ಹೇಳಿವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯದ ಜನತೆಗೆ ಕಾಂಗ್ರೆಸ್‌ ಪಕ್ಷದ ಮೇಲೆ ವಿಶ್ವಾಸವಿದೆ. ನಾನು ಜನರ ನಾಡಿಮಿಡಿತ ಅರ್ಥಮಾಡಿಕೊಂಡಿರೋದು ಸರಿಯಿದೆ. ನಾನೇನು ಫಲಿತಾಂಶದ ನಿರೀಕ್ಷೆ ಮಾಡಿದ್ದೆನೋ ಅದೇ ಫಲಿತಾಂಶ ಬರಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

Siddaramaiah

ವರುಣಾ ಕ್ಷೇತ್ರದಲ್ಲಿ ನನ್ನ ಗೆಲುವು ಸುಲಭ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿಯಿದೆ. ಇಲ್ಲಿ ಬಿಜೆಪಿ ಎಲ್ಲೂ ಕೂಡ ನೇರವಾಗಿ ನಮ್ಮ ಜೊತೆ ಪೈಪೋಟಿ ಇಲ್ಲ. ವರುಣಾ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಸೋಮಣ್ಣ ಅವರ ಕೊಡುಗೆ ಏನು? ಯಾಕೆ ವರುಣಾದ ಜನತೆ ಅವರಿಗೆ ವೋಟ್‌ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಬಿಜೆಪಿಯವರು ಜಾತಿ ಕಾರ್ಡ್ ಪ್ಲೇ ಸೋಮಣ್ಣ ಕಣಕ್ಕಿಳಿಸಿದ್ದಾರೆ. ಅದು ಬಿಟ್ಟರೆ ದುಡ್ಡಿನ ರಾಜಕೀಯ ಮಾಡಿದ್ದಾರೆ. ಅವರು ಏನೇ ಮಾಡಿದರು ನಾನು ಸುಲಭವಾಗಿ ಗೆಲ್ಲುತ್ತೇನೆ, ಜೆಡಿಎಸ್‌ ಪಕ್ದವರು ಸಹ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿದರು.

Siddaramaiah

ಇನ್ನೂ ಕರಾವಳಿ ಭಾಗದಲ್ಲಿ ಈ ಬಾರಿ ನಮ್ಮ ಪಕ್ಷದ ಸ್ಥಾನಗಳು ಹೆಚ್ಚಾಗಲಿದೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅದನ್ನು ಅಪಪ್ರಚಾರ ಮಾಡಿದರು. ಲಿಂಗಾಯತ ನಾಯಕರೆಲ್ಲಾ ಭ್ರಷ್ಟಾಚಾರಿಗಳು ಅಂತ ನಾನೆಲ್ಲಿ ಹೇಳಿದ್ದೆ? ನಾನು ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರಿ ಅಂತ ಹೇಳಿದ್ದೆ. ನನ್ನ ಮಾತನ್ನು ತಿರುಚಿ ಅಪಪ್ರಚಾರ ಮಾಡಿದರು. ನಮ್ಮ ಪಕ್ಷ ಹಾಗೂ ನನ್ನ ವಿರುದ್ದ ವಿನಾಕಾರಣ ಬಿಜೆಪಿ ನಾಯಕರು ಆರೋಪವನ್ನ ಮಾಡುತ್ತಾರೆ. ಇದಕ್ಕೆ ಮೇ 13 ರಂದು ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ರೆಸಾರ್ಟ್ ರಾಜಕೀಯದ ಅವಶ್ಯಕತೆ ಇದೆಯಾ? ನಿಮ್ಮ ಶಾಸಕರನ್ನು ಹೇಗೆ ರಕ್ಷಿಸಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು. ನಾವು ಗೆಲ್ಲುವುದು ಖಚಿತ. ಎಲ್ಲರೂ ಬಹುಮತ ಕೊಡುತ್ತಿರುವಾಗ ಶಾಸಕರ ರಕ್ಷಣೆ ಎಲ್ಲಿಂದ ಬರುತ್ತದೆ? ಯಾಕೆ ಇಂತಹ ಪ್ರಶ್ನೆ ಕೇಳಿ ಸುದ್ದಿ ಹಬ್ಬಿಸುತ್ತೀರಾ? ನೀನು ಬಿಜೆಪಿ ವ್ಯಕ್ತಿನಾ? ನಿನಗೇಕೆ ಇಂತಹ ಅನುಮಾನಗಳು ಬರಬೇಕು? ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್‌ಗೆ ಬಹುಮತ ಇದೆ. ನಾವು ಬಹುಮತದೊಂದಿಗೆ ಸರ್ಕಾರ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

dk shivakumar

ನಮ್ಮ ಪಕ್ಷ 141ಕ್ಕಿಂತ ಹೆಚ್ಚು ಕ್ಷೇತ್ರವನ್ನು ಪಕ್ಷ ಗೆಲ್ಲಲಿದೆ: ಡಿ ಕೆ ಶಿವಕುಮಾರ್‌

ರಾಜ್ಯದ ಎಲ್ಲೆಡೆ ಬದಲಾವಣೆ ಆರಂಭವಾಗಿದೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆ ಘೋಷಣೆ ನಮ್ಮ ಬದ್ಧತೆ, ಇಚ್ಚೆ, ನಮ್ಮ ಪ್ರಣಾಳಿಕೆ. ನಮ್ಮ ಪಕ್ಷ 141ಕ್ಕಿಂತ ಹೆಚ್ಚು ಕ್ಷೇತ್ರವನ್ನು ಪಕ್ಷ ಗೆಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ತಿಳಿಸಿದರು.

ಮೋದಿ ಅವರ ಪ್ರಚಾರದಿಂದ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಉತ್ತರಿಸಿ, ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದ್ದರೆ ಅವರು ಇಷ್ಟು ಓಡಾಡಬೇಕಿತ್ತಾ? ಮೋದಿ ಮುಖ ನೋಡಿ ಮತ ಹಾಕಲು ಮೋದಿ ಬಂದು ಆಡಳಿತ ಮಾಡುತ್ತಾರಾ? ಅವರ ಪಕ್ಕದಲ್ಲಿ ಸಿಎಂ ಬೊಮ್ಮಾಯಿ ಇಲ್ಲ, ಅಭ್ಯರ್ಥಿಯೂ ಇಲ್ಲ. ಎಲ್ಲಾಕಡೆ ಅವರೇ ಇರುತ್ತಾರೆ. ಬೇರೆ ನಾಯಕರು ಬೆಳೆಯಬಾರದೇ?' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+